ಹುಟ್ಟು ಹಬ್ಬದ ಜೊತೆ ಹುಟ್ಟೂರಲ್ಲಿ ಸಾಂಪ್ರದಾಯಿಕ ರಿಸೆಪ್ಶನ್ ಸೆಲೆಬ್ರೇಟ್ ಮಾಡಿದ ರಶ್ಮಿಕಾ ಮಂದಣ್ಣ

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವಕ“ಂಡ ನಿನ್ನೆ ವಿರಾಜಪೇಟೆಯಲ್ಲಿ ಬರ್ತ್‌ಡೇ ಪಾರ್ಟಿ ಸೆಲೆಬ್ರೇಟ್ ಮಾಡಿದ್ದಾರೆ.

ಜತೆಗೆ ಸಾಂಪ್ರದಾಯಿಕವಾಗಿ ಆರತಕ್ಷತೆ ಕಾರ್ಯಕ್ರಮವನ್ನೂ ಮಾಡಿದ್ದಾರೆ. ರಾಜಸ್ತಾನದಲ್ಲಿ ವಿರೋಶ್ ಮದುವೆಯಾಗಿದ್ದು, ಹೈದರಾಬಾದ್‌ನಲ್ಲಿ ರಿಸೆಪ್ಶನ್ ನಡೆದಿತ್ತು. ಬಳಿಕ ಕೊಡಗಿಗೂ ಬಂದು ರಿಸೆಪ್ಶನ್ ಮಾಡುವುದಾಗಿ ಈ ಜೋಡಿ ಹೇಳಿತ್ತು.

ನಿನ್ನೆ ರಶ್ಮಿಕಾ ಬರ್ತ್‌ಡೇ ಇದ್ದ ಕಾರಣ, ಇಬ್ಬರೂ ಕೊಡಗಿಗೆ ಬಂದಿದ್ದು, ಬರ್ತ್‌ಡೇ ಜತೆಗೆ ಸಾಂಪ್ರದಾಯಿಕವಾಗಿ ಸಂಬಂಧಿಕರು, ಸ್ನೇಹಿತರನ್ನು ಆಮಂತ್ರಿಸಿ, ರಿಸೆಪ್ಶನ್ ಕೂಡ ಸೆಲೆಬ್ರೇಟ್ ಮಾಡಿದ್ದಾರೆ.

ವಿರಾಜಪೇಟೆಯ ಸೆರೆನಿಟಿ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ವಿಜಯ್ ಕಪ್ಪು ಕೋಟ್, ಬಿಳಿ ಶರ್ಟ್ ಧರಿಸಿದ್ದರೆ, ರಶ್ಮಿಕಾ ಕೊಡವ ಸಂಪ್ರದಾಯದ ಸೀರೆಯಲ್ಲಿ ಮಿಂಚಿದ್ದಾರೆ.

About The Author