ಕಿಚ್ಚನ ಫ್ಯಾನ್ಸ್ಗೆ ಕಿಕ್ಕೆಚ್ಚಿಸಿದ ರಕ್ಕಮ್ಮ ಹಾಡು..!

ಸ್ಯಾಂಡಲ್‌ವುಡ್ ಸಕಲಕಲಾ ವಲ್ಲಭ, ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ನಟಿಸಿರೋ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಜುಲೈ ೨೮, ಇನ್ನೆರಡೇ ದಿನಗಳಷ್ಟೇ ರೋಣನ ಅಬ್ಬರ ಶುರುವಾಗೋದಕ್ಕೆ ಕಾಲಾವಕಾಶ ಇರೋದು. ಈಗಾಗಲೇ ಚಿತ್ರದ ಟೀಸರ್, ಟ್ರೆöÊಲರ್, ಸಾಂಗ್ಸ್ನಿAದ ಕುತೂಹಲ ಹೆಚ್ಚಿಸಿರೋ ವಿಕ್ರಾಂತ್ ರೋಣ ರಿಲೀಸ್ ಆಗೋ ಕೊನೆಯ ಸಮಯದಲ್ಲಿ ಮತ್ತಷ್ಟು ಕಿಕ್ ಹೆಚ್ಚಿಸಿದೆ ವಿಕ್ರಾಂತ್ ರೋಣನ ರಕ್ಕಮ್ಮ ಡ್ಯಾನ್ಸ್..

ಹೌದು, ರಾ ರಾ ರಕ್ಕಮ್ಮ ಅಂತ ಯಾವಾಗ ನಟಿ ಜಾಕ್ವೆಲಿನ್ ಫರ್ನಂಡಿಸ್ ಕಿಚ್ಚನ ಜೊತೆ ಸೊಂಟ ಬಳುಕಿಸಿದ್ರೋ ನೋಡಿ, ಪ್ರತಿಯೊಬ್ಬ ಮ್ಯೂಸಿಕ್, ಡ್ಯಾನ್ಸ್ ಪ್ರಿಯರಿಗೂ ಈ ಸಾಂಗ್ ಸಿಕ್ಕಾಪಟ್ಟೆ ಇಷ್ಟ ಆಗೋಯ್ತು. ಅಜನೀಶ್ ಲೋಕನಾಥ್ ಮ್ಯೂಸಿಕ್, ಜಾನಿ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ, ಅನೂಪ್ ಭಂಡಾರಿ ಲಿರಿಕ್ಸ್, ನಕಾಶ್ ಅಜೀಜ್ ಹಾಗೂ ಸುನಿಧಿ ಚೌಹಾಣ್ ಗಾಯನ, ಕಿಚ್ಚ & ಜಾಕ್ವೆಲಿನ್ ಸ್ಟೆಪ್ಪು ರಕ್ಕಮ್ಮ ಹಾಡಿಗೆ ಹೇಳಿ ಮಾಡಿಸಿದಂತಿದೆ. ಒಮ್ಮೆ ಕೇಳಿದ್ರೆ ಮತ್ತೆ ಮತ್ತೆ ಕೇಳ್ತಿರ್ಬೇಕು ಅನಿಸುತ್ತೆ ರಕ್ಕಮ್ಮನ ಹಾಡು.

ಇದುವರಗೂ ಬರೀ ರಕ್ಕಮ್ಮ ಲಿರಿಕಲ್ ಹಾಡನ್ನ ಕೇಳಿದ್ದ ನಿಮಗೆ ಚಿತ್ರತಂಡ ವಿಡಿಯೋ ಸಾಂಗ್‌ನ ೧ವರೆ ನಿಮಿಷದ ಟೀಸರ್‌ನ ಅಫೀಶಿಯಲ್ಲಾಗಿ ರಿಲೀಸ್ ಮಾಡಿದೆ. ಟಿ ಸೀರಿಸ್ ಹಾಗೂ ಲಹರಿ ಮ್ಯೂಸಿಕ್‌ನಲ್ಲಿ ರಕ್ಕಮ್ಮ ವಿಡಿಯೋ ಹಾಡಿನ ಟೀಸರ್ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ರಿಲೀಸಾದ ಬರೀ ಎರಡೇ ಗಂಟೆಗೇನೇ 2 ವರೆ ಲಕ್ಷ ಅಭಿಮಾನಿಗಳು ವೀಕ್ಷಿಸಿ ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಮಾಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗ್ಲೇ ರೀಲ್ಸ್, ಜೋಶ್, ಮೋಜ್‌ನಲ್ಲೆಲ್ಲಾ ರಕ್ಕಮ್ಮ ಹುಚ್ಚೆಬ್ಬಿಸಿದ್ದು, ಪೂರ್ತಿ ವಿಡಿಯೋ ರಿಲೀಸಾದ್ಮೇಲೆ ಇನ್ನೂ ಯಾವ ಮಟ್ಟಿಗೆ ಕ್ರೇಜ್ ಕ್ರಿಯೇಟ್ ಮಾಡ್ತಾಳೋ ಕಾದು ನೋಡ್ಬೇಕು.

About The Author