Dharwad News: ಅದೂ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆ, ಆ ಶಾಲೆಗೆ ಒಬ್ಬರು ಚೇರಮನ್ ಹಾಗೂ ಆಡಳಿತ ಕಮಿಟಿ ಇತ್ತು. ಕಮಿಟಿಯ ಚೇರಮನ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಈಗ ಚೇರಮನ ಶಾಲೆಗೆ ಬಂದಿಲ್ಲ, ಆದರೆ ಶಿಕ್ಷಕರು ಸೇರಿ ಶಾಲೆಯ ಎಲ್ಲವನ್ನೂ ಚೇರಮನ್ ಆ್ಯಂಡ್ ಕಮಿಟಿ ಎಲ್ಲವನ್ನೂ ನೋಡಿಕೊಂಡು ಹೊಗುತಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ ಏಕಾಏಕಿ ರಾಜು ಜೋಸೆಫ್ ಎನ್ನುವವರು ಶಾಲೆಗೆ ನುಗ್ಗಿ, ಶಾಲೆಯ ಕಮಿಟಿಯಲ್ಲಿನ ಸದಸ್ಯರೊಬ್ಬರಿಗೆ ಮಾನಸಿಕ ಹಿಂಸೆ ನೀಡಿದ್ದಲ್ಲದೇ ಅಲ್ಲಿಯ ಕೆಲವು ಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶಿಕ್ಷಕಿಯರು ಆರೋಪಿಸಿದ್ದಾರೆ.
ಹೌದು ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿ ಗದಗ ರಸ್ತೆಯ ಸೇಂಟ್ ಆ್ಯಂಡ್ರೊಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು, ಈಗಾಗಲೇ ನಮ್ಮ ಶಾಲೆಗೆ ಆಡಳಿತ ಮಂಡಳಿ ಇದೆ, ನಮ್ಮ ಶಾಲೆಗೆ ಚಂದ್ರಶೇಖರವರು ಚೇರಮನರಾಗಿದ್ದಾರೆ. ಚಂದ್ರಶೇಖರವರು ನಮ್ಮಗೆ ಸಂಬಳವನ್ನು ಪ್ರತಿ ತಿಂಗಳು ನೀಡುತ್ತಾ ಬಂದಿದ್ದಾರೆ. ಶಾಲೆಯನ್ನು ತುಂಬಾ ಸುಧಾರಿಸಲು ಕೂಡಾ ಶ್ರಮಿಸುತ್ತಿದ್ದಾರೆ.
ಆದರೆ ನಮ್ಮ ಚೇರಮನ ಚಂದ್ರಶೇಖರ ಮೇಲೆ ಒಂದು ಪ್ರಕರಣ ಬಂದ ಹಿನ್ನೆಲೆಯಲ್ಲಿ ಅವರು ಈ ಕಡೆ ಬಂದಿಲ್ಲ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು, ರಾಜು ಜೋಸೆಫ್ ಅನ್ನುವವರು ತಮ್ಮದೊಂದು ಟೀಂ ಕಟ್ಟಿಕೊಂಡು ಶಾಲೆಗೆ ನುಗ್ಗಿ, ಶಾಲೆಯ ಆಫೀಸ ಕಚೇರಿಯಲ್ಲಿ ಒಬ್ಬೊಬ್ಬರನ್ನು ಕರೆದು ಮ್ಯಾನ ಹ್ಯಾಂಡಲ್ ಮಾಡಿದ್ದಾರೆ. ಈ ಶಾಲೆಯಲ್ಲಿ ಮಹಿಳೆಯರೇ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ರಾಜು ಜೋಸೆಫ್ ಅವರು ಶಾಲೆಯ ಅಡಳಿತ ಕಮಿಟಿ ಇನ್ನೂ ಮುಂದೆ ನಾವೇ ಅಂತಿದ್ದಾರೆ.
ನಾಗರ ಪಂಚಮಿ ಮುಗಿದ ಮೇಲೆ ಬಂದು ಶಾಲೆ ಪ್ರಿನ್ಸಿಪಲ್ ರನ್ನು ಬದಲಾಯಿಸಿದ್ದಾರೆ. ಇದರ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರಾದ ದ್ವರರಾಜ್ ಮಣಕುಂಟ್ಲಾ ಅವರಿಗೆ ಮಾಹಿತಿ ನೀಡಿದಾಗ ಅವರು ಬಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದರು. ಆದರೆ ರಾಜು ಜೋಸೆಫ್ ಇವರು ಮೂರು ಜನ ಪುರುಷ ಹಾಗೂ ಇಬ್ಬರು ಮಹಿಳೆಯರನ್ನು ಕರೆದುಕೊಂಡು ಶಾಲೆ ನುಗ್ಗಿ, ನಮ್ಮಗೆ ಮಾನಸಿಕ ಜತೆಗೆ ಕೆಲವು ಶಿಕ್ಷಕರಿಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ.
ಕಾನೂನು ಬದ್ಧವಾಗಿ ಅವರು ಬರದೇ, ಕಾನೂನು ಬಾಹಿರವಾಗಿ ಬಂದು ಶಾಲಾ ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಹೀಗೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡುವುದರ ಜತೆಗೆ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಕುರಿತು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಗಮನಕ್ಕೂ ಈ ವಿಚಾರವನ್ನು ತರುವುದಾಗಿ ಶಿಕ್ಷಕಿಯರು ಹೇಳಿದ್ದಾರೆ.