Saturday, June 14, 2025

Latest Posts

ಮಳೆಗೆ ಆಹುತಿಯಾದ ಫೈನಲ್ ಕದನ : ಭಾರತ, ದ.ಆಫ್ರಿಕಾ ಸರಣಿ ಸಮಬಲ 

- Advertisement -

ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೆ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ 2-2 ಅಂತರದಿಂದ ಸರಣಿ ಸಮಬಲ ಕಂಡಿದೆ.

ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಟಿ20 ಕದನ ಮಳೆಗೆ ಆಹುತಿಯಾಯಿತು. ಭಾರೀ ಕುತೂಹಲ ಕೆರೆಳಿಸಿದ್ದ ಪಂದ್ಯ ವರುಣನ ಅವಕೃಪೆಗೆ ಕಾರಣವಾಗಿ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಯಿತು.

ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ಮೋಡ ಆವರಿಸಿತ್ತು. ಸಂಜೆ 7 ಗಂಟೆ ಸಮಯದಲ್ಲಿ ತುಂತುರು ಮಳೆ ಸುರಿಯಿತು.7.15ರ ವೇಳೆಗೆ ಮಳೆ ನಿಂತು ಹೋಗಿದ್ದರಿಂದ ಪಂದ್ಯ ಪಂದ್ಯ ಆರಂಭಕ್ಕೆ ಸಿದ್ಧತೆ ನಡೆದವು.

ಪಂದ್ಯವನ್ನು 19 ಓವರ್‍ಗೆ ಇಳಿಸಲಾಯಿತು.ಟಾಸ್ ಗೆದ್ದ ದ.ಆಫ್ರಿಕಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತು.

ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ 15, ಋತುರಾಜ್ ಗಾಯಕ್ವಾಡ್ 10 ರನ್ ಗಳಿಸಿದರು.  ನಾಲ್ಕನೆ ಓವರ್‍ನ ಮೂರನೆ ಎಸೆತದ ವೇಳೆ ಮತ್ತೆ ಜೋರಾಗಿ ಮಳೆ ಸುರಿಯಿತು. ನಂತರ ಮಳೆ ಸುರಿದಿದ್ದರಿಂದ ಪಂದ್ಯವನ್ನು ರದ್ದು ಮಾಡುವ ನಿರ್ಧಾರಕ್ಕೆ ಬರಲಾಯಿತು. ಭಾರತ 3.3 ಓವರ್‍ಗಳಲ್ಲಿ  2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತು.

ಐರ್ಲೆಂಡ್ ಸರಣಿ ಆಡಲು ತೆರೆಳುವ ತಂಡದ ಆಟಗಾರರಿಗೆ ಬಿಸಿಸಿಐ ಮೂರು ದಿನಗಳ ರಜೆ ನೀಡಿದೆ. ಆದರೆ ಕೋಚ್ ರಾಹುಲ್ ದ್ರಾವಿಡ್, ರಿಷಬ್ ಪಂತ್  ಹಾಗೂ ಶ್ರೇಯಸ್ ಅಯ್ಯರ್ ಇಂದು ಲಂಡನ್ ಪ್ರವಾಸಕೈಗೊಳ್ಳುತ್ತಿದ್ದಾರೆ.

ಆಟಗಾರರಿಗೆ ಮೂರು ದಿನ ವಿಶ್ರಾಂತಿ

ಐರ್ಲೆಂಡ್ ಟಿ20 ಸರಣಿಗೆ ಆಯ್ಕೆಯಾಗಿರುವ ಎಲ್ಲಾ ಆಟಗಾರರಿಗೆ  ಮನೆಗೆ ಹೋಗಲು ಮೂರು ದಿನಗಳ ಕಾಲ  ವಿಶ್ರಾಂತಿ ನೀಡಲಾಗಿದೆ. ಆದರೆ ಕೋಚ್ ರಾಹುಲ್ ದ್ರಾವಿಡ್, ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಇಂದು ಲಂಡನ್‍ಗೆ ಪ್ರಯಾಣ ಬೆಳಸಲಿದ್ದಾರೆ. ಕಳೆದ ಐಪಿಎಲ್‍ನಿಂದ ಬಿಡುವಿಲ್ಲದೇ ಕ್ರಿಕೆಟ್ ಆಡಿದ್ದು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

 

 

 

 

 

- Advertisement -

Latest Posts

Don't Miss