Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪ್ರಧಾನಿ ಮೋದಿಯವರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಗೋಡ್ಸೆಯಂಥವರನ್ನು ಪೂಜಿಸುವವರು ಇದ್ದಾರೆ. ಗೋಡ್ಸೆ ಬಂದು ಗಾಂಧಿ ಕಾಲು ಮುಗಿದಾಗ, ಪಾಪ ಹುಡುಗ ಅಂತಾ ಆಶೀರ್ವಾದ ಮಾಡಲು ಹೋದ ಗಾಂಧಿಯನ್ನು ಹತ್ಯೆ ಮಾಡಿದವರನ್ನು ಪೂಜಿಸುವ ಜನ ನಮ್ಮ ದೇಶದಲ್ಲಿದ್ದಾರೆ. ಹಾಗಾದ್ರೆ ನಮ್ಮ ದೇಶ ಎತ್ತ ಸಾಗುತ್ತಿದೆ ಎಂದು ರಮೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಇನ್ಕಿಲಾಫ್ ಜಿಂದಾ ಬಾದ್ ಎಂದು ಧೈರ್ಯವಾಗಿ ಹೇಳಿದ ಭಗತ್ ಸಿಂಗ್ ಹುಟ್ಟಿದ ಅದೇ ದೇಶಾನಾ ಇದು..? ಮಗನ ಹೆಣಕ್ಕೆ ಹಾಕಲು ಬಟ್ಟೆ ಇಲ್ಲದಿರುವಾಗ, ಪತ್ನಿಯ ಸೀರೆ ಬಳಸು ಎಂದು ಹೇಳಿದ ಅಂಬೇಡ್ಕರ್ ಬದುಕಿದ ಅದೇ ದೇಶಾನಾ ಇದು ಎಂದು ರಮೇಶ್ವ ಕುಮಾರ್ ಪ್ರಶ್ನಿಸಿದ್ದಾರೆ.
ಇನ್ನು ಪಟೇಲರು, ರಾಮಕೃಷ್ಣ ಹೆಗಡೆ ಅವರ ಬಗ್ಗೆ ಮಾತನಾಡಿರುವ ರಮೇಶ್ ಕುಮಾರ್ ಅವರೆಲ್ಲ ನನ್ನ ಆತ್ಮೀಯರು. ಸಿಎಂ ಸಿದ್ದರಾಮಯ್ಯ ಕೂಡ ನನ್ನ ಆತ್ಮೀಯರು. ಆದರೆ ಅವರಿಗೆ ನಾನು ಆತ್ಮೀಯನೋ ಇಲ್ಲವೋ ತಿಳಿದಿಲ್ಲ. ಅದನ್ನೂ ನಾನೇ ಹೇಳಿದ್ರೆ ತಪ್ಪಾಗತ್ತೆ ಎಂದು ಹೇಳಿದ್ದಾರೆ ರಮೇಶ್ ಕುಮಾರ್..
ಇನ್ನು ರಮೇಶ್ ಕುಮಾರ್ ಅಂದ್ರೆ ಸ್ಪೀಕರ್ ಆಗಿರುವ ದಿನಗಳೇ ನೆನಪಾಗತ್ತೆ. ನಿಮಗೆ ನೆಚ್ಚಿನ ಸ್ಪೀಕರ್ ಯಾರಾಗಿದ್ದರು. ಅದನ್ನು ಹೇಗೆ ವ್ಯಾಖ್ಯಾನ ಮಾಡ್ತೀರಿ ಅಂತಾ ಕೇಳಿದಾಗ ಉತ್ತರಿಸಿದ ರಮೇಶ್ ಕುಮಾರ್.. ಸ್ಪೀಕರ್ ಅಂದ್ರೆ, ಸಭೆಯಲ್ಲಿರುವ ಜನರ ಭಾವನೆಗಳನ್ನು, ಸ್ವಭಾವಗಳನ್ನು, ಸಾಮರ್ಥ್ಯವನ್ನು, ವೈಫಲ್ಯವನ್ನು ಎಲ್ಲವನ್ನೂ ಗಮನದಲ್ಲಿರಿಸಿ, ಸಭೆಗೆ ಅನ್ಯಾಯವಾಗದಂತೆ, ಗೌರವಕ್ಕೆ ಚ್ಯುತಿ ಬಾರದಂತೆ, ಸಾರ್ವಜನಿಕ ಹಿತ ಸಾಯದಂತೆ, ಬಹಳ ಹುಷಾರಾಗಿ ಕೆಲಸ ಮಾಡಬೇಕು.
