- Advertisement -
ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ, ಲಡಾಕ್ ಗಡಿಯಿಂದ ಚೀನಾವನ್ನ 15 ನಿಮಿಷದಲ್ಲಿ ಓಡಿಸುತ್ತಿತ್ತು ಎಂದಿದ್ದಾರೆ. ಅಲ್ಲದೇ, ಚೀನಾವನ್ನ ಲಡಾಖ್ ಗಡಿಯಿಂದ ಸರಿಸುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಸುಳ್ಳು ಹೇಳಿದ್ದಾರೆ. ದೇಶಭಕ್ತರೆಂದು ಹೇಳುವ ಮೋದಿ, ಚೀನಾ ನಮ್ಮ ಗಡಿಯ ನೆಲವನ್ನ ಆಕ್ರಮಿಸಿಕೊಂಡಿದ್ದನ್ನ ಒಪ್ಪಿಕೊಳ್ಳದೇ, ದೇಶದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದರು.
ಅಲ್ಲದೇ ಕಾಂಗ್ರೆಸ್ ಸರಕಾರ ಬಂದರೆ, ಚೀನಾ ಗಡಿ ದಾಟಿ ಬರದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
- Advertisement -