ವರುಣನ ಆರ್ಭಟಕ್ಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ನಲುಗಿ ಹೋಗಿರೋದು ಗೊತ್ತೇ ಇದೆ. ಮೋದಿ ತವರು ರಾಜ್ಯ ಗುಜರಾತ್ನಲ್ಲೂ ಅಸ್ನಾ ಚಂಡಮಾರುತ ಪರಿಣಾಮ ಮಳೆಯಾಗಗುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಕಳೆದ ಒಂದು ವಾರದಿಂದ ಬೆಂಬಿಡದೇ ಸುರಿಯುತ್ತಿರೋ ಧಾರಾಕಾರ ಮಳೆಗೆ, ಎಲ್ಲಾ ಜಲಾಶಯಗಳು ಉಕ್ಕಿ ಹರಿಯುತ್ತಿವೆ.
ಪ್ರವಾಹದಿಂದಾಗಿ 55,000ಕ್ಕೂ ಹೆಚ್ಚು ಜನರು ಮಳೆಯಿಂದಾಗಿ ನಿರಾಶ್ರಿತರಾಗಿದ್ದು, ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. 15000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಜನರು ಕತ್ತಲಲ್ಲಿ ರಾತ್ರಿ ಕಳೆಯುವಂತಾಗಿದೆ. ಸೌರಾಷ್ಟ್ರ, ಕಛ್, ಭರೂಚ್, ಮೊರ್ಬಿ, ದ್ವಾರಕಾ, ವಲ್ಸಾದ್, ಆನಂದ್, ನರ್ಮದಾ, ದಾಹೋಡ್ ನಗರಗಳಲ್ಲಿ 50 ವರ್ಷಗಳಲ್ಲೇ ಕಂಡು ಕೇಳರಿಯದಷ್ಟು ಮಳೆಯಾಗಿದೆ. ವಡೋದರಾ, ಅಹಮದಾಬಾದ್ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಜನರು ಪರದಾಡುವಂತಾಗಿದೆ.
ಗುಜರಾತ್ನಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ದುರ್ಘಟನೆಗಳು ಸಂಭವಿಸಿದ್ದು, 50ಕ್ಕೂ ಹೆಚ್ಚು ಜನರು ಪ್ರಾಣಬಿಟ್ಟಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 1200 ಜನರನ್ನು ರಕ್ಷಣೆ ಮಾಡಲಾಗಿದೆ. ಗುಜರಾತ್ನಲ್ಲಿ ಈ ಬಾರಿ ಶೇ.55ರಷ್ಟು ಮಳೆ ಹೆಚ್ಚಾಗಿರೋ ಪರಿಣಾಮ, ಎಲ್ಲಾ ನದಿಗಳು, ಜಲಾಶಯಗಳು ಉಕ್ಕಿಹರಿಯುತ್ತಿವೆ. ಗುಜರಾತ್ನ ಜೀವನಾಡಿಯಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನಲ್ಲಿ ಶೇ.86ರಷ್ಟು ನೀರು ಸಂಗ್ರಹವಾಗಿದೆ. ಒಟ್ನಲ್ಲಿ ಮೋದಿ ತವರು ರಾಜ್ಯದಲ್ಲಿ ವರುಣ ಅಬ್ಬರಿಸಿ ಬೊಬ್ಬಿಯುತ್ತಿದ್ದು, ಜನ ಜೀವನ ಅಕ್ಷಶಃ ಅಸ್ತವ್ಯಸ್ತಗೊಂಡಿದೆ.