Thursday, December 12, 2024

Latest Posts

ವಿಶ್ವ ದಾಖಲೆ ಬರೆದ ದೇಸಿ ಸಾಮ್ರಾಟ ಮುಂಬೈ :92 ವರ್ಷದ ಹಳೆಯ ದಾಖಲೆ  ಉಡೀಸ್¸? 

- Advertisement -

ಬೆಂಗಳೂರು: ದೇಸಿ ಕ್ರಿಕೆಟ್ನ ಸಾಮ್ರಾಟ ಮುಂಬೈ ಕ್ರಿಕೆಟ್ ತಂಡ ಉತ್ತರಾಖಂಡ ವಿರುದ್ಧ  ಭಾರೀ ಅಂತರಗಳ ದಾಖಲೆಯ 725 ರನ್ಗಳಿಂದ ಗೆದ್ದು ಮೊದಲ ದರ್ಜೆ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದಿದೆ. ಜೊತೆಗೆ ಸೆಮಿಫೈನಲ್ ತಲುಪಿದೆ.

92 ವರ್ಷ ಹಿಂದಿನ ಶೆಫಿಫೀಲ್ಡ್ ದಾಖಲೆಯನ್ನು ಅಳಿಸಿ ಹಾಕಿದೆ. ನ್ಯೂ ಸೌತ್ ವೇಲ್ಸ್ ತಂಡ ಕ್ವೀನ್ಸ್ ಲ್ಯಾಂಡ್ ತಂಡದ ವಿರುದ್ಧ  685 ರನ್ಗಳ ಅಂತರದಿಂದ ಗೆದ್ದಿತ್ತು. ಇದೀಗ ಈ ದಾಖಲೆಯನ್ನು ಮುಂಬೈ ತಂಡ ಅಳಿಸಿ ಹಾಕಿದೆ.

ಇನ್ನು ರಣಜಿ ಟ್ರೋಫಿಯಲ್ಲಿ 1953-54ರಲ್ಲಿ ಬಂಗಾಳ ತಂಡ ಒಡಿಶಾ ವಿರುದ್ಧ 540 ರನ್ಗಳ ಅಂತರದಿಂದ ಗೆದ್ದಿತ್ತು.

ಮೊನ್ನೆ ಬಂಗಾಳ ತಂಡ ಒಂದೇ ಇನ್ನಿಂಗ್ಸ್ ನಲ್ಲಿ ತಂಡದ 9 ಬ್ಯಾಟರ್ಗಳು ಅರ್ಧ ಶತಕ ಸಿಡಿಸಿ 129 ವರ್ಷದ ಹಳೆಯ ದಾಖಲೆ ಯನ್ನು ಮುರಿದಿತ್ತು. ಈ ದಾಖಲೆ ಮುರಿದ ಬೆನ್ನಲ್ಲೇ ಮುಂಬೈ ವಿಶ್ವ ದಾಖಲೆ ಬರೆದಿದೆ.

41ರ ಚಾಂಪಿಯನ್ ಮುಂಬೈ ಮೊದಲ ಇನ್ನಿಂಗ್ಸನಲ್ಲಿ 647/8 ಡಿಕ್ಲೇರ್  ಮಾಡಿಕೊಂಡಿತು. ಎರಡನೆ ಇನ್ನಿಂಗ್ಸ್ನ  261/3 ಡಿಕ್ಲೇರ್ ? ಮಾಡಿಕೊಂಡಿತು. ಉತ್ತರಾಖಂಡ್ ಮೊದಲ ಇನ್ನಿಂಗ್ಸನಲ್ಲಿ 114 ಮತ್ತು 2ನೇ ಇನ್ನಿಂಗ್ಸ್ನಲ್ಲಿ 69 ರನ ಗಳಿಸಿತು.

ಕಾರ್ತಿಕೇಯಾ ಸ್ಪಿನ್ ಮೋಡಿ 

ಸ್ಪಿನ್ನರ್ ಕುಮಾರ್ ಕಾರ್ತಿಕೇಯಾ (6 ವಿಕೆಟ್) ಸೊಗಸಾದ ಸ್ಪಿನ್ ಮೋಡಿಯ ನೆರೆವಿನಿಂದ ಮಧ್ಯ ಪ್ರದೇಶ ತಂಡ ಪಂಜಾಬ್ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಸೆಮಿಗೆ ಲಗ್ಗೆ ಹಾಕಿದೆ. ಎರಡನೆ ಇನ್ನಿಂಗ್ಸನಲ್ಲಿ  ಪಂಜಾಬ್ 203 ರನ್ ಗಳಿಗೆ ಆಲೌಟ್ ಆಯಿತು. 26ರನ್ಗಳ ಸುಲಭ ಗುರಿಯೊಂದಿಗೆ 2ನೇ ಇನ್ನಿಂಗ್ಸ್ನ ಆರಂಭಿಸಿದ ಯಾವುದೇ ವಿಕೆಟ್ ನಷ್ಟವಿಲ್ಲದೇ 26 ರನ್  ಗಳಿಸಿ ಗೆಲುವು ಕಂಡಿತು.

ಗೆಲುವಿನತ್ತ ಬಂಗಾಳ ತಂಡ 

ಮತ್ತೊಂದು ಕ್ವಾರ್ಟರ್ನಲ್ಲಿ ಜಾರ್ಖಂಡ್ ತಂಡದ ವಿರುದ್ಧ ಬಂಗಾಳ ತಂಡ 551 ರನ್ಗಳ ಮ್ನುನಡೆ ಪಡೆದಿದೆ.  ನಾಲಕ್ನೆ ದಿನದಾಟದ ಪಂದ್ಯದಲ್ಲಿ ಜಾರ್ಖಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 298 ರನ್ಗಳಿಗೆ ಆಲೌಟ ಆಯಿತು. ಎರಡನೆ ಇನ್ನಿಂಗ್ಸ್ ಆರಂಭಿಸಿದ ಬಂಗಾಳ 3 ವಿಕೆಟ್ ನಷ್ಟಕ್ಕೆ 76 ರನ್  ಗಳಿಸಿ ಒಟ್ಟು 551 ರನ್ ಮ್ನುನಡೆ ಪಡೆದಿದೆ.

ದಾಖಲೆ ಬರೆದ ಬಂಗಾಳ

ಜಾರ್ಖಂಡ್ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಬಂಗಾಳ ದಾಖಲೆ ಬರೆದಿದೆ. ಬಂಗಾಳ ತಂಡದ 9 ಬ್ಯಾಟರ್ಗಳು ಅರ್ಧ ಶತಕ ಸಿಡಿಸಿದ್ದಾರೆ. 1893ರಲ್ಲಿ ಆಕ್ಸ್ ಫರ್ಡ್್ ಮತ್ತು ಕೇಂಬ್ರಿಡ್ಜ್ ವಿವಿ ವಿರುದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡದ 8 ಬ್ಯಾಟರ್ಗಳು ಅರ್ಧ ಶತಕ ಸಿಡಿಸಿದ್ದರು.

 

 

 

 

 

 

- Advertisement -

Latest Posts

Don't Miss