Friday, July 11, 2025

Latest Posts

Puneeth Rajkumar ;ಪುನೀತ್ ಆತ್ಮದ ಜೊತೆ ಮಾತನಾಡಿದ ಗುರೂಜಿ ..

- Advertisement -

ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನ ಇಂದಿಗೂ ಅದೆಷ್ಟೋ ಮಂದಿಗೆ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನರಾಗಿ 3 ವರ್ಷ ಕಳೆದಿದ್ದರು ಇಂದಿಗೂ ಅಪ್ಪು ನೆನಪಲ್ಲಿ ಕೋಟ್ಯಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಹಠತ್ ನಿಧನ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಇದೀಗ ಪ್ರಸಿದ್ಧ ಆಧ್ಯಾತ್ಮೀಕ ಗುರುಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಡಾ. ಶ್ರೀ ರಾಮಚಂದ್ರ ಗುರೂಜಿ ಅವರು ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಆತ್ಮದ ಬಗ್ಗೆ ಮಾತನಾಡಿದ್ದಾರೆ. ಸಾವಿನ ನಂತರ ದೇಹದಿಂದ ಹೊರಬಂದಿರುವುದು ಆತ್ಮಕ್ಕೆ ಎಲ್ಲಾ ತಿಳಿಯುತ್ತದೆ. ತಂದೆ ತಾಯಿ ಕುಟುಂಬದವರು ಅಳುವುದು ಗೊತ್ತಾಗುತ್ತೆ. ಅದು ದೇಹ ಬೇಕೆಂದು ಹುಡುಕುತ್ತಿರುತ್ತದೆ. ಅದಕ್ಕಾಗಿಯೇ ಆತ್ಮಕ್ಕೆ ತಿಳಿಯಲಿ ಎಂದೇ ನಾವು ಸಂಸ್ಕಾರಗಳನ್ನು ಮಾಡುತ್ತೇವೆ. ಆತ್ಮದ ಸಮಯ ಮುಗಿದಿದೆ. ಬಂದ ಕೆಲಸ ಮುಗಿದಿದೆ. ನೀನು ಇನ್ನೊಂದು ದೇಹಕ್ಕೆ ಹೋಗಬೇಕು ಎಂದು ತಿಳಿಸಲು ನಾವು ಸಂಸ್ಕಾರಗಳನ್ನು ಮಾಡುತ್ತೇವೆ ಎಂದಿದ್ದಾರೆ.

ಆತ್ಮ ಸಂಭಾಷಣೆ ಮಾಡುವುದಕ್ಕೆ ಸಾಧ್ಯ. ಅದೊಂದು ಟೆಕ್ನಾಲಜಿ. ಆಧ್ಯಾತ್ಮದಲ್ಲಿ ಹಿಂದಿನ ಜನ್ಮಗಳನ್ನು ತಿಳಿದುಕೊಳ್ಳುವುದಕ್ಕೆ ಹೇಗೆ ಟೆಕ್ನಾಲಜಿ ಇದೆಯೋ ಹಾಗೇ ಸತ್ತವರ ಜೊತೆ ಸಂಭಾಷಣೆ ಮಾಡುವಂತಹದ್ದೂ ಇದೆ. ಅಪ್ಪು ಆತ್ಮದ ಜೊತೆ ಸಂಭಾಷಣೆಯನ್ನು ನಾನು ಪಬ್ಲಿಕ್ ಪ್ಲಾಟ್‍ಫಾರ್ಮ್‍ನಲ್ಲಿ ಮಾಡಿಲ್ಲ. ನನ್ನ ವೈಯಕ್ತಿಕ ಮಾಹಿತಿಗೋಸ್ಕರ ನಾನು ಮಾಡಿದ್ದೆ. ಯಾಕಂದ್ರೆ ಅವರ ಅಭಿಮಾನಿಗಳು ಕೋಟಿ ಲೆಕ್ಕದಲ್ಲಿ ಇದ್ದಾರೆ. ಎಂದು ಡಾ. ಶ್ರೀ ರಾಮಚಂದ್ರ ಗುರೂಜಿ ಹೇಳಿಕೊಂಡಿದ್ದಾರೆ.

ನನ್ನ ಮೊದಲ ಪ್ರಶ್ನೆ ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ಉಹಾಪೋಹಗಳಿವೆ ಇದು ನಿಜನಾ? ಈ ಪ್ರಶ್ನೆಗೆ ಇಲ್ಲ ನಾನು ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿದ್ದೇನೆ ಎಂದರು. ಎರಡನೇ ಪ್ರಶ್ನೆ ದೇಹದಿಂದ ಬಿಟ್ಟು ಹೋದ್ರಲ್ಲ ಈಗ ಎಲ್ಲಿದ್ದೀರಿ ಎಂದು ಕೇಳಿದ್ದೆ. ಅದಕ್ಕೆ ಅವರು ಅಪ್ಪ-ಅಮ್ಮನ ಹುಡುಕಾಟದಲ್ಲಿ ಇದ್ದೇನೆ ಎಂದಿದ್ದರು. ಮೂರನೇ ಪ್ರಶ್ನೆ ಕೇಳಿದ್ದು, ಮತ್ತೆ ಹುಟ್ಟಿ ಬರ್ತಿರಾ ಅಂತ. ಅದರ ಬಗ್ಗೆ ಯೋಚನೆ ಮಾಡಿಲ್ಲ. ಒಂದೊಮ್ಮೆ ಹುಟ್ಟಿಬರುವುದಾದರೆ ನಾನು ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ. ಇದಿಷ್ಟು ಆತ್ಮದ ಜತೆ ಸಂಭಾಷಣೆ ಮಾಡಿ ತಿಳಿದುಕೊಂಡಿದ್ದು ಎಂದಿದ್ದಾರೆ.

- Advertisement -

Latest Posts

Don't Miss