Sunday, September 8, 2024

Latest Posts

ಶಾಪವನ್ನು ವರವಾಗಿಸಿ ಕೊಂಡು ರಾಮಸೇತು ನಿರ್ಮಿಸಲಾಯಿತಾ..?

- Advertisement -

Rama sethu:

ತ್ರೇತಾಯುಗದಲ್ಲಿ ರಾಮನಾಗಿ ಅವತರಿಸಿದ ಭಗವಾನ್ ವಿಷ್ಣುವೇ ರಾಮಾಯಣದಲ್ಲಿ ರಾಕ್ಷಸನನ್ನು ಸಂಹರಿಸಿದ . ಮಾನವ ರೂಪದಲ್ಲಿ ಸಂಹರಿಸಿದ ಅವತಾರ ಪುರುಷನಿಗೂ ಕೂಡ ವಾನರರ ಅವಶ್ಯಕತೆ ಬಂದಿತು .

ಸೀತಾದೇವಿಯನ್ನು ಹುಡುಕುವುದರಿಂದ ಹಿಡಿದು ರಾವಣನಿಂದ ಸೀತಾ ದೇವಿಯನ್ನು ಕರೆದುಕೊಂಡು ಹೋಗುವಾಗ ಹೆಜ್ಜೆ ಹೆಜ್ಜೆಯಲ್ಲೂ ವಾನರಸೇನೆ ಶ್ರೀರಾಮನಿಗೆ ಜೋತೆ ಇದ್ದು ಸಹಾಯ ಮಾಡಿದರು .ಅದರಲ್ಲಿ ಸುಗ್ರೀವ, ಹನುಮಾನ್ ಮತ್ತು ಜಾಂಬವನಂತಹ ಪಾತ್ರಗಳು ಎಲ್ಲರಲ್ಲೂ ಪ್ರಸಿದ್ಧವಾಗಿದೆ . ಆದರೆ ಇನ್ನೊಬ್ಬ ಪ್ರಮುಖ ವ್ಯಕ್ತಿ ‘ನೀಲು’ ಬಗ್ಗೆ ಕೇವಲ ಕೆಲವೇ ಜನರಿಗೆ ತಿಳಿದಿರುತ್ತದೆ. ಹಾಗಾದರೆ ನಿಲು ಮಾಡಿದ ಸಹಾಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ .

ಸೀತೆಯನ್ನು ಅಪಹರಿಸಿದ ರಾವಣನು ಅವಳನ್ನು ಲಂಕೆಯಲ್ಲಿ ಬಂಧಿಸಿದ್ದಾನೆಂದು ತಿಳಿದಾಗ, ವಾನರಸೇನನೆಲ್ಲರೂ ದಕ್ಷಿಣ ದಿಕ್ಕಿಗೆ ತೆರಳಿದರು. ಸುಗ್ರೀವನ ಆದೇಶದಂತೆ ಚಲಿಸಿದ ಸೈನ್ಯವನ್ನು ಅಗ್ನಿದೇವನ ಕುಮಾರ ನಿಲನು ನಾಯಕತ್ವವನ್ನು ವಹಿಸಿದನು. ಮಹಾಬಲ ಸಂಪನ್ನನ್ನದ ನೀಲನ ನೇತೃತ್ತ್ವದಲ್ಲಿ ವಾನರ ಸೇನೆ ಸಮುದ್ರದ ತೀರದ ಬಳಿ ನಿಂತುಕೊಂಡರು .ಆದರೆ ಅಲ್ಲಿಂದ ಲಂಕೆಗೆ ಹೋಗುವುದು ಹೇಗೆ ಎಂಬ ಸಮಸ್ಯೆ ಶುರುವಾಯಿತು. ಆಂಜನೇಯನಂತೆ ನಿಲು ಕೂಡ ಸಾಗರವನ್ನು ದಾಟಬಲ್ಲುವ ಸಾಮರ್ಥ್ಯವನ್ನು ಹೊಂದಿದ್ದನು . ಆದರೆ ಉಳಿದ ವಾನರರ ಪರಿಸ್ಥಿತಿ ಏನು ? ಇದಕ್ಕೆ ಸೇತುವೆ ಕಟ್ಟುವುದೊಂದೇ ದಾರಿ ಎಂದು ನಿರ್ಧರಿಸಲಾಯಿತು. ಸೇತುವೆ ನಿರ್ಮಾಣದ ಆಲೋಚನೆ ಉತ್ತಮವಾಗಿದೆ. ಆದರೆ ಆ ಕೆಲಸದ ಉಸ್ತುವಾರಿ ಮಾಡುವವರಾರು ? ಅದನ್ನು ಸಾಧಿಸುವುದು ಹೇಗೆ? ಎನ್ನುವ ಪ್ರಶ್ನೆ ಶುರುವಾಯಿತು .ಇದಕ್ಕಾಗಿ ನೀಲನು ಅವನ ಸ್ನೇಹಿತ ನಲನು ಮುಂದೆ ಬಂದರು .