ಕೆಲವು ಸದಸ್ಯರಿಗೆ ಮಾತನಾಡಲು ಹಿಂಜರಿಕೆ ಇರುತ್ತದೆ. ಧೈರ್ಯವಿರುವುದಿಲ್ಲ. ಅಂಥವರನ್ನೆಲ್ಲ ಗಮನಿಸಿ, ಕರೆದು, ಮಾತಾಡಬೇಕು. ಅವರಿಗೆ ಧೈರ್ಯ ನೀಡಬೇಕು. ಕೆಲವು ಅಹಂಕಾರಿಗಳಾಗಿರುತ್ತಾರೆ. ಅಂಥವರ ಎದುರು ಸ್ವಲ್ಪ ಹತೋಟಿಯಲ್ಲಿರುವಂತೆ ನೋಡಬೇಕಾಗುತ್ತದೆ. ವಿರೋಧ ಪಕ್ಷಗಳ ಸದಸ್ಯರಿಗೂ ಪ್ರಶ್ನೆ ಕೇಳಲು ಅವಕಾಶ ನೀಡಬೇಕು. ಹೀಗೆ ಹಲವು ವಿಷಯಗಳ ಬಗ್ಗೆ ಸ್ಪೀಕರ್ ಆದವರು ಗಮನ ಹರಿಸಬೇಕು ಎಂದಿದ್ದಾರೆ ರಮೇಶ್ ಕುಮಾರ್.
ಅಲ್ಲದೇ, ಕೋಪದ ಜತೆ ಹಾಸ್ಯವಿರಬೇಕು. ನಾನು ನನ್ನ ಸ್ಪೀಕರ್ ಅವಧಿಯಲ್ಲಿ ನಾನೆಂದಿಗೂ ಬೆಲ್ ಮುಟ್ಟಲೇ ಇಲ್ಲ ಅಂತಾರೆ ರಮೇಶ್ ಕುಮಾರ್. ಇನ್ನು ಈ ಅವಧಿಯಲ್ಲಿ ಸೆಶನ್ ನೋಡಿದ್ರೆ ನಿಮಗೆ ಏನೆನ್ನಿಸುತ್ತೆ ಅಂತಾ ಕೇಳಿದಾಗ ಉತ್ತರಿಸಿದ ರಮೇಶ್ ಕುಮಾರ್, ಹಳೆಯ ಸ್ಪೀಕರ್ಗಳೆಲ್ಲ ಬುದ್ಧಿವಂತರಾಗಿದ್ದರು. ಹಲವು ವಿಷಯಗಳ ಬಗ್ಗೆ ಅವರಿಗೆ ಜ್ಞಾನವಿತ್ತು ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ಇನ್ನು ಮೋದಿಯವರ ಆಡಳಿತದ ಬಗ್ಗೆ ಮಾತನಾಡಿರುವ ರಮೇಶ್ ಕುಮಾರ್, ಮೋದಿಯವರೇ ನೀವು ಭ್ರಷ್ಟಾಚಾರದ ವಿರುದ್ಧ ಇದ್ದೀರಿ. ನಾವು ಮೆಚ್ಚುತ್ತೇವೆ. ಆದರೆ ಚುನಾವಣೆ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣ ವ್ಯಯವಾಗುತ್ತಿದೆ. ಭ್ರಷ್ಟಾಚಾರ ನಡೆಯುತ್ತಿದೆ. ಅದಕ್ಕಾಗಿ ಉಗ್ರ ನಿಯಮಗಳನ್ನು ತಂದು ಭ್ರಷ್ಟಾಚಾರವನ್ನು ನಿಲ್ಲಿಸಬಹುದು ನೀವು. ಯಾಕೆ ಆ ಬಗ್ಗೆ ಮಾತನಾಡುವುದಿಲ್ಲ..?ನಿಮ್ಮ ಈ ನಿಲುವನ್ನು ನಾವು ಸ್ವೀಕರಿಸಬೇಕಾ..? ವಿರೋಧಿಸಬೇಕಾ ನೀವೇ ಹೇಳಿ..?.. ನೀವು ಎಂದು ಪ್ರಧಾನಿ ಮೋದಿಗೆ ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




