Sunday, March 3, 2024

Latest Posts

ಕಿಡ್ನಿ ವೈಫಲ್ಯ ವದಂತಿ- ನಟ ರಾಣಾ ದಗ್ಗುಬಾಟಿ ಹೇಳಿದ್ದೇನು ಗೊತ್ತಾ..?

- Advertisement -

ಬಾಹುಬಲಿಯ ಬಲ್ಲಾಳದೇವ ನಟ ರಾಣಾ ದಗ್ಗುಬಾಟಿಗೆ ಕಿಡ್ನಿ ವೈಫಲ್ಯ ಎದುರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರ ತಾಯಿಯೇ ಅವರಿಗೆ ಕಿಡ್ನಿ ದಾನವಾಗಿ ಕೊಟ್ಟಿದ್ದಾರೆ ಅಂತ ಕೆಲ ದಿನಗಳಿಂದ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ವದಂತಿಗೆ ಇದೀಗ ತೆರೆ ಬಿದ್ದಿದೆ. ನಾನಗೇನೂ ಆಗಿಲ್ಲ, ಚೆನ್ನಾಗಿದ್ದೇನೆ, ಇಂಥಹ ಸುದ್ದಿ ಓದೋದನ್ನು ಬಿಡಿ ಅಂತ ಅಭಿಮಾನಿಗಳಿಗೆ ರಾಣಾ ಹೇಳಿದ್ದಾರೆ.

ಕೆಲ ದಿನಗಳಿಂದ ಸಿನಿ ಪ್ರೇಕ್ಷಕರಲ್ಲಿ ರಾಣಾ ಕಿಡ್ನಿ ವೈಫಲ್ಯ ವಿಚಾರ ಬೇಸರ ತರಿಸಿತ್ತು. ಛೇ… ಸಣ್ಣವಯಸ್ಸಿನಲ್ಲೇ ಇಂತಹ ಅದ್ಭುತ ಪ್ರತಿಭೆಗೆ ಈ ರೀತಿ ಆಗಬಾರದಿದ್ದು ಅಂತ ಸಿನಿರಸಿಕರು ಬೇಸರಗೊಂಡಿದ್ರು. ಆದ್ರೀಗ ಸ್ವತಃ ನಟ ರಾಣಾ ದಗ್ಗುಬಾಟಿ ಈ ಸುದ್ದಿ ಕೇವಲ ವದಂತಿ, ನಾನು ಚೆನ್ನಾಗಿದ್ದೇನೆ ಅಂತ ಹೇಳೋ ಮೂಲಕ ಈ ರೂಮರ್ ಗೆ ತೆರೆ ಎಳೆದಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ ಯುಎಸ್ ಗೆ ತೆರಳಿರೋ ರಾಣಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ತನ್ನ ತಾಯಿ ಲಕ್ಷ್ಮಿ ಮಗನಿಗೆ ಕಿಡ್ನಿ ದಾನ ಮಾಡಿರೋದಾಗಿ ಮಾಧ್ಯಮಗಳೂ ಸುದ್ದಿ ಪ್ರಸಾರ ಮಾಡಿದ್ದವು. ಇದನ್ನು ಕೇಳಿ ಅವಾಕ್ಕಾಗಿದ್ದ ಸ್ವತಃ ರಾಣಾ ಇದೀಗ ಸಾಮಾಜಿಕ ಜಾಲತಾಣ ಇನ್ಸ್ ಟಾಗ್ರಾಮ್ ನಲ್ಲಿ ಸ್ಪಷ್ಟನೆ ನೀಡಿದಿದ್ದಾರೆ. ನಾನು ಯುಎಸ್ ಗೆ ಬಂದಿರೋದೇನೋ ನಿಜ, ಆದ್ರೆ ನನ್ನ ಮುಂದಿನ ಚಿತ್ರದ ಕುರಿತಾಗಿ ಅಧ್ಯಯನ ನಡೆಸಲು ಇಲ್ಲಿಗೆ ಬಂದಿರುವೆ. ಇಂಥಹ ಸುದ್ದಿಯನ್ನು ಅಭಿಮಾನಿಗಳು ಓದಲೇ ಬೇಡಿ ಅಂತ ರಾಣಾ ತಿಳಿಸಿದ್ದಾರೆ.

ಅಂದಹಾಗೆ ರಾಣಾ ಬಗ್ಗೆ ಈ ವದಂತಿ ಹಬ್ಬೋದಕ್ಕೆ ಕಾರಣ ಕೂಡ ಇದೆ, ಬಾಹುಬಲಿ ಚಿತ್ರದ ನಟನೆಗಾಗಿ ನಿರ್ದೇಶಕ ರಾಜಮೌಳಿ ಸಲಹೆಯಂತೆ ಪಾತ್ರಕ್ಕೆ ತಕ್ಕಂತೆ ತೂಕ ಹೆಚ್ಚಿಸಿಕೊಂಡಿದ್ರು. ಆದ್ರೆ ಇದೇ ರಾಣಾ ಕೆಲವೇ ದಿನಗಳಲ್ಲಿ ತೆರೆ ಕಾಣಲು ಸಿದ್ಧವಾಗಿರೋ ಹಾಥಿ ಮೇರೆ ಸಾಥಿ ಚಿತ್ರಕ್ಕಾಗಿ ತೂಕ ಇಳಿಸಿಕೊಂಡು ಸಣಕಲನಂತೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ದಿಢೀರನೆ ಹೀಗೆ ತೂಕದಲ್ಲಿ ವೈಪರೀತ್ಯವಾದ್ರೆ ಕಿಡ್ನಿಗೆ ತೊಂದರೆ ಎನ್ನುವುದರ ಕುರಿತು ಎಲ್ಲೋ ಓದಿದ್ದನ್ನು ನೆನಪುಮಾಡಿಕೊಂಡು ಜನ ತಲೆ ತೋಚಿದ ವದಂತಿಯನ್ನೇ ಹಬ್ಬಿಸಿದ್ದಾರೆ.

ಇನ್ನು ರಾಣಾ, ನಟನೆಗೂ ಮುನ್ನ ದೊಡ್ಡ ಗ್ರಾಫಿಕ್ಸ್ ಡಿಸೈನರ್ ಆಗಿದ್ರು. ಈಗಲೂ ವಿಎಫ್ ಎಕ್ಸ್ ಬಗ್ಗೆ ಆಸಕ್ತಿ ಹೊಂದಿದ್ದು ತಮ್ಮ ಮುಂದಿನ ಚಿತ್ರ’ ಹಿರಣ್ಯ ಕಶ್ಯಪ್’ ಗಾಗಿ ಕೆಲ ವಾರಗಳ ಮಟ್ಟಿಗೆ ಯುಎಸ್ ನಲ್ಲಿ ಅಧ್ಯಯನ ನಡೆಸ್ತಿದ್ದಾರೆ. ಒಟ್ಟಾರೆ, ನಟ ರಾಣಾಗೆ ಏನೂ ಆಗಿಲ್ಲ ಅಂತ ತಿಳಿದಿರೋದೇ ಅಭಿಮಾನಿಗಳಿಗೆ ಇದೀಗ ಖುಷಿಯ ವಿಷಯವಾಗಿದೆ.

- Advertisement -

Latest Posts

Don't Miss