Tuesday, December 17, 2024

Latest Posts

ಅತ್ಯಾಚಾರ ಪ್ರಕರಣ; ಕೆಎಂಎಫ್ ಇಂಜಿನಿಯರ್ ಅರೆಸ್ಟ್..!

- Advertisement -

ಬಳ್ಳಾರಿ:ಮದುವೆ ಅಗುವುದಾಗಿ ನಂಬಿಸಿ ಯುವತಿಯೊಬ್ಬಳ ಜೊತೆ ದೈಹಿಕ ಸಂಪರ್ಕ ಬೆಳಸಿ, ಕೊನೆಗೆ ಕೈಕೊಟ್ಟು ಇದೀಗ ರೇಪ್ ಕೆಸ್ ಅಡಿಯಲ್ಲಿ ಬಂಧಿತನಾಗಿದ್ದಾನೆ.

ಬಳ್ಳಾರಿ ಯ ಕೆಎಂಎಫ್ ನಲ್ಲಿ ಅಸಿಸ್ಟೆಂಟ್ ಟೆಕ್ನಿಕಲ್ ಇಂಜಿನಿಯರ್ ಅಗಿರುವ ರಾಯಚೂರು ಮೂಲದ ಪಿ.ವೆಂಕಟೇಶ್ ,ಬಳ್ಳಾರಿ ಮೂಲದ ಪ್ರಿಯಾಂಕ ಎಂಬ ಯುವತಿಯ ಚಿಕ್ಕಪ್ಪನ‌ ಮಗಳು ಬೆಂಗಳೂರಿನಲ್ಲಿದ್ದು, ಸಾಪ್ಟ್ ವೇರ್ ಇಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದ. ಅಕೆಯನ್ನ ನೋಡಲು ಹೋಗಿದ್ದರು ಅದ್ರೆ ಸಂಬಂಧ ಕುದುರಿರಲಿಲ್ಲ ಅಷ್ಟರಲ್ಲೆ ಅವರ ಸಂಬಂಧಿ ಪ್ರಿಯಾಂಕ ಪರಿಚಯವಾಗಿದ್ದಳು. ಪರಿಚಯ ಸ್ನೇಹಕ್ಕೆ ತಿರುಗಿ ಮೆಸೇಜ್ ಗಳ ಮೂಲಕ ಹತ್ತಿರವಾಗಿ ಕಡೆಗೆ ಮದುವೆಯಾಗುವುದಾಗಿ ಇಂಜಿನಿಯರ್ ವೆಂಕಟೇಶ್ ಹೇಳಿದ ಮಾತಿಗೆ ಮರುಳಾದ ಯುವತಿ ತನ್ನ ಸರ್ವಸ್ವವನ್ನು ಅವನಿಗೆ ಅರ್ಪಿಸಿದ್ದಾಳೆ.

ರುಚಿ ಕಂಡಿದ್ದ ಬೆಕ್ಕಿನಂತಾಗಿದ್ದ ವೆಂಕಟೇಶ್ ಪದೆ ಪದೆ ಪೋನ್ ಮೂಲಕ ಕರೆಸಿಕೊಂಡು ಮಜಾ ಮಾಡಿದ್ದಾನೆ.ಕಡೆಗೆ ಯುವತಿ ಮದುವೆಯಾಗೋಣ ಎಂದಾಗ, ಅದೆಲ್ಲಾ ಏನು ಬೇಡ ಪ್ರಂಡ್ಸ್ ಅಗಿ ಇದ್ದು ಬಿಡೋಣ ಅಂತಾ ಹೊಸ ವರಸೆ ಶುರುಮಾಡಿಕೊಂಡಿದ್ದಾನೆ.
ಇಂಜಿನಿಯರ್ ನನ್ನ ಮದುವೆಯಾಗಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಪ್ರಿಯಾಂಕಗೆ ಅಕಾಶವೆ ಕಳಚಿ ತಲೆ ಮೇಲೆ ಬಿದ್ದಂತಾಗಿ, ಪ್ರೇಮ ವಿಚಾರವನ್ನ ಮನೆಯವರಲ್ಲಿ ತಿಳಿಸಿದ್ದಾಳೆ. ವಿಷಯ ತಿಳಿದು ಅಯ್ಯೊ ಮಗಳ ಬದುಕು ಹಿಂಗಾಯ್ತಲ್ಲ ಅಂತಾ ಹೋಗಿ ಕೇಳಿದ್ರೆ ಯಾವುದೇ ಕಾರಣಕ್ಕೂ ನಾನು ಮದುವೆಯಾಗಲ್ಲ, ಅಂತ ಹಠಕ್ಕೆ ಬಿದ್ದಿದ್ದಾನೆ. ಕಡೆಗೆ ಯುವತಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪೋಲಿಸರು ಆರೋಪಿ ಪಿ.ವೆಂಕಟೇಶ್ ಹಾಗೂ ಅವನಿಗೆ ಸಹಕಾರ ನೀಡಿದ ಹಿನ್ನಲೆ ಅಣ್ಣ ರಾಮಕೃಷ್ಣ ತಮ್ಮ ತಾಯಣ್ಣ ಅವರ ಮೇಲೆ ಎಫ್ ಐಆರ್ ದಾಖಲಿಸಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಸಂತೋಷ್ ಕರ್ನಾಟಕ ಟಿವಿ ಬೆಂಗಳೂರು.

- Advertisement -

Latest Posts

Don't Miss