Thursday, December 4, 2025

Latest Posts

ಮತ್ತೆ ಒಂದೇ ಚಿತ್ರದಲ್ಲಿ ರಶ್ಮಿಕಾ-ದೇವರಕೊಂಡ..!

- Advertisement -

ಮತ್ತೆ ಒಂದಾಗಲಿದೆ ಟಾಲಿವುಡ್ ಸೆನ್ಸೇಶನ್ ಜೋಡಿ..!

ಟಾಲಿವುಡ್‌ನಲ್ಲಿ ಒಂದು ಟೈಮ್‌ನಲ್ಲಿ ಸಿಕ್ಕಾಪಟ್ಟೆ ಸೆನ್ಸೇಶನ್ ಕ್ರಿಯೇಟ್ ಮಾಡಿದ ಜೋಡಿಯಂದ್ರೆ ಅದು ಗೀತಾ ಗೋವಿಂದA ಜೋಡಿ. ಎಸ್, ಡಿಯರ್ ಕಾಮ್ರೆಡ್, ಗೀತಾ ಗೋವಿಂದA ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಜೋಡಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.

ಸಿನಿಮಾಗಳನ್ನ ಹೊರತು ಪಡಿಸಿಯೂ ಕೂಡ ಈ ಜೋಡಿಯ ಆಪ್ತತೆ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಅಭಿಮಾನಿಗಳ ವಲಯದಲ್ಲಿ ಹಲವಾರು ಗಾಸಿಪ್‌ಗಳು ಹರಿದಾಡಿದ್ದವು. ಇದೀಗ ಈ ಜೋಡಿ ಮತ್ತೆ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದೆಯಂತೆ. ಯಾವ ಸಿನಿಮಾದಲ್ಲಿ ಅಂತೀರಾ, ಇತ್ತ ರಶ್ಮಿಕಾ ಕೈತುಂಬಾ ಪ್ರಾಜೆಕ್ಸ್÷್ಟಗಳಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ವಿಜಯ್ ದೇವರಕೊಂಡ “ಲೈಗರ್” ಸಿನಿಮಾ ಜೊತೆಯಲ್ಲೇ “ಜನ ಗಣ ಮನ” ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಹಾಗಾದ್ರೆ ಈ ಜೋಡಿ ಯಾವ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಸದ್ಯ ಎಲ್ಲರಲ್ಲೂ ಇದ್ರೆ, ಟಾಲಿವುಡ್‌ನ ಮೂಲಗಳಿಂದ ಮಾಹಿತಿ ಪ್ರಕಾರ ಈ ಜೋಡಿ “ಜನ ಗಣ ಮನ” ಚಿತ್ರದ ಒಂದು ವಿಶೇಷ ಹಾಡೊಂದ್ರಲ್ಲಿ ಒಟ್ಟಿಗೆ ನಟಿಸಲಿದ್ದಾರಂತೆ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡದಿದ್ದರು, ಟಾಲಿವುಡ್ ನಗರಿಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ಪುರಿ ಜಗನ್ನಾಥ್ ಈ ಚಿತ್ರಕ್ಕೆ ಡೈರೆಕ್ಷನ್ ಹೇಳ್ತಿದ್ದು, ವಿಜಯ್ ದೇವರಕೊಂಡಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. 2023ರ ಆಗಸ್ಟ್ ತಿಂಗಳಲ್ಲಿ “ಜನ ಗಣ ಮನ” ಸಿನಿಮಾ ತೆರೆಕಾಣಲಿದೆ.

- Advertisement -

Latest Posts

Don't Miss