ಮುಂಬೈ:ಕೊನೆಯಲ್ಲಿ ಹೈಡ್ರಾಮಾದ ನಡುವೆ ರಾಜಸ್ಥಾನ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು.
ವಾಂಖೆಡೆ ಮೈದಾನದಲ್ಲಿ 223 ರನ್‍ಗಳ ಬೃಹತ್ ಸವಾಲು ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಆರಂಭಿಕರಾದ ಡೇವಿಡ್ ವಾರ್ನರ್ (28) ಹಾಗೂ ಪೃಥ್ವಿ ಶಾ (37) ಮೊದಲ ವಿಕೆಟ್ 43 ರನ್ ಸೇರಿಸಿದರು.
ಸರ್ಫಾರಾಜ್ ಖಾನ್ 1, ರಿಷಭ್ ಪಂತ್ 44 ರನ್ ಗಳಿಸಿದರು. ಲಲಿತ್ ಯಾದವ್ 37, ಅಕ್ಷರ್ ಪಟೇಲ್ 1, ಶಾರ್ದೂಲ್ ಠಾಕೂರ್ 10, ರೊವಮನ್ ಪೊವೆಲ್ 36 ರನ್ ಗಳಿಸಿದರು.
ಕೊನೆಯ ಓವರ್‍ನಲ್ಲಿ ಡೆಲ್ಲಿ ಗೆಲ್ಲಲು 36 ರನ್ ಬೇಕಿದ್ದಾಗ ರೊವಮನ್ ಪೊವೆಲ್ 3 ಸಿಕ್ಸರ್ ಚಚ್ಚಿದರು. ಆದರೂ ಡೆಲ್ಲಿ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 207 ರನ್ ಕಲೆ ಹಾಕಿತು.
ರಾಜಸ್ಥಾನ ಪರ ಪ್ರಸಿದ್ಧ ಕೃಷ್ಣ 3, ಆರ್.ಅಶ್ವಿನ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಪರ ಜೋಸ್ ಬಟ್ಲರ್ 116, ದೇವದತ್ ಪಡಿಕಲ್ 54, ಸಂಜು ಸ್ಯಾಮ್ಸನ್ ಅಜೆಯ 46, ಶಿಮ್ರಾನ್ ಹೇಟ್ಮಯರ್ 1 ರನ್ ಗಳಿಸಿದರು.
ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 222 ರನ್ ಕಲೆ ಹಾಕಿತು.