Monday, December 23, 2024

Latest Posts

ರಂಗಸಮುದ್ರ ಅತಿಥಿ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್

- Advertisement -

ರಂಗಸಮುದ್ರಕ್ಕೆ ಹೋಗತ್ಲಾಗ ಎಂದ ಪ್ರೇಮಲೋಕದ ಮಾಂತ್ರಿಕ…

ಸಂಕ್ರಾಂತಿ ಹಬ್ಬದಂದು ಬಿಡುಗಡೆ ಮಾಡಿದ್ದಂತಹ ಈ ಚಿತ್ರದ ಕೈಲಾಶ್ ಖೇರ್ ಹಾಡಿರುವ ‘ಕೈಲಾಸ ಭೂಮಿಗಿಳಿದು’ ಲಿರಿಕಲ್ ಸಾಂಗ್ ಸ್ಯಾಂಡಲ್ವುಡ್ ಅಲ್ಲಿ ಇಂದಿಗು ಸದ್ದು ಮಾಡುತ್ತಲೇ ಇದೆ.ಈ ವರ್ಷ ಚಂದನವನದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿಕೊಂಡು ಗಾಂಧಿನಗರ ತುಂಬೆಲ್ಲಾ “ಮೌತ್ ಟಾಕ್” ಆಗಿರುವ ಈ ರೆಟ್ರೋ ಕಥೆಯಾಧರಿತ ‘ರಂಗಸಮುದ್ರ’ ಚಿತ್ರದ ಎರಡನೆಯ ಲಿರಿಕಲ್ ವಿಡೀಯೋ ಸಾಂಗ್ ಪ್ರೇಮಿಗಳ ದಿನದಂದು ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಗೆ ಸಿದ್ದವಾಗಿದೆ.ವಿಶೇಷವೇನೆಂದರೆ ಕನ್ನಡದ ಪ್ರೇಮಕವಿ ಎಂದೆ ಮನೆ ಮನದಲ್ಲು ಇಂದಿಗೂ ಅಚ್ಚುಳಿದಿರುವ ನಾದಬ್ರಹ್ಮ “ಹಂಸಲೇಖ” ಅವರು ಈ ಚಿತ್ರದ ‘ಹೋಗತ್ಲಾಗ’ ಎಂಬಾ ಕಾಮಿಡಿ ಪ್ರೇಮಗೀತೆಯನ್ನು ಬಿಡುಗಡೆ ಮಾಡಿದ್ದಾರೆ.’ದೇಸಿ ಮ್ಯೂಸಿಕ್ ಕಾಲೇಜ್’ ಹಂಸಲೇಖರ ಕನಸಿನ ಕೂಸು. ಅದು ಈಗ ಹೆಮ್ಮರವಾಗಿ ಬೆಳೆದಿರುವುದು ಸತ್ಯ ಸಂಗತಿ. ಈ ಶಾಲೆಯ ವಿಧ್ಯಾರ್ಥಿಗಳು ಇನ್ನು ಮುಂದೆ ಹಂಸಲೇಖರ ಹೆಸರನ್ನು ಗಗನದೆತ್ತರಕ್ಕೆ ಬೆಳೆಸಬಲ್ಲ ಉತ್ತರಾಧಿಕಾರಿಗಳು ಎಂಬುದು ಹಂಸಲೇಖ ಅವರು ನಿಷ್ಕಲ್ಮಷವಾಗಿ ಹೆಮ್ಮೆ ಇಂದ ಹೇಳುವ ಮಾತು.

