ಧ್ರುವ ಸರ್ಜಾ ಸತತ ಮೂರು ವರ್ಷಗಳಿಂದ ಪರಿಶ್ರಮ ಹಾಕಿ ನಟಿಸಿರುವ ಸಿನಿಮಾ ಪೊಗರು. ಡೈಲಾಗ್ ಟೀಸರ್, ಸಾಂಗ್ಸ್ ನಿಂದ ಹೊಸ ಅಲೆ ಸೃಷ್ಟಿಸಿರುವ ಪೊಗರು ಸಿನಿಮಾ ಫೆಬ್ರವರಿ 19ರಂದು ಬಿಳ್ಳಿತೆರೆ ಮೇಲೆ ರಾರಾಜಿಸಲಿದೆ. ಈ ಹಿನ್ನೆಲೆ ನಿನ್ನೆ ಪೊಗರು ಟೀಂ ಪ್ರೆಸ್ ಮೀಟ್ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್, ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ, ರಾಘಣ್ಣ ಸೇರಿದಂತೆ ಹಲವು ನಿರ್ಮಾಪಕರು, ನಿರ್ದೇಶಕರು ಭಾಗಿಯಾಗಿದ್ದರು.
ಆದ್ರೆ ಈ ಕಾರ್ಯಕ್ರಮದಲ್ಲಿ ಹೀರೋಯಿನ್ ಅನುಪಸ್ಥಿತಿ ಎದ್ದು ಕಾಣುತಿತ್ತು. ಧ್ರುವ ಸರ್ಜಾ ಜೊತೆ ನಟಿಸಿರುವ ರಶ್ಮಿಕಾ ಮಂದಣ್ಣ ಪ್ರೆಸ್ ಮೀಟ್ ಗೆ ಬಂದಿರಲಿಲ್ಲ. ಅಲ್ಲದೇ ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ಎಲ್ಲಾ ಸಿನಿಮಾಗಳ ಅಪ್ ಡೇಟ್ ನೀಡೋ ಕಿರಿಕ್ ಬೆಡಗಿ ಪೊಗರು ಸಿನಿಮಾ ಬಗ್ಗೆ ತಲೆಕೆಸಿಕೊಂಡಿಲ್ಲ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾತ್ತು.
ಇದೀಗ ಈ ಬಗ್ಗೆ ನಂದಕಿಶೋರ್ ಮಾತನಾಡಿದ್ದು, ಸಿನಿಮಾ ಪ್ರಮೋಷನ್ ಗೆ ರಶ್ಮಿಕಾ ಬಂದೇ ಬರ್ತಾರೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮ ತಂಡದಲ್ಲಿ ಎಲ್ಲರೂ ಒಳ್ಳೆಯವರೇ ಇದ್ದಾರೆ. ನಮ್ಮ ನಡುವೆ ಯಾವುದೇ ಭಿನ್ನಾಪ್ರಾಯವಿಲ್ಲವೆಂದು ಹೇಳಿದರು.