Wednesday, July 30, 2025

Latest Posts

ಬಾಲಿವುಡ್​ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ

- Advertisement -

ನಟ, ನಿರ್ದೇಶಕ, ಡೈಲಾಗ್​ ರೈಟರ್​ ರಾಜ್​ ಬಿ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ಗೆ ಹಾರಿದ್ದಾರೆ. ಯಸ್​, ಇತ್ತೀಚೆಗಷ್ಟೇ ಮಾಲಿವುಡ್​ನಲ್ಲಿ ತಮ್ಮ ನಟನೆಯಿಂದ ಎಲ್ಲರಿಗೂ ಮೋಡಿ ಮಾಡಿ, ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ರಾಜ್​ಗೆ ಪರಭಾಷೆಯ ಸಿನಿಮಾಗಳು ಕೈ ಬೀಸಿ ಕರೆಯುತ್ತಿದ್ದು, ಬಾಲಿವುಡ್​​ನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ರಾಜ್​ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನ ನಿರ್ದೇಶಕ ಅನುರಾಗ್ ಕಶ್ಯಪ್ ಹಾಡಿ ಹೊಗಳಿದ್ದರು. ರಾಜ್​ ಶೆಟ್ಟಿ ನನ್ನ ಫೇವರೇಟ್​ ಡೈರೆಕ್ಟರ್ ಅಂಥ ಹೇಳಿದ್ರು. ಆ ಸಿನಿಮಾಗೆ 4.5 ಸ್ಟಾರ್​ ರೇಟಿಂಗ್​ ಕೂಡ ನೀಡಿದ್ದರು. ಸದ್ಯ ಅನುರಾಗ್​ ಕಶ್ಯಪ್​ ಹೊಸ ಸಿನಿಮಾ ಶುರು ಮಾಡಲಿದ್ದು, ಮಲಯಾಳಂನ ನಟ ಜೋಜು ಕೂಡ ಈ ಸಿನಿಮಾದಲ್ಲಿದ್ದಾರೆ. ಅಷ್ಟೇ ಅಲ್ಲದೆ ಬಾಬಿ ಡಿಯೋಲ್ ಕೂಡ ಈ ಸಿನಿಮಾದಲ್ಲಿದ್ದಾರೆ. ಇಷ್ಟೆಲ್ಲಾ ಸ್ಟಾರ್ಸ್ ಇರುವ ಸಿನಿಮಾದಲ್ಲಿನಟಿಸಲು ರಾಜ್​ ಬಿ ಶೆಟ್ಟಿಗೆ ಅವಕಾಶ ಸಿಕ್ಕಿದ್ದು ನಟಿಸಲು ಸಜ್ಜಾಗಿದ್ದಾರೆ.


ಇನ್ನು ಅನುರಾಗ್ ಕಶ್ಯಪ್ ನಿರ್ದೇಶನದ ಈ ಸಿನಿಮಾದಲ್ಲಿ ರಾಜ್​ ಬಿ ಶೆಟ್ಟಿ ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ. ರಾಜ್ ಶೆಟ್ಟಿ ಅವರು ಅತಿಥಿ ಪಾತ್ರ ಮಾಡುತ್ತಿದ್ದು, ಜಸ್ಟ್ ಹೀಗೆ ಕಾಣಿಸಿಕೊಂಡು ಹಾಗೆ ಮರೆಯಾಗೊ ಪಾತ್ರವಲ್ಲ. ಇನ್ನೂ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿರುವ ರಾಜ್, ನಾನು ಅನುರಾಗ್ ಕಶ್ಯಪ್ ಸಿನಿಮಾ ನೋಡುತ್ತಾ ಬೆಳೆದವನು. ನನಗೆ ಅವರ ಸಿನಿಮಾ ಅಂದರೆ ತುಂಬಾ ಇಷ್ಟ ಎಂದಿದ್ದಾರೆ. ಅವರು ನನ್ನ ಆಪ್ತರು ಕೂಡ ಹೌದು. ಚಿತ್ರದಲ್ಲಿ ಒಂದು ಪಾತ್ರ ಇದೆ ಮಾಡ್ತೀಯಾ ಅಂತ ಅವರು ಕೇಳಿದರು. ನಾನು ಒಪ್ಪಿದೆ. ಇನ್ನು ಸಿನಿಮಾದ ಹೆಸರಿನ ಜೊತೆಗೆ ಉಳಿದ ವಿವರವನ್ನ ಆದಷ್ಟು ಬೇಗ ತಿಳಿಸುತ್ತೇನೆ ಎಂದಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇದೇ ತಿಂಗಳು ಆಗಸ್ಟ್ 21ರಿಂದ ಶುರುವಾಗಬಹುದು ಎನ್ನುವ ಗಾಳಿ ಸುದ್ದಿ ಕೇಳಿ ಬರುತ್ತಿದೆ.

ಸದ್ಯ ರಾಜ್​ ಬಿ ಶೆಟ್ಟಿ , ಡಾ.ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅಭಿನಯದ, ಅರ್ಜುನ್ ಜನ್ಯ ನಿರ್ದೇಶನದ ’45’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ನಲ್ಲಿ ನಮ್ಮ ಸ್ಯಾಂಡಲ್​ವುಡ್​ನ ನಟ ಬಾಲಿವುಡ್​ನವರೆಗೂ ತಮ್ಮ ನಟನೆಯ ಪ್ರತಿಭೆಯಿಂದ ಎಲ್ಲರ ಗಮನ ಸೆಳೆಯುವಂತೆ ಮಾಡಿರುವುದು ಹೆಮ್ಮೆಯ ವಿಷಯ.

*ಸ್ವಾತಿ.ಎಸ್.

- Advertisement -

Latest Posts

Don't Miss