ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಕೌಂಟ್ಗೆ ಮತ್ತೊಂದು ಮೆಗಾಪ್ರಾಜೆಕ್ಟ್ ಸೇರಿಕೊಂಡಿದೆ. ಹೃತಿಕ್ ರೋಶನ್ ನಟನೆಯ ಸೂಪರ್ ಹಿಟ್ ಸೂಪರ್ ಹೀರೋ ಕ್ರಿಶ್ ಸರಣಿಯ ಹೊಸ ಮೂವಿಗೆ ರಶ್ಮಿಕಾ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಹ್ಯಾಂಡಸಮ್ ಹೃತಿಕ್ ಜೊತೆ ಕಿರಿಕ್ ಬ್ಯೂಟಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಯೆಸ್ ರಶ್ಮಿಕಾನ ಎಲ್ಲರೂ ಲಕ್ಕಿ ಕ್ವೀನ್ ಅಂತಾರೆ. ರಶ್ಮಿಕಾ ನಾಯಕಿಯಾದ್ರೆ ಸಿನಿಮಾ ಸಕ್ಸಸ್ ಖಚಿತ ಅಂತಾರೆ. ಅಂತೆಯೇ ಸದ್ಯ ಹೃತಿಕ್ ಸಾಲು ಸಾಲು ಸೋಲುಗಳ ಸುಳಿಯಲ್ಲಿ ಸಿಲುಕಿರೋ ವಿಷ್ಯ ಕೂಡ ಗೊತ್ತೇ ಇದೆ. ಹೃತಿಕ್ ನಟಿಸಿದ ದೊಡ್ಡ ಬಜೆಟ್ನ ಫೈಟರ್ ಮತ್ತು ವಾರ್-2 ಸಿನಿಮಾಗಳು ನಿರೀಕ್ಷೆಗೆ ತಕ್ಕಂಥ ಯಶಸ್ಸು ಕಾಣಲಿಲ್ಲ.
ಇತ್ತ ರಶ್ಮಿಕಾ ಮಾತ್ರ ಸಾಲು ಸಾಲು ಹಿಟ್ ಕೊಡ್ತಾ ಸಕ್ಸಸ್ ಅಲೆಯಲ್ಲಿ ತೇಲ್ತಾ ಇದ್ದಾರೆ. ಶ್ರೀವಲ್ಲಿ ತನ್ನ ಲಕ್ನಾ ಹೃತಿಕ್ಗೂ ತಂದುಕೊಡ್ತಾರಾ? ಸದ್ಯಕ್ಕೆ ಬಾಲಿವುಡ್ ಫ್ಲಾಪ್ ಹೀರೋ ಎನ್ನಿಸಿಕೊಂಡಿರುವ ನಟ ಹೃತಿಕ್ ರೋಶನ್ ಅವರನ್ನು ‘ಲಕ್ಕೀ ಹೀರೋಯಿನ್’ ಎನ್ನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಸದ್ಯ ಕೈಹಿಡಿದು ಮೇಲೆತ್ತಬಹುದು ಎನ್ನಲಾಗುತ್ತಿದೆ. ಮುಂದಿನದನ್ನು ಕಾದು ನೋಡಬೇಕಷ್ಟೇ! ಅನ್ನೋದನ್ನ ಕಾದುನೋಡಬೇಕಿದೆ.
ಇನ್ನು ಸದ್ಯ ಕ್ರಿಶ್-4 ಸ್ಕ್ರೀನ್ ಪ್ಲೇ, ಬಜೆಟ್, ಕಾಸ್ಟಿಂಗ್ ಎಲ್ಲವೂ ಫೈನಲ್ ಆಗಿದೆ. 2026ರಿಂದ ಚಿತ್ರೀಕರಣ ಆರಂಭವಾಗಲಿದ್ದು, 2027ರಲ್ಲಿ ಕ್ರಿಶ್-4 ರಿಲೀಸ್ ಆಗಲಿದೆ. ಅಲ್ಲಿಗೆ ಹೃತಿಕ್ ಅಂಡ್ ರಶ್ಮಿಕಾ ಕೆಮೆಸ್ಟ್ರಿ ನೋಡಲಿಕ್ಕೆ ಇನ್ನೂ ಎರಡು ವರ್ಷ ಕಾಯಬೇಕಿದೆ.
ವರದಿ : ಲಾವಣ್ಯ ಅನಿಗೋಳ