Sunday, September 8, 2024

Latest Posts

ರಾಧಿಕಾ ಪಂಡಿತ್ ಕಾರ್ಯ ಎಲ್ಲಾರಿಗೂ ಮಾದರಿ

- Advertisement -

www.karnatakatv.net : ನಟಿ ರಾಧಿಕಾ ಪಂಡಿತ್ ತಮ್ಮ ಮನೆಗೆಲಸ ಮಾಡುವ ಗೀತ ಅನ್ನುವವರ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.. ಈ ಲಾಕ್ ಡೌನ್ ಸಮಯದಲ್ಲಿ ಮನೆಗೆಲಸದವರ ಸಮಸ್ಯೆಯೂ ಎದುರಾಗಿದೆ.. ಸಾಮಾನ್ಯ ಜನರಷ್ಟೇ ಎಷ್ಟೋ ಜನ ಸೆಲೆಬ್ರೆಟಿಗಳೂ ಸಹ ಮನೆಗೆಲಸದವರಿಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.. ಕೊರೋನಾ ಸಂಕಷ್ಟದ ಸಮಯದಲ್ಲೂ ಮನೆಗೇ ಬಂದು ಕೆಲಸ ಮಾಡುವ ಸಾಕಷ್ಟು ಜನರಿದ್ದಾರೆ.. ಹಾಗೇ ರಾಧಿಕಾ ಪಂಡಿತ್ ಅವರ ಮನೆಯಲ್ಲೂ ಗೀತಾ ಅವರು ಕೆಲಸ ಮಾಡ್ತಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ಗೀತಾ ಅವರ ಹುಟ್ಟುಹಬ್ಬವಿತ್ತು.. ಹಾಗಾಗಿ ನಟಿ ರಾಧಿಕಾ ಪಂಡಿತ್ ಸ್ವತಃ ತಾವೇ ಕೇಕ್ ತಯಾರಿಸಿ ಗೀತಾ ಅವರ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ರು.. ರಾಧಿಕಾ ಅವರಿಗೆ ಕೇಕ್ ತಯಾರಿಸುವುದು ಬಹಳ ಇಷ್ಟದ ಹವ್ಯಾಸ.. ತಮ್ಮ ಮಗಳು ಐರಾ 18 ತಿಂಗಳು ತುಂಬಿದಾಗ ತಾವೇ ಮಾವಿನ ಹಣ್ಣಿನ ಕೇಕ್ ಮಾಡಿದ್ರು.. ಈಗ ತಮ್ಮ ಮನೆಗೆಲಸದಾಕೆ ಗೀತಾ ಅವರ ಹುಟ್ಟುಹಬ್ಬಕ್ಕೂ ಕೇಕ್ ತಯಾರಿಸಿ ಖುಷಿಪಟ್ಟಿದ್ದಾರೆ..  ಅದರ ಫೋಟೋಗಳನ್ನ ಕೊಂಚ ತಡವಾಗಿ ಈಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.. ಗೀತಾ ಅವರು 8 ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದು ನಮ್ಮ ಮನೆಯ ಸದಸ್ಯರೇ ಆಗಿಹೋಗಿದ್ದಾರೆ.. ಇಂತಹ ಸಂಕಷ್ಟದ ಸಮಯದಲ್ಲೂ ನಮ್ಮ ಕಾಳಜಿ ಮಾಡ್ತಿದ್ದಾರೆ.. ಹೀಗಿರೋವಾಗ ನಾವು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.. ಅವರನ್ನ ನಿರ್ಲಕ್ಷಿಸಿ ಮರೆತುಬಿಡುವುದು ತಪ್ಪು.. ಅವರೂ ನಮಗೆ ಮುಖ್ಯವಾದವರು ಎಂದು ಸಲಹೆ ನೀಡಿದ್ದಾರೆ.. ಮನೆಗೆಲಸದಾಕೆಯ ಮೇಲೆ ಕಾಧಿಕಾರ ಈ ಅಕ್ಕರೆ ಕಂಡು ಅವರ ಅಭಿಮಾನಿ ಗ್ರೇಟ್ ಅಂತ ಮೆಚ್ಚುಗೆ ಸೂಚಿಸ್ತಿದ್ದಾರೆ..

ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss