ಯಾದಗಿರಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಅಪಾರ ಬೆಳೆ ಹಾನಿಯಾಗುತ್ತಿದೆ. ಈ ಸಂಬಂಧ ಪಟ್ಟಂತೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡದ ಬಗ್ಗೆ ಮಾಜಿ ಸಚಿವ ರಾಜುಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರವಾಹ ಆಗಿ ಬೆಳೆ ಹಾನಿಯಾಗಿದೆ ಇದರ ಬಗ್ಗೆ ಮಾತಾಡೋದು ಬಿಟ್ಟು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರಕ್ಕೆ ಬಯ್ಯೋದು, ಪ್ರಧಾನಿ ಮೋದಿ ಅವರಿಗೆ ಟೀಕಿಸುವ ಕೆಲಸ ಬಿಟ್ಟು ಸಚಿವ ಪ್ರಿಯಾಂಕ್ ಏನು ಮಾಡಿದ್ದಾರೆ ಎಂದು ಮಾಜಿ ಸಚಿವ ರಾಜೂಗೌಡ ಪ್ರಶ್ನಿಸಿದರು.
ರಾಜುಗೌಡ ಶಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಕರ್ನಾಟಕ ಸರಕಾರದ ಸಚಿವ ಸಂಪುಟದ ಸಚಿವರಾಗಿರುವ ನನಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ ರಾಜ್ಯ ಸರ್ಕಾರ ಬಯ್ಯೋ ಖಾತೆ ನೀಡಿದ್ದಾರೆ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ಪೇಪರ್ ಹುಲಿಯಾಗುವುದನ್ನು ಬಿಟ್ಟು ಬೆಳೆ ಹಾನಿ ಪರಿಹಾರ ಬಗ್ಗೆ ಸತ್ಯ ಮಾತನಾಡಲಿ. ಅದು ಬಿಟ್ಟು ಮಾತಿಗೂ ಮುನ್ನ ಮೋದಿ, ಯಡಿಯೂರಪ್ಪ ಎಂದರೆ ಇವರಿಗೆ ಬಯ್ಯೋದೇ ಖಾತೆ ನೀಡಿದ ಹಾಗಿದೆ ಎಂದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸುರಪುರಕ್ಕೆ ಹೆಚ್ಚು ಬೆಳೆ ಹಾನಿ ಪರಿಹಾರ ನೀಡಿಸಿದ್ದೇನೆ. ನೀವು ಈಗ ಸರ್ಕಾರದ ಸಚಿವರಾಗಿದ್ದೀರಾ ಏನು ಕೆಲಸ ಮಾಡಿದ್ದೀರಾ, ಯಾದಗಿರಿ, ಸುರಪುರಕ್ಕೆ ಬೆಳ ಪರಿಹಾರ ನೀಡಿರುವುದು ಸತ್ಯವೆಂದು ನಾನು ಸಾಬೀತು ಪಡಿಸಿದರೆ ಪ್ರಿಯಾಂಕ್ ಖರ್ಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ರಾಜೂಗೌಡ ಸವಾಲೆಸೆದರು.
ವರದಿ : ಲಾವಣ್ಯ ಅನಿಗೋಳ

