Sunday, October 5, 2025

Latest Posts

ಸುರ್ಜೇವಾಲಾಗೆ ರಾಜಣ್ಣ ಡೋಂಟ್ ಕೇರ್‌ : ಸುರ್ಜೇವಾಲಾಗೆ ಸಿದ್ದು ಬಣ ಸೆಡ್ಡು!

- Advertisement -

ಕಾಂಗ್ರೆಸ್‌ ಪಾಳಯದಲ್ಲಿ ಸೆಪ್ಟೆಂಬರ್‌ ಕ್ರಾಂತಿ, ನವೆಂಬರ್‌ ಕ್ರಾಂತಿ ಬಗ್ಗೆಯೇ ದೊಡ್ಡ ದೊಡ್ಡ ಚರ್ಚೆಗಳು ನಡೆಯುತ್ತಿವೆ. 12 ಸಚಿವರು ಶೀಘ್ರದಲ್ಲೇ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಇದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಸಚಿವ ರಾಜಣ್ಣ ಡೋಂಟ್ ಕೇರ್ ಎಂದಿದ್ದಾರೆ. ನಾನು ಯುರೋಪ್‌ಗೆ ಹೋಗಬೇಕು ಬಂದ ಮೇಲೆ ಸಿಗುತ್ತೇನೆ ಎಂದು ಹೇಳಿದ್ದಾರೆ.

ರಣದೀಪ್ ಸಿಂಗ್‌ ಸುರ್ಜೇವಾಲಾ ಅವರು ರಾಜ್ಯದಲ್ಲಿ ಸರಣಿ ಸಭೆ ನಡೆಸುತ್ತಿದ್ದಾರೆ. ಹೀಗಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು, ನಾನು ಯುರೋಪ್‌ಗೆ ಹೋಗಬೇಕು, ಪ್ರವಾಸದ ದಿನಾಂಕ ಮೊದಲೇ ನಿಗದಿಯಾಗಿದೆ. ನಿಮ್ಮ ಮೀಟಿಂಗ್ ಇತ್ತೀಚಿಗೆ ಫಿಕ್ಸ್ ಆಗಿದೆ. ಹೀಗಾಗಿ ನಾನು ವಿದೇಶ ಪ್ರವಾಸದಿಂದ ವಾಪಾಸ್ ಬಂದ ಮೇಲೆ ಸುರ್ಜೇವಾಲಾರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತೇನೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ರಾಜಣ್ಣ ಪುತ್ರ ರಾಜೇಂದ್ರ ಮಾತನಾಡಿ, ನಮ್ಮ ತಂದೆ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ನಮ್ಮ ತಾಯಿ, ಅವರ ಕಸಿನ್ಸ್ ಜೊತೆ ಹೋಗಿದ್ದಾರೆ. ಒಂದೂವರೆ ತಿಂಗಳ ಹಿಂದೆ ಈ ವಿದೇಶ ಪ್ರವಾಸ ನಿಗದಿಯಾಗಿತ್ತು. ಸುರ್ಜೇವಾಲ ಅವರ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ. ಮೌಖಿಕವಾಗಿ ಮಾತನಾಡಿದ್ದಾರೆ. ವಿದೇಶ ಪ್ರವಾಸದಿಂದ ಬಂದ ಬಳಿಕ ಸುರ್ಜೇವಾಲಾ ಅವರನ್ನ ಭೇಟಿ ಮಾಡುತ್ತಾರೆ. ಪ್ರವಾಸಕ್ಕೆ ಹೋಗುವುದನ್ನ ಸಿಎಂ ಅವರ ಗಮನಕ್ಕೆ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss