Thursday, May 1, 2025

Latest Posts

ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ

- Advertisement -

ರಾಯಚೂರು: ಮಾಜಿ ರಾಜ್ಯಸಭಾ ಸದಸ್ಯರಾದ ಅಬ್ದುಲ್ ಸಮದ್ ಸಿದ್ದೀಖಿ (87) ವಿಧಿವಶರಾಗಿದ್ದಾರೆ. ರಾಯಚೂರಿನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅಬ್ದುಲ್ ಸಮದ್  ಅವರು ಜನತಾದಳದಿಂದ 1988ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಅಲ್ಲಿಂದ 1994ರವರೆಗೆ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ವಯೋಸಹಜ ಕಾಯಿಲೆಯಿಂದ ಹೈದ್ರಾಬಾದ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ತಮ್ಮ ನಿವಾಸದಲ್ಲಿ ರಾತ್ರಿ ಕೊನೆಯುಸಿರೆಳಿದ್ದಾರೆ.

ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಪ್ಯಾನ್ಕಾರ್ಡ್ ನಿಷ್ಕ್ರೀಯವಾಗಲಿದೆ : ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಅಬ್ದುಲ್ ಅವರು ರಾಯಚೂರಿನ ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ. ಸಫಿಯಾ ಸಂಸ್ಥೆ ಮೂಲಕ ಮಹಿಳೆಯರಿಗೆ ಡಿ.ಎಡ್. ಕಾಲೇಜು ಸ್ಥಾಪಿಸಿದರು. ಅಬ್ದುಲ್ ಸಮದ್ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪತ್ರಿಯರನ್ನು ಮತ್ತು ಮೊಮ್ಮಕಳನ್ನು ಅಗಲಿದ್ದಾರೆ. ರಾಯಚೂರಿನ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಇಂದು ಅಬ್ದುಲ್ ಅವರ ಅಂತ್ಯಕ್ರಿಯೆ ನಡೆಯಲಿದೆ.

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ2

ಕನ್ನಡಾಂಬೆ ಭುವನೇಶ್ವರಿ ದೇವಿ ಚಿತ್ರ ಅಧಿಕೃತವಾಗಿ ಜಾರಿಗೆ ತರಲು ಒಪ್ಪಿದ ಸರ್ಕಾರ

- Advertisement -

Latest Posts

Don't Miss