Sunday, May 26, 2024

Latest Posts

13 ರ ಬಾಲಕಿ ಮೇಲೆ 70 ರ ವೃದ್ಧನಿಂದ ಅತ್ಯಾಚಾರ

- Advertisement -

ಕಲಬುರಗಿ‌ : ಅಫಜಲಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧ ಅತ್ಯಾಚಾರ ಎಸಗಿದ್ದು, ಗುರುವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚನಬಸಯ್ಯ ಸಾತಯ್ಯ ಝಳಕಿ ಬಂಧಿತ ಆರೋಪಿ. ಈತ ತಮ್ಮ ಪಕ್ಕದ ಮನೆಯ ಬಾಲಕಿಗೆ ಮೇಣಸಿನ ಕಾಯಿ ಭಜ್ಜಿ ಕೊಡಿಸುವುದಾಗಿ ನಂಬಿಸಿ ಹೊಲಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ಪಾಲಕರು ರೇವೂರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಸೋಮವಾರ ನ.29 ಮಧ್ಯಾಹ್ನ 2 ರ ಸುಮಾರಿಗೆ ಘಟನೆ ನಡೆದಿದೆ. ನಾಲ್ಕು ದಿನಗಳಿಂದ ಬಾಲಕಿ ಗುಪ್ತಾಂಗ ಸಮಸ್ಯೆಯಿಂದ ನರಳುತ್ತಿದ್ದಾಗ ಪಾಲಕರು ವಿಚಾರಿಸಿದ್ದಾರೆ. ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ಅತ್ಯಾಚಾರ ಎಸಗಿದ್ದು ಗೊತ್ತಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest Posts

Don't Miss