- Advertisement -
ಸ್ಯಾಂಡಲ್ ವುಡ್ ನಲ್ಲಿ ಹಾಗಾಗೇ ನಡೆಯೋ ಸ್ಟಾರ್ ವಾರ್ ಬಗ್ಗೆ ಹೇಳಬೇಕಿಲ್ಲ. ಇತ್ತೀಚೆಗೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಟ್ವೀಟ್ ಟ್ವೀಟ್ ನಲ್ಲಿ ಟಾಂಗ್ ಕೊಟ್ಟಿದ್ರು. ಈಗ ಬಾಸ್ ಪಟ್ಟಕ್ಕಾಗಿ ಜೋಡೆತ್ತುಗಳ ನಡುವೆ ವಾರ್ ಶುರುವಾಗಲಿದೆ ಅನ್ನೋ ಸುದ್ದಿ ಈಗ ಗಾಂಧಿ ನಗರದ ತುಂಬೆಲ್ಲಾ ಹರಡಿದೆ
ಅದಕ್ಕೆ ಕಾರಣ ಯಶ್ ಟ್ವೀಟ್.
ಯಶ್ ಗಡ್ಡದ ವಿಚಾರಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮಾಡಿದ್ರು. ಅದ್ರಲ್ಲಿ ಯಶ್ #BeardoBoss ಎನ್ನುವ ಹ್ಯಾಶ್ ಟ್ಯಾಗ್ ಬಳಕೆ ಮಾಡಿದ್ರು. ಇದ್ರಲ್ಲಿ ಬಾಸ್ ವಿಚಾರ ಬಂದ್ದೇ ತಡ ಯಶ್ ಅಭಿಮಾನಿಗಳು #YashBoss ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ವೀಟರ್ ಟ್ರೇಂಡ್ ಶುರು ಮಾಡಿದ್ದಾರೆ.
ಇದು ದಚ್ಚು ಅಭಿಮಾನಿಗಳನ್ನ ಕೆಣಕಿದೆ. ಯಾರು ಏನೇ ಹೇಳಿದ್ರು ದರ್ಶನ್ ಅವರೇ ನಿಜವಾದ ಬಾಸ್. ಅವರನ್ನು ಬಿಟ್ಟು ಬೇರೆ ಯಾರು ಬಾಸ್ ಇಲ್ಲ ಅಂತಾ ಹೇಳಿದ್ದಾರೆ.
- Advertisement -