ಬಹುಭಾಷಾ ನಟ ರಮೇಶ್ ಅರವಿಂದ್ ಗೆ ಹುಟ್ಟುಹಬ್ಬ.! ಬರ್ತ್ ಡೇಗೆ ಅಭಿಮಾನಿಗಳಿಗೆ ಡಬ್ಬಲ್ ಧಾಮಾಕಾ.!

ಬಹುಭಾಷಾ ನಟ ರಮೇಶ್‌ ಅರವಿಂದ್‌ ನಿರ್ದೇಶಕರಾಗಿ, ನಿರೂಪಕರಾಗಿ ಸೈ ಎನಿಸಿಕೊಂಡವರು. ನೋಡ ನೋಡುತ್ತಲೇ ನೂರು ಸಿನಿಮಾಗಳ ಸರದಾರ ರಾದ ಎವರ್ ಗ್ರೀನ್ ಹೀರೋ.
ಈ ಇವತ್ತು ರಮೇಶ್​ಗೆ ಬರ್ತ್ ಡೇ ಸಂಭ್ರಮ.

ಬರ್ತ್ ಡೇ ವಿಶೇಷವಾಗಿ ರಮೇಶ್​ ನಟನೆಯ ಶಿವಾಜಿ ಸುರತ್ಕಲ್‌ ಚಿತ್ರದ ಟೀಸರ್​ ರಿಲೀಸ್​ ಆಗಿದೆ. ಇದು ರಮೇಶ್​​ ಅಭಿನಯದ 101 ನೇ ಚಿತ್ರ. ಅಂದಹಾಗೇ ಶಿವಾಜಿ ಸುರತ್ಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ರಮೇಶ್‌ ಡಿಟೆಕ್ಟಿವ್​​ ರೋಲ್​ನಲ್ಲಿ ಕಾಣಿಸಿಕೊಂಡಿದ್ದು, ಗೆಟಪ್‌ ನೋಡುಗರ ಗಮನ ಸೆಳೆಯುತ್ತಿದೆ. ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಗಿದಿದ್ದು, ಡಬ್ಬಿಂಗ್‌ ಕೆಲಸ ಕೊನೆಯ ಹಂತದಲ್ಲಿದೆ. ರಾಧಿಕಾ ಚೇತನ್‌ ಹಾಗು ಆರೋಹಿ ನಾರಾಯಣ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಆಕಾಶ್‌ ಶ್ರೀವತ್ಸ ನಿರ್ದೇಶಿಸಿದ್ದಾರೆ. ರೇಖಾ ಕೆ.ಎನ್‌ ಮತ್ತು ಅನೂಪ್‌ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತವಿದೆ.

ಇನ್ನು ಇದರ ಜೊತೆ ರಮೇಶ್ ಅರವಿಂದ್ ನಟ‌ನೆ ಮತ್ತೊಂದು ಸಿನಿಮಾ ಭೈರಾದೇವಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ಇಲ್ಲಿ ರಮೇಶ್ ಅರವಿಂದ್ ಪುಂಡರನ್ನ ಭೇಟೆಯಾಡೋ ಖಾಕಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

About The Author