Sunday, September 8, 2024

Latest Posts

ರಣಜಿ ಫೈನಲ್: ಸಂಪೂರ್ಣ ಹಿಡಿತ ಸಾಧಿಸಿದ ಮಧ್ಯಪ್ರದೇಶ 

- Advertisement -

ಬೆಂಗಳೂರು: ಯಶ್ ದುಬೆ ಹಾಗೂ ಶುಭಂ ಶರ್ಮಾ ಅವರುಗಳ ಶತಕ ನೆರೆವಿನಿಂದ ಮಧ್ಯಪ್ರದೇಶ ತಂಡ ಬಲಿಷ್ಠ ಮುಂಬೈ ಎದುರು ಸಂಪೂರ್ಣ ಮೇಲುಗೈ ಸಾಸಿದೆ. ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಕನಸಿನ ಸನಿಹಕ್ಕೆ ಸಾಗಿದೆ.

ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಮೂರೆ ದಿನದಾಟದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಯಶ್ ದುಬೆ (336 ಎಸೆತ, 133 ರನ್), ಶುಭಂ ಶರ್ಮಾ (116 ರನ್, 215 ಎಸೆತ), ಶತಕ ಸಿಡಿಸಿ ಮುಂಬೈ ಬೌಲರ್ಸ್‍ಗಳ ಬೆವರಿಳಿಸಿದರು.

ಪಿಚ್‍ನ ಲಾಭ ಪಡೆದ ಇಬ್ಬರು ಬ್ಯಾಟರ್‍ಗಳು ಮುಂಬೈ ತಂಡವನ್ನು ಚೆಂಡಾಡಿದರು.

ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್‍ನಲ್ಲಿ 3 ವಿಕೆಟ್ ನಷ್ಟಕ್ಕೆ 368 ರನ್ ಗಳಿಸಿದೆ. 6 ರನ್‍ಗಳ ಹಿನ್ನಡೆ ಅನುಭವಿಸಿದೆ.

ಮುಂಬೈ ಮೊದಲ ಇನ್ನಿಂಗ್ಸ್‍ನಲ್ಲಿ 374 ರನ್ ಗಳಿಸಿತು. ಆದರೆ  ಯಶ್ ದುಬೆ ಹಾಗೂ ಶುಭಂ ಶರ್ಮಾ ಇಡೀ ದಿನ ಬ್ಯಾಟಿಂಗ್ ಮಾಡಿ 245 ರನ್‍ಗಳ ಜೊತೆಯಾಟ ಆಡಿ ಪಂದ್ಯದ  ದಿಕ್ಕನ್ನೆ ಬದಲಿಸಿದರು.

ಮಧ್ಯಪ್ರದೇಶ ಬ್ಯಾಟರ್‍ಗಳ ವಿಕೆಟ್ ಪಡೆಯಲು ಮುಂಬೈ ಬೌಲರ್‍ಗಳು ತಿಣುಕಾಡಿದರು. ಅದರಲ್ಲೂ ಎಡಗೈ ಸ್ಪಿನ್ನರ್ ಶಾಮ್ಸ್ ಮುಲಾನಿ 117 ರನ್ ಕೊಟ್ಟು ಕೇವಲ 1 ವಿಕೆಟ್ ಪಡೆದರು. ವೇಗಿ ಧವಳ್ ಕುಲಕರ್ಣಿ 51 ರನ್ ನೀಡಿ  ವಿಕೆಟ್ ಪಡೆಯದೆ ನಿರಾಸೆ ಅನುಭವಿಸಿದರೆ ತುಷಾರ್ ದೇಶಪಾಂಡೆ 73 ರನ್ ನೀಡಿ 1 ವಿಕೆಟ್ ಕಬಳಿಸಿದರು.

