ಇಂದು ಕಾಂಗ್ರೆಸ್‌ನ 136ನೇ ಸಂಸ್ಥಾಪನಾ ದಿನಾಚರಣೆಯಾಗಿದ್ದು, ಕೇಂದ್ರದ ಎಐಸಿಸಿ ಕಚೇರಿಯಲ್ಲಿ ಪಕ್ಷದ ಧ್ವಜವನ್ನು ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೆಲ್ಫಿ ವಿತ್ ತಿರಂಗಾ ಎಂಬ ಅಭಿಯಾನವನ್ನು ಕೂಡ ಕಾಂಗ್ರೆಸ್ಸಿಗರು ಹಮ್ಮಿಕೊಂಡಿದ್ದಾರೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಸಡೆನ್ ಆಗಿ ವಿದೇಶಕ್ಕೆ ಹಾರಿದ್ದು, ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.



ರಾಹುಲ್ ವೈಯಕ್ತಿಕ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆಂದು ಮಾತ್ರ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಇದರ ಹೊರತಾಗಿ ಮತ್ಯಾವ ಮಾಹಿತಿಯನ್ನ ಕೂಡ ಸುರ್ಜೆವಾಲ ಬಿಟ್ಟುಕೊಟ್ಟಿಲ್ಲ.
ಇನ್ನು ವೈಯಕ್ತಿಕ ವಿದೇಶ ಪ್ರವಾಸ ಅಂದ್ರೆ ಇಟಲಿಯಲ್ಲಿರುವ ತಮ್ಮ ಅಜ್ಜಿಯನ್ನು ನೋಡಲು, ರಾಹುಲ್ ತೆರಳಿರಬೇಕೆಂದು ಅಂದಾಜಿಸಲಾಗಿದೆ. ಹಾಗಾಗಿ ಅವರನ್ನು ನೋಡಲು ಇಂದು ಬೆಳಿಗ್ಗೆ ಖತಾರ್ ಏರ್‌ವೇಸ್ ವಿಮಾನ ಮೂಲಕ ಇಟಲಿಯ ಮಿಲನ್‌ಗೆ ತೆರಳಿದ್ದಾರೆ ಎನ್ನಲಾಗಿದೆ.




