ಅಂತರಾಷ್ಟ್ರೀಯ ಸುದ್ದಿ: ಫೇಸ್ಬುಕ್ ಪರಿಚಯವಾಗಿ ಸ್ನೇಹ ಬೆಳೆದು ನಂತರ ಪ್ರೀತಿಯಲ್ಲಿ ಮುಳುಗಿಹೋಗಿ ಮದುವೆಯಾಗಿರುವ ಗಂಡ ಜನ್ಮ ನೀಡಿದ ಮಕ್ಕಳನ್ನು ಬಿಟ್ಟು ಪಾಕಿಸ್ಥಾನಕ್ಕೆ ಪ್ರಿಯಕರನನ್ನು ನೋಡಲು ಹೋಗಿದ್ದ ರಾಜಸ್ಥಾನಿ ಮಹಿಳೆ ಅಂಜು ಮತ್ತೆ ಭಾರತಕ್ಕೆ ಹಿಂದಿರುಗಲು ಬಯಸುತ್ತಿದ್ದಾಳಂತೆ ಯಾಕೆ ಅಂತ ಗೊತ್ತಾ.
ಪಾಕಿಸ್ತಾನದ ನಸ್ರುಲ್ಲಾ ಎಂಬಾತನನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿಸಿ ಆತನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಪಾಕಿಸ್ಥಾನಕ್ಕೆ ತೆರಳಿದ್ದ ಎರಡು ಮಕ್ಕಳ ತಾಯಿ ಅಂಜು ಎನ್ನುವ ಮಹಿಳೆ ಜುಲೈ 25 ರಂದು ನಸ್ರುಲ್ಲಾ ನನ್ನು ಎರಡನೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು.
ಆದರೆ ಇಲ್ಲಿಯವರೆಗೂ ಹಾಯಾಗಿ ಸಂಸಾರ ನಡೆಸುತ್ತಿದ್ದ ಅಂಜುಗೆ ಮಕ್ಕಳನ್ನು ನೋಡುವ ಬಯಕೆ ಕಾಡುತ್ತಿದೆಯಂತೆ ಹಾಗಾಗಿ ಪಾಕಿಸ್ಥಾನ ಸರ್ಕಾರಕ್ಕೆ ನಿರಿಕ್ಷಣಾ ಅರ್ಜಿಯನ್ನು ಸಲ್ಲಿಸಿದ್ದಾಳೆ ಎಂದು ಪತಿ ನಸ್ರುಲ್ಲಾ ತಿಳಿಸಿದ್ದಾನೆ.
ಹಿಂದೂ ಧರ್ಮದಿಂದ ಮುಸ್ಲೀಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮದುವೆಯಾಗಿರುವ ಬಗ್ಗೆ ಬಹಿತರಂಗಪಡಿಸಿದ್ದರು.
ಮತಾಂತರಗೊಂಡು ಪಾಕಿಸ್ತಾನಿಯನ್ನು ಮದುವೆಯಾಗಿದ್ದಕ್ಕೆ ಪಾಕಿಸ್ತಾನ ಸರ್ಕಾರ ಒಂದು ವರ್ಷದ ಕಾಲಮಿತಿಯೊಂದಿಗೆ ವೀಸಾವನ್ನು ವಿಸ್ತರಿಸಿತ್ತು. ಆದರೆ ಈಗಾಗಲೆ 15 ವರ್ಷದ ಗಂಡು ಮಗು ಮತ್ತು 6 ವರ್ಷದ ಹೆಣ್ಣು ಮಗುವನ್ನು ಹೊಂದಿದ್ದ ಅಂಜು ಈಗ ಮಕ್ಕಳನ್ನು ನೋಡುವ ಹಂಬಲದಿಂದಾಗಿ ಖಿನ್ನತೆಗೆ ಒಳಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯನ್ನು ಭಾರತಕ್ಕೆ ಮಕ್ಕಳನ್ನು ನೋಡಲು ಕಳುಹಿಸುತ್ತಿರುವುದಾಗಿ ಪತಿ ನಸ್ರುಲ್ಲಾ ತಿಳಿಸಿದ್ದಾರೆ.
ಮಕ್ಕಳ್ನನು ನೋಡಿಕೊಂಡು ಕೆಲವು ದಿನಗಳ ನಂತರ ಪಾಕಿಸ್ತಾನಕ್ಕೆ ವಾಪಸ್ಸು ಮರಳುತ್ತಾಳೆ ಎಂದು ಪತಿ ತಿಳಿಸಿದ್ದಾನೆ. ಆದರೆ ಇತ್ತ ರಾಜಸ್ಥಾನದಲ್ಲಿರುವ ಅಂಜು ತಂದೆ ಅವಳು ದೇಶ ದ್ರೋಹಿ ಅವಳು ಭಾರತಕ್ಕೆ ಬರುವುದೇ ಬೇಡ ಅವಳಿಂದ ನಮ್ಮ ಮನೆಯ ಗೌರವ ಹಾಳಾಗಿ ಹೋಗಿದೆ ಅವಳನ್ನು ಭಾರತಕ್ಕೆ ಬರದಂತೆ ತಡೆಯಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Benjamin Netanyahu : ಪ್ಯಾಲೆಸ್ತೀನ್ -ಇಸ್ರೇಲ್ ನಡುವೆ ಯುದ್ಧ : ಅಖಾಡಕ್ಕಿಳಿದ ಪ್ರಧಾನಿ
Israel : ಕಲಿಯುಗದ ಒನಕೆ ಓಬವ್ವ…! : ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ..!