ಸಿಕ್ರೇಟ್ ರೂಮಲ್ಲಿ ರಕ್ಷಿತಾ-ಧ್ರುವಂತ್ ಕಿತ್ತಾಟ: ರಕ್ಷಿತಾಳನ್ನು ಮಾತಿನಲ್ಲೇ ತಿವಿಯುತ್ತಿರುವ ಧ್ರುವಂತ್..

Bigg Boss Kannada: ಬಿಗ್‌ಬಾಸ್‌ನಲ್ಲಿ ಈ ವಾರ ಯಾರನ್ನೂ ಆಚೆ ಕಳುಹಿಸಲಾಗಿಲ್ಲ. ಧ್ರುವಂತ್ ಮತ್ತು ರಕ್ಷಿತಾರನ್ನು ಸಿಕ್ರೇಟ್ ರೂಮ್‌ನಲ್ಲೇ ಇರಿಸಲಾಗಿದ್ದು, ಇಬ್ಬರೂ ಚೆನ್ನಾಗಿ ಕಿತ್ತಾಡಿಕ“ಳ್ಳುತ್ತಿದ್ದಾರೆ.

ಸಿಕ್ರೇಟ್ ರೂಮ್‌ಗೆ ಇಬ್ಬರೂ ಪ್ರವೇಶಿಸುತ್ತಿದ್ದಂತೆ, ರಕ್ಷಿತಾ, ನಾನು ನಿಮ್ಮ ಜತೆ 1 ಕೋಣೆಯಲ್ಲೇ ಇರಬೇಕಲ್ಲಾ ಅಂತಾ ಬೇಸರ ಮಾಡಿಕ“ಂಡ್ರು. ಅದಕ್ಕೆ ಧ್ರುವಂತ ಡೋಂಟ್ ವರಿ ನಾನು ಅಂಥವನಲ್ಲ. ನೀವು ನಿಮ್ಮಷ್ಟಕ್ಕೆ ಇರಬಹುದು ಎಂದಿದ್ದಾರೆ.

ಆದರೆ ಮಧ್ಯೆ ಮಧ್ಯೆ ಬಿಗ್‌ಬಾಸ್ ಮನೆಯಲ್ಲಿ ನಡೆಯುವ ದೃಶ್ಯವನ್ನು ಟಿವಿ ಮುಖಾಂತರ ಇಬ್ಬರಿಗೂ ತೋರಿಸಲಾಗುತ್ತಿದ್ದು, ಈ ವೇಳೆ ರಜತ್, ರಘು, ಗಿಲ್ಲಿ ರಕ್ಷಿತಾಳ ಬಗ್ಗೆ ಉತ್ತಮವಾಗಿ ಮಾತನಾಡಿ, ಧ್ರುವಂತ್‌ನನ್ನು ಕಡೆಗಣಿಸಿದ್ದಾರೆ. ಆಗ ರಕ್ಷಿತಾ ನನ್ನ ಜನ ನನ್ನನ್ನು ಬಿಟ್ಟು ಕ“ಡಲಿಲ್ಲ ಎಂದಿದ್ದಾರೆ. ಅದಕ್ಕೆ ಧ್ರುವಂತ್, ನಿನ್ನ ಜನನೂ ನಿನ್ನ ಥರಾನೇ ಇದ್ದಾರೆ. ನಿನ್ನ ಜನರನ್ನು ನೀನೇ ಇಟ್ಟುಕೋ ಎಂದಿದ್ದಾರೆ.

ಹೀಗೆ ಅವರ ಕಿತ್ತಾಟ ಮುಂದುವರೆದಿದ್ದು, ಮಾತು ಮಾತಿಗೂ ಧ್ರುವಂತ್ ರಕ್ಷಿತಾರನ್ನು ವ್ಯಂಗ್ಯ ಮಾಡಿದ್ರೆ, ರಕ್ಷಿತಾ ತನ್ನದೇ ಸರಿ ಎನ್ನುವಂತೆ ವಾದ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಬಿಗ್‌ಬಾಸ್ ಮುಂದೆ ಯಾವ ಶಾಕ್ ನೀಡಲಿದೆ..? ಬಿಗ್‌ಬಾಸ್ ಮನೆಗೆ ಇಬ್ಬರೂ ಹೋಗುತ್ತಾರಾ..? ಅಥವಾ ಯಾರಾದರು ಓರ್ವ ವ್ಯಕ್ತಿ ಬಿಗ್‌ಬಾಸ್ ಮನೆಗೆ ಹೋಗುತ್ತಾರಾ..? ಹೀಗೆ ಹಲವು ಪ್ರಶ್ನೆಗಳು ವೀಕ್ಷಕರ ಮನಸ್ಸಿಗೆ ಬಂದಿರೋದಂತೂ ಸುಳ್ಳಲ್ಲ.

About The Author