Monday, September 25, 2023

Latest Posts

ಮೈತ್ರಿ ಬಿಕ್ಕಟ್ಟು-ಸಂಸತ್ ನಲ್ಲಿ ಘೋಷಣೆ ಕೂಗಿದ ರಾಹುಲ್ ಗಾಂಧಿ..!

- Advertisement -

ನವದೆಹಲಿ: ಲೋಕಸಭಾ ಅಧಿವೇಶನದಲ್ಲಿ ರಾಹುಲ್ ಗಾಂಧಿ ರಾಜ್ಯ ಸರ್ಕಾರದ ಬಿಕ್ಕಟ್ಟನ್ನು ವಿರೋಧಿಸಿ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದ್ದು ಕಂಡುಬಂತು.

ರಾಜ್ಯ ಮೈತ್ರಿ ಸರ್ಕಾರವನ್ನು ಪತನಗೊಳಿಸೋ ನಿಟ್ಟಿನಲ್ಲಿ ಬಿಜೆಪಿ ಕೈವಾಡವಿದೆ ಅಂತ ಆರೋಪಿಸಿರೋ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಸಂಸತ್ ನಲ್ಲಿ ಮೊದಲ ಬಾರಿಗೆ ಘೋಷಣೆ ಕೂಗಿದ್ರು. ಸಂಸತ್ ನೊಳಗೆ ಪೋಸ್ಟರ್ ಹಿಡಿದಿದ್ದ ಕಾಂಗ್ರೆಸ್ ಸದಸ್ಯರು ಕರ್ನಾಟಕದಲ್ಲಿ ಬಿಜೆಪಿ ನೆಡೆಸುತ್ತಿರೋ ಶಿಕಾರಿ ರಾಜಕೀಯವನ್ನು ಕೂಡಲೇ ನಿಲ್ಲಿಸಬೇಕು ಅಂತ ಸ್ಪೀಕರ್ ಓಂ ಬಿರ್ಲಾರೆದುರು ಆಕ್ರೋಶ ಹೊರಹಾಕಿದ್ರು. ಅಲ್ಲದೆ ಪ್ರಜಾಪ್ರಭುತ್ವವನ್ನು ಕಾಪಾಡೋ ಜವಾಬ್ದಾರಿ ನಿಮ್ಮದು, ಸರ್ವಾಧಿಕಾರಿ ಧೋರಣೆ ಅಂತ್ಯ ಮಾಡಿ ಅಂತ ಘೋಷಣೆ ಕೂಗಲಾರಂಭಿಸಿದ್ರು. ಮಧ್ಯಾಹ್ನದ ವೇಳೆಗೆ ಲೋಕಸಭೆಗೆ ಎಂಟ್ರಿಕೊಟ್ಟ ರಾಹುಲ್ ಗಾಂಧಿ ಕೂಡ ಇತರೆ ಸದಸ್ಯರೊಂದಿಗೆ ಘೋಷಣೆಗಳನ್ನು ಕೂಗತೊಡಗಿದ್ರು.

ಇನ್ನು ಸಂಸತ್ ನೊಳಗೆ ಪೋಸ್ಟರ್ ತಂದಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಕಾಂಗ್ರೆಸ್ ಸದಸ್ಯರಿಗೆ ಎಚ್ಚರಿಕೆ ನೀಡಿದ್ರು. ಆದ್ರೂ ಕೂಡ ರಾಹುಲ್ ಮತ್ತಿತರ ಕಾಂಗ್ರೆಸ್ ಸದಸ್ಯರು ಬಿಜೆಪಿಯ ನಡೆ ಬಗ್ಗೆ ಘೋಷಣೆಗಳನ್ನು ಕೂಗುವಲ್ಲಿ ನಿರತರಾದ್ರು.

ಆಧಾರ್ ಕಾರ್ಡ್ ಹೊಸ ಆದೇಶ. ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=71ap8z5mGIA
- Advertisement -

Latest Posts

Don't Miss