Bigg Boss: ಬಿಗ್ಬಾಸ್ ನಡೆದು 1 ವಾರಕ್ಕೆ ಆಚೆ ಬಂದಿರುವ ಆರ್ಜೆಅಮಿತ್ ಸಂದರ್ಶನದಲ್ಲಿ ಮಾತನಾಡಿದ್ದು, ಈ ಬಾರಿ ಬಿಗ್ಬಾಸ್ನಲ್ಲಿ ಯಾರು ಗೆಲ್ಬೇಕು ಅಂತಾ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಅಮೀತ್ ಅವರಿಗೆ ರಕ್ಷಿತಾ ಗೆಲ್ಲಬೇಕು ಅಂತಾ ಇದೆಯಂತೆ. ಆದರೆ ಜನ ಗಿಲ್ಲಿ ಗೆಲ್ಬೇಕು ಅಂತಾ ಹೇಳ್ತಾರೆ. ಅವನು ಗೆದ್ದರೂ ಖುಷಿನೇ. ಆದರೆ ನನಗೆ ರಕ್ಷಿತಾ ಗೆಲ್ಲಬೇಕು ಅಂತಾ ಮನಸ್ಸಿದೆ. ಯಾಕಂದ್ರೆ ಆಕೆ ಟಿವಿ ಶೋನಲ್ಲಿ ಭಾಗವಹಿಸದೇ, ಬರೀ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿ, ಬಿಗ್ಬಾಸ್ ಮನೆಗೆ ಬಂದವಳು. ಆದರೆ ಅವರು ಬಿಗ್ಬಾಸ್ ಮನೆಯಲ್ಲಿ ಯಾವ ರೀತಿ ಆಡುತ್ತಾರೆ ಅನ್ನೋದರ ಮೇಲೆ ಅದು ಡಿಪೆಂಡ್ ಆಗುತ್ತದೆ.
ಆದರೆ ಸಿರಿಯಲ್ನವರೇ ಹೆಚ್ಚು ಬರುತ್ತಾರೆ. ಆದರೆ ರಕ್ಷಿತಾ ಆಚೆಯಿಂದ ಬಂದವಳು. ಅವರಿಗೆ ಉತ್ತಮ ದೇವಿಕೆ ಸಿಕ್ಕಿದೆ. ಅವರು ಬೆಳೆಯುತ್ತಿದ್ದಾರೆ. ಹಾಗಾಗಿ ಆಕೆ ಗೆದ್ದರೆ ನನಗೆ ಖುಷಿ. ಈ ವಿಷಯ ಹಲವರಲ್ಲಿ ಜೋಶ್ ತರುವ ಸಾಧ್ಯತೆ ಇದೆ ಅಂತಾರೆ ಅಮೀತ್.
ಇನ್ನು ಟಾಪ್ 5ನಲ್ಲಿ ಅಶ್ವಿನಿ, ಗಿಲ್ಲಿ, ರಕ್ಷಿತಾ, ರಘು ಹೆಸರು ಅಮೀತ್ ಹೇಳಿದ್ದಾರೆ. ಇನ್ನು ಕರಿಬಸಪ್ಪ ಅವರಿಗೆ ನೀವು ಏನಾದರೂ ಕೆಲಸ ಹೇಳಬೇಕು ಅಂದ್ರೆ ಏನು ಹೇಳ್ತೀರಿ ಅಂತಾ ಕೇಳಿದ್ದಕ್ಕೆ ಉತ್ತರಿಸಿದ ಅಮೀತ್, ಕರಿಬಸಪ್ಪ ಅವರನ್ನು ಬಿಗ್ಬಾಸ್ ಮನೆಗೆ ಅತಿಥಿಯನ್ನಾಗಿ ಕರೆಸಿ, 3 ಗಂಟೆ ಭಾಷಣ ಮಾಡಿಸಬೇಕು. ಹಸಿವು, ಜೀವನ ಹೀಗೆ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಬೇಕು ಎಂದು ಅಮೀತ್ ಹೇಳಿದ್ದಾರೆ.




