ರಾಮನಗರದಲ್ಲಿ ಬಾಲಕಿ ಹ*ತ್ಯೆ ಕೇಸ್‌ಗೆ ಬಿಗ್ Twist: ಅ*ತ್ಯಾಚಾರವಾಗಿಲ್ಲ ಎಂದು FSL ವರದಿಯಲ್ಲಿ ಬಹಿರಂಗ

Ramanagara News: ರಾಮನಗರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿ, ರೈಲ್ವೆ ಹಳಿಯ ಬಳಿ ಬಿಸಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಸಾವಿಗೆ ನ್ಯಾಯ ಕ“ಡಿಸಬೇಕು ಎಂದು ಬಾಲಕಿಯ ಮನೆಯವರು ಆಗ್ರಹಿಸಿದ್ದರು. ಆದರೆ ಇದೀಗ ಈ ಕೇಸ್‌ಗೆ ದೊಡ್ಡ ತಿರುವು ಸಿಕ್ಕಿದೆ. ಇದು ಹತ್ಯೆಯಾಗಿರುವುದಲ್ಲ, ಬದಲಾಗಿ ರೈಲ್ವೆ ಡಿಕ್ಕಿಯಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಹಕ್ಕಿ ಪಿಕ್ಕಿ ಜನಾಂಗದವಳಾಗಿದ್ದ 14 ವರ್ಷದ ಬಾಲಕಿ ಖುಷಿ ಎಂಬ ಬಾಲಕಿ ಕೆಲ ದಿನಗಳ ಹಿಂದೆ ಶವವಾಗಿ ಸಿಕ್ಕಿದ್ದಳು. ಆಕೆಯ ಬೆನ್ನು ಮೂಳೆ ಮುರಿದು, ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಳು. ಆಕೆಗೆ ಮಾತು ಬಾರದ ಕಾರಣ  ಮತ್ತು ಕಿವಿ ಕೇಳದ ಕಾರಣ, ದುರುಳರು ಆಕೆಯ ಮಾನಹರಣ ಮಾಡಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಆದರೆ ರಾಜ್ಯದಲ್ಲಿ ಹೀಗೆ ಸಂಚಲನ ಮೂಡಿಸಿದ್ದ ಪ್ರಕರಣವನ್ನು ಕೈಗೆತ್ತಿಕೋಂಡಿದ್ದ ಪೋಲೀಸರು, ಈ ಬಗ್ಗೆ ತನಿಖೆ ನಡೆಸಿದಾಗ, ಈಕೆಗೆ ರೈಲು ಡಿಕ್ಕಿಯಾದ ಪರಿಣಾಮ ಈಕೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಅಲ್ಲದೇ ಇದೇ ಕಾರಣಕ್ಕೆ ಈಕೆಯ ಶವ ರೈಲ್ವೆ ಹಳಿಯ ಬಳಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಅಲ್ಲದೇ ಎಫ್‌ಎಸ್‌ಎಲ್ ವರದಿಯಲ್ಲಿ ಖುಷಿ ಮೇಲೆ ಅತ್ಯಾಚಾರ ನಡೆದಿಲ್ಲವೆಂದು ಧೃಡವಾಗಿದೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕ ಇದು ಹತ್ಯೆಯೋ, ಆತ್ಮಹತ್ಯೆಯೋ ತಿಳಿಯಬೇಕಿದೆ. ಆದರೆ ಹಕ್ಕಿ ಪಿಕ್ಕಿ ಜನಾಂಗದ ಅಧ್ಯಕ್ಷರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಕೇಸನ್ನು ಸಿಬಿಐಗೆ ನೀಡಬೇಕು. ಅಪಘಾತವೆಂದು ಕೇಸನ್ನು ಮೂಲೆಗೆ ತಳ್ಳಬೇಡಿ. ಬಾಲಕಿಯ ಸಾವಿಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸಿದ್ದಾರೆ. ಅಲ್ಲದೇ ಕೆಲ ವರದಿಗಳ ಮೇಲೆ ನಮಗೆ ನಂಂಬಿಕೆ ಬರುತ್ತಿಲ್ಲ. ಸಿಬಿಐ ವರದಿ ಮೇಲೆ ಮಾತ್ರ ನಮಗೆ ನಂಬಿಕೆ ಬರುತ್ತದೆ ಎಂದು ಹೇಳಿದ್ದಾರೆ.

About The Author