Raichur : ಅಕ್ರಮ ಸೇಂದಿ ಸಾಗಾಟ ನಾಲ್ವರ ಬಂಧನ..!

ರಾಯಚೂರು : ಇಲ್ನೋಡಿ ಹೀಗೆ ಸಾಲಾಗಿ ಇಟ್ಟಿರೊ ಹೆಂಡ. ಹೆಂಡದ ಮುಂದೇ ಅದೇನೋ ಸಾಧನೆ ಮಾಡಿರೋರ ಹಾಗೇ ಎದೆಯುಬ್ಬಿಸಿ ಕುಳಿತಿರೊ ಕಿರಾತಕರು.ಇವ್ರೆಲ್ಲಾ, ಕಲಬೆರಿಕೆ ಸೇಂದಿ ದಂಧೆಯ ಮಾಸ್ಟರ್ ಮೈಂಡ್ ಗಳು. ಸದ್ಯ ಇದೇ ಹೆಂಡ ಮಾರೋ ತಂಡಗಳು ರಾಯಚೂರು ಅಬಕಾರಿ ಅಧಿಕಾರಿಗಳ (Raichur Excise Officer) ಖೆಡ್ಡಾಗೆ ಬಿದ್ದಿದ್ದಾರೆ. ಹೌದು ರಾಯಚೂರು (raichur) ಜಿಲ್ಲೆಯಾದ್ಯಂತ ಕಲಬೆರಿಕೆ ಸೇಂದಿ‌ ಹಾಗೂ ಸಿಎಚ್ ಪೌಡರ್ (CH Powder) ನಿಂದ ತಯಾರಿಸೊ ಹೆಂಡ ಹೆಚ್ಚಾಗಿ ಸರಬರಾಜು ಆಗ್ತಿದೆ. ಇದೇ ಕಾರಣಕ್ಕೆ ಕಳೆದೊಂದು ತಿಂಗಳಿನಿಂದ ರಾಯಚೂರು ಅಬಕಾರಿ ಇಲಾಖೆ (Raichur Excise Department) ಅಧಿಕಾರಿಗಳು ವಿಶೇಷ ತಂಡಗಳ ಮೂಲಕ ಕಾರ್ಯಾಚರಣೆಗಿಳಿದಿದ್ರು. ಹೀಗೆ ನಡೆದ ಬಿಗ್ ಆಪರೇಶನ್ ನಲ್ಲಿ ಕಳೆದ ಐದು ದಿನಗಳಲ್ಲಿ ರಾಯಚೂರು ನಗರ ಹಾಗೂ ಗ್ರಾಮೀಣ ಭಾಗಗಳ ಒಟ್ಟು‌15 ಕಡೆ ದಾಳಿ ನಡೆಸಿದ್ದಾರೆ. ಈ ಪೈಕಿ 6 ಕೇಸ್ ದಾಖಲಿಸಿಕೊಂಡು(6 Documenting the Case) ,9 ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಅಬಕಾರಿ ಇಲಾಖೆ ಅಧಿಕಾರಿಗಳು ಒಟ್ಟು 10 ಲಕ್ಷ ಮೌಲ್ಯದ 41 ಕೆಜಿ ಸಿಎಚ್ ಪೌಡರ್, 150 ಲಿಟರ್ ಕಲಬೆರಿಕೆ ಸೇಂದಿ, 3 ಬೈಕ್ ಹಾಗೂ ಒಂದು ಕಾರು ಜಪ್ತಿ ಮಾಡಿದ್ದಾರೆ.

ಹೌದು ರಾಯಚೂರು ಜಿಲ್ಲೆಯಲ್ಲಿ ಕಲಬೆರಿಕೆ ಸೇಂದಿ ದಂಧೆ ತಾಂಡವವಾಡ್ತಿರೋದಕ್ಕೆ ಕಾರಣವೂ ಇದೆ. ಜಿಲ್ಲೆಯಾದ್ಯಂತ ಕಾರ್ಮಿಕ ವರ್ಗದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತ ಜನರೇ ಕಲಬೆರಿಕೆ ಸೇಂದಿ ದಂಧೆಕೋರರಿಗೆ ಟಾರ್ಗೆಟ್. ಆಂದ್ರ, ತೆಲಂಗಾಣದಿಂದ ಸೇಂದಿ ತಂದು,ಇಲ್ಲಿ ನಿಷೇಧಿತ ಡೇಂಜರಸ್ ಕೆಮಿಕಲ್‌ ಸಿಎಚ್ ಪೌಡರ್ (Banned Dangerous Chemical CH Powder) ಮಿಶ್ರಣ ಮಾಡಿ,ಕಲಬೆರಿಕೆ ಮಾಡ್ತಾರೆ. ನಂತರ ಕಡಿಮೆ ಬೆಲೆಗೆ ಮಾರಾಟ ಮಾಡ್ತಾರೆ. ಇಲ್ಲಿ ಆರೋಪಿಗಳ ಪೈಕಿ ಕುಟುಂಬಸ್ಥರೇಲ್ಲಾ ದಂಧೆಯಲ್ಲಿ ತೊಡಗ್ತಾರೆ. ಈ ಎರಡು ಪ್ರತ್ಯೇಕ ಕೇಸ್ ಗಳಲ್ಲೂ ತೆಲಂಗಾಣ ಮೂಲದ ತಂದೆ ಯಂಕಣಗೌಡ ಹಾಗೂ ಆತನ ಮಗ ಶಿವರಾಜ್, ಹಾಗೂ ರಾಯಚೂರು ಮೂಲದ ತಂದೆ ನರಸರಾಜು ಹಾಗೂ ಮಗ ಮುಕುಂದ ಅನ್ನೋ ತಂದೆ ಮಕ್ಕಳನ್ನು ಅರೆಸ್ಟ್ ಮಾಡಲಾಗಿದೆ. ಬೇಸಿಗೆಯಲ್ಲೇ ಅತೀ ಹೆಚ್ಚು ಡಿಮ್ಯಾಂಡ್ ಇರೋ ಕಾರಣಕ್ಕೆ ಸೇಂದಿ ದಂಧೆ ಈಗ ಆಕ್ಟಿವ್ ಆಗಿದೆ. ಸಾಕಷ್ಟು ವರ್ಷಗಳಿಂದ ಪೊಲೀಸರು ಹಾಗೂ ಅಬಕಾರಿ ಇಲಾಖೆ ರಾಯಚೂರು ಜಿಲ್ಲೆಯಲ್ಲಿ ಎಷ್ಟೇ ಹರಸಾಹಸ ಪಟ್ರ್ಟೂ, ಈ ಕಲಬೆರಿಕೆ ಸೇಂದಿ ದಂಧೆಗೆ ಕಡಿವಾಣ ಹಾಕುತ್ತಲೇ ಇದ್ದಾರೆ. ಆದ್ರೆ ಅತೀ ಕಡಿಮೆ ಬೆಲೆಗೆ ಕಿಕ್ಕೇರಿಸಿಕೊಳ್ಳಬಹುದು ಅಂತ ಜನ ಇದೇ ಕಲಬೆರಿಕೆ ಹೆಂಡಕ್ಕೆ ದಾಸರಾಗ್ತಿರೋದು ದುರಂತವೇ ಸರಿ.

About The Author