Beauty tips: ಇಂದಿನ ಕಾಲದ ಯುವಕ ಯುವತಿಯರಿಗೆ ತಲೆಗೂದಲು ಉದುರುವುದು ಪ್ರಮುಖ ಸೌಂದರ್ಯ ಸಮಸ್ಯೆಯಾಗಿದೆ. ಪುರುಷರು, ಮಹಿಳೆಯರು ಇಬ್ಬರೂ ಈ ಸಮಸ್ಯೆ ಎದುರಿಸುತ್ತಿದ್ದು, ಮಾರುಕಟ್ಟೆಗೆ ಬರುವ ಎಲ್ಲ ಪ್ರಾಡಕ್ಟ್‌ಗಳ ಬಳಕೆ ಮಾಡುತ್ತಿದ್ದಾರೆ. ಆದರೆ ಕೂದಲು ಉದುರುವಿಕೆಯ ಸಮಸ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವಿಂದು ದಾಸವಾಳವನ್ನು ಬಳಸಿ ಯಾವ ರೀತಿ ನೀವು ನಿಮ್ಮ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..
ದಾಸವಾಳವನ್ನು ದೇವರ ಪೂಜೆಗೆ ಬಳಸುವುದರ ಜೊತೆಗೆ, ಕಶಾಯ, ಕೆಲವು ಆಹಾರ ಪದಾರ್ಥ ಮಾಡುವಾಗಲೂ ಬಳಸುತ್ತಾರೆ. ದಾಸವಾಳದಿಂದ ಕಶಾಯ, ಜ್ಯೂಸ್, ಮಾಕ್‌ಟೇಲ್, ದೋಸೆ ಮಾಡುತ್ತಾರೆ. ಅಲ್ಲದೇ, ಕೂದಲಿನ ಆರೋಗ್ಯ ವೃದ್ಧಿ ಮಾಡಲು ದಾಸವಾಳ ಪ್ರಮುಖ ಪಾತ್ರ ವಹಿಸುತ್ತದೆ. ನಾಲ್ಕು ದಾಸವಾಳ ಮತ್ತು 20 ದಾಸವಾಳದ ಎಲೆಯನ್ನು ಚೆನ್ನಾಗಿ ತೊಳೆದು, ಮೊಸರಿನೊಂದಿಗೆ ರುಬ್ಬಿ ಪೇಸ್ಟ್ ತಯಾರಿಸಿ, ತಲೆಬುಡಕ್ಕೆ ಹಚ್ಚಿದ್ರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ಅಲ್ಲದೇ ಒಂದು ಬೌಲ್ ತೆಂಗಿನ ಎಣ್ಣೆ, ಅರ್ಧ ಬೌಲ್ ಹರಳೆಣ್ಣೆ, ಕೊಂಚ ಮೆಂತ್ಯೆ ಕಾಳು, ಕೊಂಚ ಕರಿಬೇವಿನ ಎಲೆ, 5ರಿಂದ 6 ದಾಸವಾಳದ ಎಲೆ, ಭೃಂಗರಾಜ ಎಲೆ, ಒಂದೆಲಗದ ಎಲೆ, ಗರಿಕೆ, ಈರುಳ್ಳಿ ಇವೆಲ್ಲವನ್ನೂ ಮಿಕ್ಸ್ ಮಾಡಿ, ಚೆನ್ನಾಗಿ ಕುದಿಸಿ, ಎಣ್ಣೆ ತಯಾರಿಸಿ. ಈ ಎಣ್ಣೆಯನ್ನು ತಲೆ ಸ್ನಾನ ಮಾಡುವ 2 ಗಂಟೆ ಮುನ್ನ ಕೊಂಚ ಬೆಚ್ಚಗೆ ಮಾಡಿ, ಕೂದಲ ಬುಡಕ್ಕೆ ಅಪ್ಲೈ ಮಾಡಿದ್ರೆ, ಕೂದಲು ಚೆನ್ನಾಗಿ ಬೆಳೆಯುತ್ತದೆ.
ಇನ್ನು ಒಂದು ಸ್ಪೂನ್ ನೆಲ್ಲಿಕಾಯಿ ಪುಡಿ, ಒಂದು ಸ್ಪೂನ್ ದಾಸವಾಳದ ಪುಡಿ, 1 ಸ್ಪೂನ್ ಸಿಗೇಕಾಯಿ ಪುಡಿ, ಮೊಸರು ಇವೆಲ್ಲವನ್ನೂ ಮಿಕ್ಸ್ ಮಾಡಿ, ಹೇರ್ ಪ್ಯಾಕ್ ತಯಾರಿಸಿ. ಇದನ್ನು ಕೂದಲಿಗೆ ಅಪ್ಲೈ ಮಾಡಿ, ಒಣಗಿದ ಬಳಿಕ, ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಿ. ಆದರೆ ಈ ಹೇರ್ ಪ್ಯಾಕ್ ತಲೆಗೆ ಅಪ್ಲೈ ಮಾಡುವ ಮುನ್ನ, ತಲೆಗೆ ಎಣ್ಣೆ ಹಚ್ಚಿರಬಾರದು. ವಾರಕ್ಕೊಮ್ಮೆ ಈ ಹೇರ್ ಪ್ಯಾಕ್ ಹಾಕಿದ್ರೆ, ಕೂದಲು ಸುಂದರವಾಗಿ ಬೆಳೆಯುತ್ತದೆ.
ಫಾಸ್ಟ್ಫುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಗೊತ್ತಾ..?
Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..