www.karnatakatv.net: ಸಿನಿಮಾ: ನಟಿ ರಮ್ಯಾ ಬಹಳ ಹಿಂದೆ ನಡೆದಿದ್ದ ಘಟನೆಯನೆಲ್ಲಾ ಇದೀಗ ನೆನಪಿಸಿಕೊಂಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ವಿವರವಾಗಿ ಬರೆದಿದ್ದಾರೆ..‘ಕಾಂಗ್ರೆಸ್ನ ಕೆಲವು ಮಾಜಿ ಸಂಸದರು, ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಜರ್ಮನಿ ಪ್ರವಾಸಕ್ಕೆ ತೆರಳಿದ್ವಿ.. ಒಂದು ದಿನ ಬರ್ಲಿನ್ನ ಒಂದು ಮ್ಯೂಸಿಯಂಗೆ ಭೇಟಿ ನೀಡಿದ್ದೆವು. ಅಲ್ಲಿನ ರಾಜಕಾರಣಿಗಳು ನಮಗೆ ಅವರ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ತೋರಿಸುತ್ತಿದ್ದರು. ಆಗ ನಾನು ರಾಹುಲ್ ಗಾಂಧಿಯವರ ಕೆಲವು ಫೋಟೋಗಳನ್ನು ಕ್ಲಿಕ್ ಮಾಡಿ, ಇಂಡಿಯಾದಲ್ಲಿರುವ ನನ್ನ ಟೀಮ್ಗೆ ಕಳಿಸಿದೆ. ಬೇಡದ ಕಾರಣಕ್ಕಾಗಿ ಆ ಫೋಟೋಗಳು ವೈರಲ್ ಆಗಿಬಿಟ್ಟವು’ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಆ ಫೋಟೋಗಳನ್ನೇ ಇಟ್ಟುಕೊಂಡು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ರು. ‘ನಾನು ರಾಹುಲ್ ಗಾಂಧಿ ಬಳಿ ಹೋಗಿ ಕ್ಷಮೆ ಕೇಳಿ, ನನ್ನ ರಾಜೀನಾಮೆ ನೀಡಿದೆ. ಆದ್ರೆ, ಅವರು ಸ್ವೀಕರಿಸಲಿಲ್ಲ. ಮುಂದೆಂದಾದರು ಈ ರೀತಿಯ ಪೋಸ್ಟ್ ಮಾಡುವಾಗ ಎಚ್ಚರದಿಂದಿರಿ ಎಂದು ರಾಹುಲ್ ಗಾಂಧಿ ಅವರ ಗುಣವನ್ನು ರಮ್ಯಾ ಹೊಗಳಿದ್ದಾರೆ.




