Saturday, April 27, 2024

Latest Posts

ಕರ್ನಾಟಕದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳು.. ಭಾಗ 2 MAHA SHIVARATHRI SPECIAL

- Advertisement -

ಈ ಮೊದಲು ನಾವು ಇದರ ಮೊದಲ ಭಾಗದಲ್ಲಿ ಕರ್ನಾಟಕದಲ್ಲಿರುವ ಶಿವನ 10 ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರಮುಖ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಆರನೇಯ ದೇವಸ್ಥಾನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ.. ಇದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿದೆ. ಈ ದೇವಸ್ಥಾನದಲ್ಲಿ ಪೂಜಾರಿ ಜನಾಂಗದವರು ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಅಲ್ಲದೇ ನವರಾತ್ರಿಯಲ್ಲಿ ಒಂಭತ್ತು ದಿನ ನವದುರ್ಗೆಯರನ್ನ ಕೂರಿಸಲಾಗತ್ತೆ. ಹಾಗಾಗಿ ಕುದ್ರೋಳಿ ದಸರಾ ತುಂಬಾ ಪ್ರಸಿದ್ಧಿಯನ್ನ ಪಡೆದಿದೆ.

ಏಳನೇಯ ದೇವಸ್ಥಾನ ನಂಜನಗೂಡು ನಂಜುಂಡೇಶ್ವರ ದೇವಸ್ಥಾನ.. ಇದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿದೆ.ಇಡೀ ಕರ್ನಾಟಕದಲ್ಲಿ ದೊಡ್ಡ ದೇವಸ್ಥಾನ ಅಂದ್ರೆ ನಂಜುಂಡೇಶ್ವರನ ದೇವಸ್ಥಾನ. ಇದನ್ನ ದಕ್ಷಿಣ ಕಾಶಿ ಅಂತ ಕರೆಯುತ್ತಾರೆ. ಕಪಿಲಾ ನದಿ ತಟದಲ್ಲಿರುವ ಈ ದೇವಸ್ಥಾನದಲ್ಲಿ ಶ್ರೀಕಂಠೇಶ್ವರನನ್ನು ಪೂಜಿಸಲಾಗುತ್ತದೆ.

ಎಂಟನೇಯ ದೇವಸ್ಥಾನ ಹಂಪಿಯ ವಿರೂಪಾಕ್ಷ ದೇವಸ್ಥಾನ.. ಲಕ್ಕಣ್ಣ ದಂಡೇಶರು ಎಂಬುವವರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಹೊಯ್ಸಳು, ಚಾಲುಕ್ಯರು ಆಳ್ವಕೆ ನಡೆಸುತ್ತಿದ್ದ ಕಾಲದಲ್ಲೇ ಈ ದೇವಸ್ಥಾನ ನಿರ್ಮಿಸಲಾಗಿದ್ದು, ಇಲ್ಲಿ ಶಿವನ ರೂಪವಾದ ವಿರೂಪಾಕ್ಷನನ್ನು ಪೂಜಿಸಲಾಗುತ್ತದೆ.

ಒಂಭತ್ತನೇಯ ದೇವಸ್ಥಾನ ಚಿಕ್ಕಬಳ್ಳಾಪುರದ ಆದಿಯೋಗಿ ಮಂದಿರ.. ಇದು ಇತ್ತೀಚೆಗೆ ನಿರ್ಮಿಸಲ್ಪಟ್ಟ ಮಂದಿರ. ತಮಿಳುನಾಡಿನಲ್ಲಿರುವ ಆದಿಯೋಗಿ ಮಂದಿರಕ್ಕಿಂತ ಕೊಂಚ ಚಿಕ್ಕದಿರುವ ಈ ಮಂದಿರದಲ್ಲಿ ಶಿವಪೂಜೆ ಸೇರಿ, ಯೋಗ, ಧ್ಯಾನವನ್ನು ಮಾಡಲಾಗತ್ತೆ.

ಹತ್ತನೇಯ ದೇವಸ್ಥಾನ ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನ. ಬೆಂಗಳೂರಿನ ಹೃದಯ ಭಾಗವಾಗಿರುವ ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನ ಪ್ರಸಿದ್ಧ ದೇವಸ್ಥಾನವಾಗಿದೆ. ಸುಂದರ ಕಾನನದ ಮಧ್ಯೆ ಸ್ಥಾಪಿತನಾಗಿರುವ ಮಲ್ಲೇಶ್ವರನಿಗೆ ಪ್ರತೀ ಸೋಮವಾರ, ಶ್ರಾವಣ ಮಾಸ ಮತ್ತು ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸಲಾಗತ್ತೆ.

ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..

ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

- Advertisement -

Latest Posts

Don't Miss