www.karnatakatv.net ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಉತ್ತರಿಸಿದ ಅವರು, ರಾಜೀನಾಮೆ ನೀಡುವ ವಿಚಾರ ಮುಗಿದ ಹೋದ ಅಧ್ಯಾಯ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾಡಿದ್ದು ನಿಜ. ಆದ್ರೆ ಈಗ ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ್ದಾರೆ. ಹಿರಿಯರ ಸಲಹೆ ಹಿನ್ನೆಲೆ ರಾಜೀನಾಮೆ ವಿಚಾರವನ್ನ ಕೈಬಿಟ್ಟಿದ್ದೇನೆ. ಅಲ್ಲದೆ ಕೆ ಆರ್ ಎಸ್ ಬಿರುಕಿನ ಬಗ್ಗೆ ಎಚ್ ಡಿ ಕೆ ಹಾಗೂ ಸುಮಲತಾ ನಡುವೆ ಟಾಕ್ ವಾರ್ ವಿಚಾರವಾಗಿ ಉತ್ತರಿಸಿದ ಅವರು, ಯಾರು ಏನ್ ಮಾತನಾಡಿದ್ದಾರೆ ಜಾಸ್ತಿ ಮಾಹಿತಿ ಇಲ್ಲ. ಕೆ ಆರ್ ಎಸ್ ಎಂಡಿ ಅವರು ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಂಡಿ ಹೇಳುವುದು ಫೈನಲ್. ಸುಮಲತಾ ಯಾಕೆ ಹೀಗೆ ಹೇಳಿದ್ರು ಅಂತ ನನಗೆ ಗೊತ್ತಿಲ್ಲ ಎಂದ್ರು. ಇನ್ನೂ ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬೆಂಗಳೂರು, ಮುಂಬೈ ಹೋಗಿದೆ. ಸುದ್ದಿಗೋಷ್ಠಿ ಮಾಡುವ ಸಂದರ್ಭ ಬಂದಿಲ್ಲ.
ಬಾಲಚಂದ್ರ ಜಾರಕಿಹೊಳಿ ಜತೆಗೆ ಈ ಬಗ್ಗೆ ಮಾತನಾಡುತ್ತೇನೆ. ಜಂಟಿ ಸುದ್ದಿಗೋಷ್ಠಿ ನಡೆಸುವ ಸಂದರ್ಭದ ಬಂದ್ರೆ ಮಾಡೋಣಾ. ನಾನು ಒಂಟಿ ಆಗುವ ಪ್ರಶ್ನೆ ಇಲ್ಲ. ನಾನೇ ಮಿತ್ರ ಮಂಡಳಿ ಸದಸ್ಯರನ್ನು ಭೇಟಿಯಾಗಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.