Sandalwood: ಸ್ಯಾಂಡಲ್‌ವುಡ್ ತಾರೆ ಭೀಮ ಪ್ರಿಯಾ ಅವರ ಪತಿ ಅವಿನಾಶ್ ಅವರು ಪ್ರಿಯಾ ಅವರ ಕಲಾ ಜರ್ನಿಗೆ ಹೇಗೆ ಬೆಂಬಲಿಸುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಿಯಾ, ನಾವು ಮತ್ತು ಅವಿನಾಶ್ ಸಿನಿಮಾ ಬಗ್ಗೆ ಚರ್ಚೆ ಮಾಡಿಯೇ , ಕಥೆ ಸೆಲೆಕ್ಟ್ ಮಾಡ್ತೀವಿ. ನನಗೆ ಮರುಗುವ ಸ್ವಭಾವ ಹೆಚ್ಚು. ಪಾಪ ಅಂತಾ ಹೆಚ್ಚು ತಿಳಿಯುತ್ತೇನೆ. ಆದರೆ ಅದನ್ನು ತಡೆದು ಯೋಚನೆ ಮಾಡಿ ಕಥೆ ಆಯ್ಕೆ ಮಾಡಲು ಅವಿನಾಶ್ ಸಾಥ್ ನೀಡುತ್ತಾರೆ ಎಂದು ಪ್ರಿಯಾ ಹೇಳಿದ್ದಾರೆ.
ಇನ್ನು ರಂಗಭೂಮಿ ಮತ್ತು ಸಿನಿಮಾ ಬಗ್ಗೆ ಮಾತನಾಡಿರುವ ಪ್ರಿಯಾ ರಂಗಭೂಮಿ ಶಿಸ್ತು ಕಲಿಸಿತು. ಸಿನಿಮಾ ತಾಳ್ಮೆ ಕಲಿಸಿತು ಎಂದಿದ್ದಾರೆ. ಅಲ್ಲದೇ ಕ್ವಿಟ್ ಮಾಡದೇ, ನಿಮ್ಮ ಪ್ರಯತ್ನ ನೀವು ಮಾಡಬೇಕು ಅನ್ನೋದನ್ನು ಸಿನಿಮ ಕಲಿಸಿದೆ ಅಂತಾರೆ ಪ್ರಿಯಾ.
ಇನ್ನು ಪ್ರಿಯಾ ಅವರಿಗೆ ಯಾರ ಜತೆ ನಟಿಸಬೇಕು ಎಂಬ ಆಸೆ ಇದೆ ಎಂದು ಕೇಳಿದಾಗ, ರಜನಿಕಾಂತ್ ಸರ್ ಮತ್ತು ಶಿವಣ್ಣ ಜತೆ 1 ಸಲ ನಟಿಸಬೇಕು ಎಂದು ಆಸೆ ಇದೆ ಎಂದಿದ್ದಾರೆ. ನನ್ನ ರಾ ಲುಕ್‌ಗೆ ಶಿವಣ್ಣಗೆ ನಾನು ಉತ್ತಮ ಕಾಾಂಬಿನೇಷನ್ ಅಂತಾ ಅನ್ನಿಸುತ್ತೆ ಎಂದು ತಮ್ಮ ಮನದ ಆಸೆ ಹೇಳಿದ್ದಾರೆ ಪ್ರಿಯಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