ಇದೇ ‘ದೇಸಿ’ ಕಾಲೇಜಿನ ವಿಧ್ಯಾರ್ಥಿಗಳು ಈ ಚಿತ್ರಕ್ಕೆ ಜೀವ ತುಂಬಿರುವವರು.
ಈ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಅಸ್ಕಿ, ಸಂಗೀತ ನಿರ್ದೇಶಕ ದೇಸಿ ಮೋಹನ್, ಮತ್ತು ಈ ಚಿತ್ರದ ಎಲ್ಲಾ ಹಾಡುಗಳ ಸಾಹಿತಿ ವಾಗೀಶ್ ಚನ್ನಗಿರಿ ಇದೇ ಹಂಸಲೇಖರ ಪ್ರಿಯ ಶಿಷ್ಯರು ಎಂಬುದು ಮತ್ತೊಂದು ವಿಶೇಷ.ಹಾಸನ ಹಾಗು ಕರ್ನಾಟಕದ ಹಲವು ಭಾಗಗಳಲ್ಲಿ ಸಾಮಾಜಿಕವಾಗಿ ರಾಜಕೀಯವಾಗಿ ತನ್ನದೆ ಆದ ಪ್ರತಿಷ್ಠೆ ಹಾಗು ಅಭಿಮಾನಿ ಬಳಗ ಹೊಂದಿರುವ ಹೊಯ್ಸಳ ಕೊಣನೂರು, ಈ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ. ಕಥೆ ಮನಸ್ಸಿಗೆ ಹತ್ತಿರವಾಗಿರುವ ಕಾರಣಕ್ಕೆ ಈ ಸಿನಿಮಾ ನಿರ್ಮಾಣ ಮಾಡಲು ಒಪ್ಪಿದೆ ಚಿತ್ರ ತೆರೆ ಮೇಲೆ ಬಂದಾಗ ನನ್ನೊಬ್ಬನಿಗಲ್ಲಾ ಪ್ರತಿಯೊಬ್ಬ ವೀಕ್ಷಕರಿಗೂ ಇಷ್ಟವಾಗುತ್ತದೆ ಎನ್ನುತ್ತಾರೆ ನಿರ್ಮಾಪಕ ಹೊಯ್ಸಳ ಕೊಣನೂರು.ಬಿಡುಗಡೆಗೊಂಡಿರುವ ಈ ಉತ್ತರ ಕರ್ನಾಟಕ ಭಾಷೆಯ ರೀತಿಯ ‘ಹೋಗತ್ಲಾಗ’ ಲಿರಿಕಲ್ ಸಾಂಗ್ ಅನ್ನು ಚಿತ್ರದ ಸಂಗೀತ ನಿರ್ದೇಶಕ ದೇಸಿ ಮೋಹನ್ ಅವರೇ ಹಾಡಿದ್ದಾರೆ.ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಂಗಾಯಣ ರಘು, ಸಂಪತ್ ರಾಜ್, ಗುರುರಾಜ್ ಹೊಸಕೋಟೆ,(ದಿ) ಮೋಹನ್ ಜುನೇಜಾ, ಉಗ್ರಂ ಮಂಜು, ಕಾರ್ತಿಕ್ ರಾವ್, ಮೂಗು ಸುರೇಶ್, ದಿವ್ಯ ಗೌಡ, ಸ್ಕಂದ, ಮಹೇಂದ್ರ ಕಾಣಸಿಗಲಿದ್ದಾರೆ.ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿದ್ದರು ಎಂಬುದು ಈ ಹಿಂದೆ ಎಲ್ಲಾ ಮಾದ್ಯಮಗಳಲ್ಲಿ ಪ್ರಸಾರವಾಗಿದ್ದು ಇತಿಹಾಸ. ಆದರೆ ಅದೇ ಪಾತ್ರವನ್ನು ರಾಘವೇಂದ್ರ ರಾಜ್ ಕುಮಾರ್ ಅವರು ನಿರ್ವಹಿಸಿರುವುದು ಖುಷಿಯ ಸಂಗತಿ ಎನ್ನುತ್ತದೆ ಇಡೀ ಚಿತ್ರತಂಡ.ಹೊಸಬರಾದರೂ ಕೂಡ ಸ್ಯಾಂಡಲ್ವುಡ್ ಅಲ್ಲಿ ತನ್ನದೇ ಆದ ಹವಾ ಸೃಷ್ಟಿಸಲು ಹೊರಟಿರುವ ರಂಗಸಮುದ್ರ ಚಿತ್ರತಂಡಕ್ಕೆ ಶುಭವಾಗಲಿ…

- Advertisement -

Latest Posts

Don't Miss