Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕರ್ನಾಟಕ ಟಿವಿ ಸಂದೇಶದಲ್ಲಿ ಮಾತನಾಡಿದ್ದು, ತಾವು ಫಸ್ಟ್ ಟೈಂ ಚುನಾವಣೆ ಎದುರಿಸಿದಾಗ ಏನೇನಾಯ್ತು ಅನ್ನೋ ಬಗ್ಗೆ ವಿವರಿಸಿದ್ದಾರೆ.
ಈ ವೇಳೆ ತಮ್ಮ ಪತ್ನಿಯ ಬಗ್ಗೆ ಮಾತನಾಡಿರುವ ರಮೇಶ್ ಕುಮಾರ್, 2023ರಲ್ಲಿ ನಾನು ನನ್ನ ಪತ್ನಿಯನ್ನು ಕಳೆದುಕೊಂಡೆ. ಆ ಬಳಿಕ ನಾನು ಸ್ವಲ್ಪ ಕುಗ್ಗಿ ಹೋದೆ. ಆಕೆ ನನ್ನ ಸೋದರ ಮಾವನ ಮಗಳೇ ಆಗಿದ್ದಳು. ನಾನು ಗೌರವಯುತವಾಗಿ ಬದುಕೋಕ್ಕೆ ಅವಳೂ ಕಾರಣವಾಗಿದ್ದಳು., ನನ್ನ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದ್ದಳು. ಮಕ್ಕಳಿಗೆ ಜೀವನದ ಶೈಲಿ ಹೇಳಿಕೊಟ್ಟಿದ್ದಳು. ಹೀಗೆ ಹಲವು ಜವಾಬ್ದಾರಿಗಳನ್ನು ಅವಳು ನಿಭಾಯಿಸುತ್ತಿದ್ದಳು.
ಆದರೆ ಸಡನ್ನಾಗಿ ಅವರು ದೂರವಾದಾಗ, ಎಲ್ಲೋ ಒಂದು ಕಡೆ ಮನಸ್ಸಿಗೆ ಕಷ್ಟವಾಗುತ್ತದೆ. ಇದರ ಜೊತೆಗೆ ಚುನಾವಣೆಗೂ ನಿಲ್ಲುವ ಹಾಗೂ ಇಲ್ಲಾ ಬಿಡುವ ಹಾಗೂ ಇಲ್ಲಾ.. ಆದರೂ ನಿಂತೆ. ಹೋರಾಟ ಮಾಡಿದ್ದೇನೆ. ಪ್ರಾಮಾಣಿಕವಾಗಿಯೂ ಇದ್ದೆ ನಾನು. ಆದರೂ ಜನ ನನ್ನ ಕೈ ಬಿಟ್ರು ಅಂತಾ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಬಾಡಿಗೆ ಮನೇಲಿ ಇದ್ದಾಗ, ನನಗೆ ಮಂತ್ರಿಯಾಗುವ ಅವಕಾಶ ಸಿಕ್ಕಿತು. ಆದರೆ ಪತ್ನಿ, ನಾವು ಸರ್ಕಾರಿ ಬಂಗ್ಲೆಗೆ ಹೋಗೋದು ಬೇಡಾ. ಅದನ್ನು ನಾನು ನಿಭಾಯಿಸೋಕ್ಕೆ ಆಗಲ್ಲ. ಮತ್ತೆ ಮನೆ ಮುಂದೆ ಬೋರ್ಡ್ ಹಾಕ್ಬೇಡಿ ಎಂದು ಪತ್ನಿ ಹೇಳಿದ್ದರು ಎಂದು ತಮ್ಮ ಪತ್ನಿಯ ಬಗ್ಗೆ ರಮೇಶ್ ಕುಮಾರ್ ನೆನಪಿಸಿಕೊಂಡಿದ್ದಾರೆ.
ಬಳಿಕ ತಾವು ಎಷ್ಟು ಸಿಂಪಲ್ ಆಗಿ ಬದುಕು ಸಾಗಿಸಿದ್ದಾರೆ ಎಂದು ರಮೇಶ್ ಕುಮಾರ್ ಅವರೇ ವಿವರಿಸಿದ್ದಾರೆ. ಅಲ್ಲದೇ, ರಮೇಶ್ ಕುಮಾರ್ ಅವರು ಭೂಗಳ್ಳರೆಂದು ಆರೋಪಿಸಿದ್ದರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




