Wednesday, August 20, 2025

Latest Posts

ತೋಟದ ಮನೆಯಲ್ಲಿ ನೆರವೇರಿದ ನಿಖಿಲ್-ರೇವತಿ ಕಲ್ಯಾಣ

- Advertisement -

ರಾಮನಗರ : ಲಾಕ್ ಡೌನ್ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮದುವೆ ರೇವತಿ ಜೊಜಯತೆ ನೆರವೇರಿತು.. ಬಿಡದಿ ಸಮೀಪದ ತೋಟದಲ್ಲಿ ಮನೆಯಲ್ಲಿ ನಿರ್ಮಿಸಲಾಗಿದ್ದ ಮಂಟಪದಲ್ಲಿ ನಿಖಿಲ್-ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ರು.. ನಿಖಿಲ್ ಮದುವೆಯಾದ ಯುವತಿ ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಸಹೋದರನ ಪುತ್ರಿ. ಕುಮಾರಸ್ವಾಮಿ ಮೊದಲೇ ಹೇಳಿದಂತೆ 30 ರಿಂದ 50 ಮಂದಿ ಮಾತ್ರ ಭಾಗಿಯಾಗಿದ್ರು.. ಕುಮಾರಸ್ವಾಮಿ ಸಹೋದರ, ಸಹೋದರಿಯರ ಕುಟುಂಬ ಹಾಗೂ ಯುವತಿಯ ಕಡೆಯವರು ಮಾತ್ರ ಮದುವೆಯಲ್ಲಿ ಭಾಗಿಯಾದ್ರು.

10 ಲಕ್ಷ ಜನ ಸೇರಿಸಿ ಮದುವೆಗೆ ಮುಂದಾಗಿದ್ದ ಕುಮಾರಸ್ವಾಮಿ.

ರಾಮನಗರ, ಮಂಡ್ಯದ ಲಕ್ಷಾಂತರ ಜನರನ್ನ ಸೇರಿಸಿ ಮದುವೆ ಮಾಡುವ ಉದ್ದೇಶದಿಂದ ಕುಮಾರಸ್ವಾಮಿ ಕಳೆದ ತಿಂಗಳು ಜನಪದ ಲೋಕದ ಬಳಿ ಬೃಹತ್ ಮೈದಾನದಲ್ಲಿ ಪೆಮಡಾನ್ ಹಾಕಿಸುತ್ತಿದ್ರು. ಆದ್ರೆ ಕೊರೊನಾ ಹಾವಳಿ ಹೆಚ್ಚಾಗಿ ಯಾವಾಗ ಲಾಕ್ ಡೌನ್ ಘೋಷಣೆಯಾಯ್ತೋ ಆಗ ಕುಮಾರಸ್ವಾಮಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ವಿವಿಐಪಿಗಳ ಕರೆದು ಮದುವೆ ಮಾಡುವ  ಇಂಗಿತ ವ್ಯಕ್ತಪಡಿಸಿದ್ರು. ಆದ್ರೆ, ಲಾಕ್ ಡೌನ್ ಬಿಗಿಯಾದ ಕಾರಣ ಸುಖಸುಮ್ಮನೆ ಯಾಕೆ ಆರೋಪಕ್ಕೆ ಗುರಿಯಾಗೋದು ಅಂತ ನಿಗದಿಯಾದ ದಿನವೇ ತೋಟದ ಮನೆಯಲ್ಲಿ ಮದುವೆ ನೆರವೇರಿಸಿದ್ದಾರೆ..

 ಕೊರೊನಾ ಕರಿನೆರಳು ಮುಗಿದ ಮೇಲೆ ಕಾರ್ಯಕರ್ತರಿಗೆ ಊಟ

ಇನ್ನು ಈ ಕೊರೊನಾ ಛಾಯೆ ಕಡಿಮೆಯಾದ ಮೇಲೆ ಮೊದಲೇ ನಿಗದಿಯಾದಂತೆ ಜನಪದ ಲೋಕದ ಬಳಿ ಜೆಡಿಎಸ್ ಕಾರ್ಯಕರ್ತರಿಗಾಗಿ ಬೃಹತ್ ರಿಸೆಪ್ಷನ್ ಮಾಡುವು ಉದ್ದೇಶವನ್ನ ಕುಮಾರಸ್ವಾಮಿ ಹೊಂದಿದ್ದಾರೆ.. ಹಾಗೆ ನೋಡಿದ್ರೆ ಈ ವರ್ಷಾಂತ್ಯಕ್ಕೆ ಕುಮಾರಸ್ವಾಮಿ ಅಂದುಕೊಂಡ ಕಾರ್ಯ ನೆರವೇರಲಿದೆ..

ಕರ್ನಾಟಕ ಟಿವಿ, ರಾಮನಗರ

https://www.youtube.com/watch?v=J6T1BB274cs
- Advertisement -

Latest Posts

Don't Miss