Telangana: ರಾತ್ರಿ ರಸ್ತೆಯಲ್ಲಿ ಮಫ್ತಿಯಲ್ಲಿ ನಿಂತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ 40 ಪುರುಷರಿಂದ ಕಿರುಕುಳ

Telangana: ರಾತ್ರಿ ವೇಳೆ ಕೆಲ ವೇಶ್ಯೆಯರು ರಸ್ತೆ ಬದಿ ನಿಲ್ಲುವುದನ್ನು ನೀವು ನೋಡಿರಬಹುದು. ಅಂಥವರ ಬಳಿ ಹಲವು ಪುರುಷರು ಬಂದು ಕಿರುಕುಳ ನೀಡುತ್ತಾರೆ. ವೇಶ್ಯೆಯರು ಜೀವನ ನಡೆಸಲು ಈ ರೀತಿ ಮಾಡಿದರೂ ಕೂಡ, ಅವರಿಗೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ.

ಹಾಗಾಗಿ ಮಹಿಳೆಯರ ರಕ್ಷಣೆಗೆ ಕ್ರಮ ಕೈಗ“ಂಡ ಮಹಿಳಾ ಐಪಿಎಸ್ ಅಧಿಕಾರಿ ಬಿ.ಸುಮತಿ, ನಿನ್ನೆ  ತೆಲಂಗಾಣದ ರಸ್ತೆಯಲ್ಲಿ ರಾತ್ರಿ ವೇಳೆ ಮಫ್ತಿಯಲ್ಲಿ ನಿಂತಿದ್ದರು. ಈ ರೀತಿ ನಿಂತು ವೇಶ್ಯೆಯರಿಗೆ ಮತ್ತು ಬಸ್, ವಾಹನಕ್ಕಾಗಿ ಕಾಯುವ ಇತರ ಮಹಿಳೆಯರು ಯಾವ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಅನ್ನೋದನ್ನು ಸುಮತಿ ಚೆಕ್ ಮಾಡಿದ್ದಾರೆ.

ಈ ವೇಳೆ ಸುಮತಿ ಬಳಿ ಆಗಾಗ ಬಂದ 40 ಪುರುಷರು, ಕಿರುಕುಳ ನೀಡಿದ್ದಾರೆ. ಬೆಲೆ ಎಷ್ಟು ಎಂದು ಕೇಳುವುದು ಸೇರಿ ಹಲವು ಅಸಭ್ಯ ವರ್ತನೆ ತೋರಿದ್ದಾರೆ. ಇವರನ್ನೆಲ್ಲ ಪೋಲೀಸ್ ಸ್ಟೇಶನ್‌ಗೆ ಕರೆದು ಬುದ್ದಿ ಹೇಳಲಾಗಿದೆ. ಅಲ್ಲದೇ, ಮಹಿಳೆಯರ ಜತೆ ಹೇಗೆ ವರ್ತಿಸಬೇಕು ಎಂದು ಕೌನ್ಸಲಿಂಗ್ ಮಾಡಲಾಗಿದೆ. ಸುಮತಿ ಅವರು ಆಗಾಗ ಮಫ್ತಿಯಲ್ಲಿ ಇಂಥ ಕಾರ್ಯಾಚರಣೆ ಮಾಡುತ್ತಿರುತ್ತಾರಂತೆ.

About The Author