14 ಬೌಂಡರಿ ಸೇರಿ ಒಟ್ಟು 133 ರನ್ ಹೊಡೆದ ಯಶ್ ದುಬೆ ಶಾಮ್ಸ್ ಮುಲಾನಿಗೆ ವಿಕೆಟ್ ಒಪ್ಪಿಸಿದರು. 15 ಬೌಂಡರಿ, 1 ಸಿಕ್ಸರ್ ಒಟ್ಟು 116 ರನ್ ಹೊಡೆದು ಒಟ್ಟು  ಶುಭಮನ್ ಶರ್ಮಾ  ವೇಗಿ ಮೋಹಿತ್ ಅವಸ್ತಿಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ರಜತ್ ಪಟಿದಾರ್ 13 ಬೌಂಡರಿ ಹೊಡೆದು ತಂಡದ ಅಜೇಯ 67 ರನ್ ಸಿಡಿಸಿ ರನ್ ವೇಗ ಹೆಚ್ಚಿಸಿದರು. ಆದಿತ್ಯ ಶ್ರೀವಾಸ್ತವ ಅಜೇಯ 11 ರನ್ ಗಳಿಸಿ ಮೂರನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡರು. ಮಧ್ಯಪ್ರದೇಶ ತಂಡ ದೊಡ್ಡ ಇನ್ನಿಂಗ್ಸ್ ಕಟ್ಟಲು ನಿರ್ಧರಿಸಿದ್ದು ಮುಂಬೈ ತಂಡಕ್ಕೆ ಅವಕಾಶ ಸಿಗದಂತೆ ಆಡಲು ನಿ`ರ್ಧರಿಸಿದೆ.

ಬಾಕಿ ಉಳಿದಿರುವ ಇನ್ನೆರಡು ದಿನಗಳಲ್ಲಿ ಪವಾಡ ನಡೆದರೆ ಮಾತ್ರ 41ರ ಚಾಂಪಿಯನ್ ಮುಂಬೈ ತಂಡ ಮತ್ತೆ ಟ್ರೋಫಿ ಎತ್ತಿ ಹಿಡಿಯಬಹುದಾಗಿದೆ.

ಸಂಕ್ಷಿಪ್ತ ಸ್ಕೋರ್    

ಮುಂಬೈ ಮೊದಲ ಇನ್ನಿಂಗ್ಸ್  374 ಆಲೌಟ್

ಸರ್ïರಾಜ್ ಖಾನ್ 134, ಯಶಸ್ವಿ ಜೈಸ್ವಾಲ್ 78

ಗೌರವ್ ಯಾದವ್4, ಅನುಭವ್ ಅಗರ್‍ವಾಲ್ 3 ವಿಕೆಟ್

ಯಶ್ ದುಬೆ 133, ಶುಭಂ ಶರ್ಮಾ 116 ರನ್

ಮೋಹಿತ್ ಅವಸ್ತಿ 1, ತುಷಾರ್ ದೇಶಪಾಂಡೆ 73ಕ್ಕೆ 1 

ರಾಹುಲ್‍ರಂತೆ ಸಂಭ್ರಮಿಸಿದ ಯಶ್ ದುಬೆ

ಮುಂಬೈ ಎದುರು ಶತಕ ಸಿಡಿಸಿ ಸಂಭ್ರಮಿಸಿದÀ ಯಶ್ ದುಬೆ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ನೆನೆಪಿಸಿದರು. ಶತಕ ಸಿಡಿಸಿದಾಗ ಹೆಲ್ಮಟ್ ಕಳಚಿ ಎರಡು ಕಿವಿಯಲ್ಲಿ ಬೆರೆಳಿಟ್ಟು ಸಂಭ್ರಮಪಟ್ಟರು. ಕೆ.ಎಲ್.ರಾಹುಲ್ ಕೂಡ ಈ ರೀತಿಯ ಸಂ`ಭ್ರಮಾಚರಣೆ ಮಾಡಿದ್ದಾರೆ. ಟೀಕಾಕಾರರ ಮಾತಿಗೆ ಕಿವಿಗೊಡದೆ ರನ್ ಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸುವುದು ಇದರ ಉದ್ದೇಶವಾಗಿದೆ.

 

 

 

 

- Advertisement -

Latest Posts

Don't Miss