Film News: ಕಿರಿಕ್ ಪಾರ್ಟಿ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದ ಹಾಲ್ಗೆನ್ನೆ ಬ್ಯೂಟಿ ಇದೀಗ ಬಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಅಂತರ್ ಭಾಷಾ ವ್ಯಾಮೋಹದಿಂದ ಸ್ಯಾಂಡಲ್ ವುಡ್ ನಿಂದ ಹಾರಿದ ರಶ್ಮಿಕಾ ಮಂದಣ್ಣ ಮತ್ತೆ ಕನ್ನಡ ಮಾತನಾಡಿ ಕುತೂಹಲ ಮೂಡಿಸಿದ್ದಾರೆ.
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತನ್ನ ಇನಸ್ಟ್ರಾ ಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗಾಗಿ ಪ್ರಶ್ನಾವಳಿಯನ್ನ ಮಾಡಿದ್ದಾರೆ.
ಆಗ ಅಭಿಮಾನಿಯೋರ್ವ ನೀವು ಕನ್ನಡದಲ್ಲಿ ಮಾತನಾಡುತ್ತೀರಾ ಎಂದಾಗ ಕನ್ನಡದಲ್ಲೇ ರಶ್ಮಿಕಾ ಹಾಯ್ ಎಲ್ಲರಿಗೂ ಹೇಗಿದ್ದೀರಾ ಯಾವಾಗಲೂ ನಗ್ತಾ ಇರಿ ನಾನು ನಿಮ್ಮ ಬಗ್ಗೆ ಯೋಚನೆ ಮಾಡುತ್ತೇನೆ ಮಾಡುತ್ತಿರುತ್ತೇನೆ ಎಂಬುವುದಾಗಿ ಹೇಳಿದ್ದಾರೆ.
ಈ ಮೂಲಕ ಮತ್ತೆ ಕಿರಿಕ್ಬೆಡಗಿ ಕನ್ನಡದ ಮೇಲೆ ಪ್ರೇಮ ತೋರಿದ್ದಾರೆ. ಸದ್ಯ ರಣಬೀರ್ ಕಪೂರ್ ಜೊತೆ ಸಿನಿಮಾ ನಟಿಸಿರುವ ಅನಿಮಲ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಹಾಗು ಪುಷ್ಪ2 ನಂತಹ ಬಿಗ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
Ram pothineni : ಡಬಲ್ ಇಸ್ಮಾರ್ಟ್….2024ರ ಶಿವರಾತ್ರಿಗೆ ಚಿತ್ರ ರಿಲೀಸ್