ವಿಶ್ವಕರ್ಮ ಅಂಶದಿಂದ ಜನಿಸಿದ ನಲ ಮತ್ತು ಅಗ್ನಿಯ ಮಗ ನಿಲು ಇಬ್ಬರೂ ಬಾಲ್ಯದಲ್ಲಿ ತುಂಬಾ ತರಲೆ ಮಾಡುತ್ತಿದ್ದರು. ಋಷಿಗಳು ತಪಸ್ಸು ಮಾಡುತ್ತಿದ್ದರೆ ಅವರ ವಸ್ತುಗಳನ್ನು ತೆಗೆದುಕೊಂಡು ಹೋಗಿ ನೀರಿನಲ್ಲಿ ಹಾಕುತ್ತಿದ್ದರು .ಇದರೊಂದಿಗೆ ನಲ ,ನಿಲರೂ ನೀರಿನಲ್ಲಿ ಏನು ಮಾಡಿದರೂ ಮುಣುಗಿ ಹೋಗಬಾರದು ಎಂದು ಶಾಪ ಕೊಟ್ಟರು .ಆಸಮಯದಲ್ಲಿ ಮುನಿಗಳು ಕೊಟ್ಟಿರುವ ಶಾಪವೇ ಈಗ ನಲ ಮತ್ತು ನಿಲರಿಗೆ ವರವಾಯಿತು ,ಸೇತುವೆಕಟ್ಟಲು ಉಪಯೋಗವಾಯಿತು ಹೀಗೆ ನಲ ನಿಲರಿಂದ ಸೇತುವೆ ಕಟ್ಟಲು ಪ್ರಾಂಭಿಸಿದರು .ಅವರ ನಿರ್ದೇಶನದಲ್ಲಿ ರಾಮಸೇತು ನಿರ್ಮಾಣ ನಡೆದಿದೆ. ನಲ, ನಿಲನು ಸಮುದ್ರಕ್ಕೆ ಬಿಟ್ಟಿದ ಕಲ್ಲುಗಳ ಮೇಲೆ ರಾಮನಾಮ ಇರುವುದರಿಂದ ಅವೆಲ್ಲ ಒಂದು ಕಡೆ ಸೇರಿ ಸೇತುವೆಯಾಗಿ ನಿರ್ಮಾಣವಾಯಿತು. ಕೇವಲ ಐದು ದಿನಗಳಲ್ಲಿ 130 ಕಿ.ಮೀ ಸೇತುವೆ ನಿರ್ಮಿಸಲಾಗಿದೆ. ಸೇತುವೆಯನ್ನು ದಾಟಿ ಲಂಕೆಯನ್ನು ಪ್ರವೇಶಿಸಿದ ನಂತರ ನಿಲುವಿನ ಪರಾಕ್ರಮ ಅವರ್ಣನೀಯ. ಪೂರ್ವ ದಿಕ್ಕಿಗೆ ಸೇನೆಯ ನಾಯಕತ್ವ ವಹಿಸುತ್ತಾ ಲಂಕೆಯಲ್ಲಿ ಪ್ರಳಯ ಸೃಷ್ಟಿಸಿದನು .ಕುಂಭಕರ್ಣನ ಮಗ ನಿಕುಂಭನನ್ನು ತಡೆದನು .

ರಾವಣಾಸುರನ ಸೇನಾಧಿಪತಿ ಪ್ರಹಸ್ತುವನ್ನು ಎದುರಿಸಿದನು. ದೇಹ ಪೂರ್ತಿ ರಕ್ತ ಸುರಿಯುತ್ತಿದ್ದರೂ ಹಿಂದೆ ಸರಿಯದೆ ಪ್ರಹಸ್ತುವಿನೊಡನೆ ಕಾದಾಡಿ ಅವನನ್ನು ಕೊಂದನು. ಪ್ರಹಸ್ತುವಿನ ಸಾವಿನೊಂದಿಗೆ ರಾಕ್ಷಸ ಗುಂಪು ಚದುರಿಹೋಯಿತು. ಸೇನಾನಿಯ ಮರಣದ ನಂತರ ರಾವಣಾಸುರನು ಯುದ್ಧಭೂಮಿಯನ್ನು ಪ್ರವೇಶಿಸಿದನು. ಯುದಕ್ಕೆ ಕಾಲಿಟ್ಟ ಲಂಕೇಶನನ್ನು ನಿಲನು ಸುತ್ತುವರೆದನು ,ರಾವಣನು ನೀಲನನ್ನು ಕೊಲ್ಲಲು ಆಗ್ನೇಯ ಅಸ್ತ್ರವನ್ನು ಬಳಸಿದನು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನಿಲು ಅಗ್ನಿಯ ಮಗನಾದ್ದರಿಂದ ಆ ಅಸ್ತ್ರ ಅವನ ಮೇಲೆ ಕೆಲಸ ಮಾಡಲಿಲ್ಲ. ಅದರ ನಂತರವೂ ನಿಲು ಮಹುದಾರನಂತಹ ರಾಕ್ಷಸನು ಪ್ರಮುಖರನ್ನು ಕೊಂದನು. ಮತ್ತೊಂದೆಡೆ, ರಾಮನ ಕೈಯಲ್ಲಿ ರಾವಣಾಸುರನ ಮರಣವದ ನಂತರ ಯುದ್ಧವನ್ನು ಕೊನೆಗೊಂಡಿತು .

ಅಲೋವೆರಾದಿಂದ ನಿಮ್ಮ ಆದಾಯವನ್ನು ಹೀಗೆ ಹೆಚ್ಚಿಸಿಕೊಳ್ಳಿ..!

ದಂಪತಿಗಳ ನಡುವಿನ ಕಲಹಗಳನ್ನು ಈ ವಾಸ್ತು ಟಿಪ್ಸ್‌ನಿಂದ ಪರಿಶೀಲಿಸಬಹುದು..!

ಈ ಶುಭ ಸಂಕೇತಗಳು ಕಾಣಿಸಿದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಕಾಲಿಡುತ್ತಿದ್ದಾಳೆ ಎಂದು ಅರ್ಥ…

 

- Advertisement -

Latest Posts

Don't Miss