Raichur Hutti: ಪ್ರತಿದಿನ ಸಾಕಷ್ಟು ಚಿನ್ನವನ್ನು ಹೊತೆಗೆಯುವ ಹಟ್ಟಿ ಚಿನ್ನದ ಗಣಿ 1947 ರ ಜಯಲಯ 8 ರಂದು ಹೈದರಾಬಾದ್ ಚಿನ್ನದ ಗಣಿ ಎಂದು ನೊಂದಣಿಯಾಗಿರುವ ರಾಯಚೂರು ಜಿಲ್ಲೆಯ ಹೆಮ್ಮೆಗೆ ಪಅತ್ರವಾಗಿರುವ ಹಟ್ಟಿ ಚಿನ್ನದ ಗಣಿ ಇಂದಿಗೆ 76 ವರ್ಷ ಪೂರೈಸಿ 76 ನೆ ವರ್ಷದ ಆಚರಣೆ ಪಾತ್ರವಾಗಿದೆ.
ರಾಜ್ಯ ಸರ್ಕಾರದ ಒಡೆತನಕ್ಕೆ ಒಳಪಟ್ಟಿರುವ ಹಟ್ಟಿಚಿನ್ನದ ಗಣಿಯಲ್ಲಿ 4200 ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತಿದ್ದಾರೆ.ದಿನವೊಂದಕ್ಕೆ ಮೂರು ಶಿಫ್ಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ಒಂದು ಶಿಫ್ಟ್ ಗೆ 300 ಕಾರ್ಮಿಕರು ಒಳ ಹೋಗುತ್ತಾರೆ.
ದಿನಕ್ಕೆ ಸರಾಸರಿ 3.85 ಕೆಜಿ ಚಿನ್ನವನ್ನು ಕಾರ್ಮಿಕರು ಹೊರ ತೆಗೆಯುತ್ತಾರೆ.ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೂ ಹಲವಾರು ಏಳು ಬೀಳುಗಳನ್ನು ಕಂಡಿರುವ ಗಣಿ ಕಂಪನಿ ಒಂದೊಂದು ಸಾರಿ ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲದ ಸ್ಥಿತಿಗೆ ತಲುಪಿದೆ.1998ರಲ್ಲಿ ಗಣಿ ಕಂಪನಿ ವಿವಿಧ ಮೂಲಗಳಿಂದ ಸಾಲ ಪಡೆದರೂ ಸಂಬಳ ಕೊಡಲು ಆಗದಿದ್ದಾಗ ಬೆಂಗಳೂರಿನಲ್ಲಿರುವ ನೊದಾಯಿತ ಗಣಿ ಕಂಪನಿಯನ್ನೇ ಮಾರಾಟ ಮಾಡಿ ಸಂಬಳ ನೀಡಿದ ಉದಾಹರನೆ ಇದೆ ಎಂಬುದು ಹಿರಿಯ ಕಾರ್ಮಿಕರ ಮಾತು.
ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಇದಕ್ಕೂ ಇದೆ ಆಧ್ಯಾತ್ಮಿಕ ಕಾರಣ..