www.karnatakatv.net: ರಾಜ್ಯ- ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಕೊವಿಡ್-19ರ ಕಾರಣದಿಂದ ಕಳೆದ 02 ತಿಂಗಳಿಂದ ಸ್ಥಗಿತಗೊಳಿಸಿದ್ದ ತಿರುಪತಿ ಬಾಲಾಜಿ ಶೀಘ್ರ ದರ್ಶನ ಪ್ರವಾಸ ಪ್ಯಾಕೇಜನ್ನ ಮತ್ತೆ ಆರಂಭಗೊಳಿಸಿದೆ. ದಿನಾಂಕ: (30.06.2021)ರಿಂದ ಅನ್ವಯವಾಗುವಂತೆ ಪುನಃ ಪ್ರಾರಂಭಿಸಲು ಕ್ರಮಕೈಗೊಂಡಿದೆ. ಪ್ರಸಿದ್ಧ ಪ್ರವಾಸಿ ತಾಣಗಳು, ಪಾರಂಪರಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಬಹುದು. ಕೆಎಸ್ಟಿಡಿಸಿ ವಾರದ 7 ದಿನ ಪ್ರವಾಸಿಗರಿಗೆ ಸೇವೆ ನೀಡಲಿದೆ. ಇನ್ನು, ಹಿರಿಯ ನಾಗರಿಕರಿಗೆ ಸದರಿ ಪ್ರವಾಸದ ಸಾರಿಗೆ ವೆಚ್ಚದಲ್ಲಿ ಶೇ.20ರಷ್ಟು ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಿದೆ. ಇದೇ ವೇಳೆ ಪ್ರವಾಸಿಗರಿಗೆ ನಿಯೋಜಿಸಲಾಗಿರುವ ವಾಹನಗಳನ್ನ ಪ್ರತೀ ದಿನ ಸ್ಯಾನಿಟೈಸ್ ಮಾಡುವುದು, ಪ್ರವಾಸಿಗರು ಹಾಗೂ ಸಿಬ್ಬಂದಿಗಳಿಗೆ ಪ್ರತೀ ದಿನ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು, ಆಸನಗಳನ್ನು ಸಾಮಾಜಿಕ ಅಂತರದೊಂದಿಗೆ ಕಾಯ್ದಿರಿಸುವುದು ಮುಖ್ಯವಾಗಿ ಎಲ್ಲಾ ಪ್ರವಾಸಿಗರು ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಗಳನ್ನ ಬಳಸುವಂತೆ ಕಡ್ಡಾಯಗೊಳಿಸುವುದು. ಹೀಗೆ ಹಲವು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.