Sunday, September 8, 2024

Latest Posts

ಹುಬ್ಬೇರುವಂತೆ ಮಾಡಿದ ರಾಯಚೂರು ರೈತರ ಸಾಹಸ…!

- Advertisement -

www.karnatakatv.net : ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಕೇವಲ ಹತ್ತೇ ತಾಸಿನಲ್ಲಿ 16 ಎಕರೆ ಜಮೀನನ್ನು  ಕುಂಟೆ ಹೊಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ತಾಲ್ಲೂಕಿನ ಯಕ್ಲಾಸಪೂರದ ತಮ್ಮ ಜಮೀನಿನಲ್ಲಿ ಎರಡು ಎತ್ತುಗಳ ನೆರವಿನಿಂದ  ವೀರೇಶ್, ಆಂಜನೇಯ ಸೇರಿದಂತೆ ಮತ್ತೋರ್ವ ರೈತ ಈ ಸಾಹಸ ಮಾಡಿದ್ದು, ಈ ಮೂಲಕ  ಮನಸ್ಸಿದ್ದರೆ ಮಾರ್ಗ ಅನ್ನೋದನ್ನ ಸಾಬೀತು ಪಡಿಸಿದ್ದಾರೆ.

 ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಅವಧಿಯಲ್ಲಿ ಕುಂಟೆ ಹೊಡೆಯುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ರೈತರ ಈ ಸಾಹಸ ಮತ್ತಷ್ಟು ಮಂದಿ ಅನ್ನದಾತರಿಗೆ ಮಾದರಿಯಾಗಿದೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ-ರಾಯಚೂರು

- Advertisement -

Latest Posts

Don't Miss