Thursday, December 12, 2024

Latest Posts

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಶುರುವಾಯ್ತು ಸಿನಿಮೋತ್ಸವ.. ರಿಲೀಸ್ ರೆಡಿಯಾಗಿವೆ ಸ್ಟಾರ್ ಹೀರೋ‌ ಸಿನಿಮಾಗಳು…!

- Advertisement -

ಥಿಯೇಟರ್ ಅಂಗಳದಲ್ಲಿ ಪಟಾಕಿಯ ಸದ್ದು-ಗದ್ದಲವಿಲ್ಲ. ದೊಡ್ಡ ದೊಡ್ಡ ಕಟೌಟ್ ನಿಂತಿಲ್ಲ. ಹಾರ ಹಾಕಿ ಸ್ಟಾರ್ ಗೆ ಜೈಕಾರ ಹಾಕೋರಿಲ್ಲ. ಇದೆಲ್ಲ ಚೀನಿ ವೈರಸ್ ಎಫೆಕ್ಟ್. ಕೊರೋನಾ ಭಾರತಕ್ಕೆ‌ ಎಂಟ್ರಿ ಕೊಟ್ಮೇಲೆ ಲಾಕ್ ಡೌನ್ ಮಾಡಲಾಯಿತು. ಸಿನಿಮಾ ವಲಯ ಸೇರಿ‌ ಎಲ್ಲಾ ವಲಯವನ್ನು ಮುಚ್ಚಲಾಯಿತು. ಸದ್ಯ ಸೋಂಕು ನಿಯಂತ್ರಣ ಬರುತ್ತಿದ್ದಂತೆ ಎಲ್ಲಾ ವಲಯಗಳ ಕಾರ್ಯನಿರ್ವಣೆಗೆ ಅವಕಾಶ ಸಿಕ್ಕಿದೆ. ಅದರಂತೆ ಕನ್ನಡ ಚಿತ್ರರಂಗದಲ್ಲಿ ಸತತ ಒಂದು ವರ್ಷದ ಬಳಿಕ ಸಿನಿಮೋತ್ಸವ ಶುರುವಾಗ್ತಿದೆ. ಸಿನಿಮಾ ರಿಲೀಸ್ ಗೆ ಹಿಂದೇಟು ಹಾಕ್ತಿದ್ದ ಸ್ಟಾರ್ ಹೀರೋಗಳ ಬಿಗ್ ಬಜೆಟ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಗೆ ರೆಡಿಯಾಗಿವೆ.

ಜ.29ಕ್ಕೆ ಅನಿಶಾ ರಾಮಾರ್ಜುನ ತೆರೆಗೆ

ಅನಿಶ್ ತೇಜೇಶ್ವರ್ ನಟಿಸಿ‌,‌ ನಿರ್ದೇಶಿಸಿರುವ ನಿಶ್ಚಿಕಾ ನಾಯ್ಡು ನಾಯಕಿಯಾಗಿ ನಟಿಸಿರುವ ರಾಮಾರ್ಜುನ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಜನವರಿ 29ರಂದು ರಾಮಾರ್ಜುನ ಥಿಯೇಟರ್ ಅಂಗಳಕ್ಕೆ ಬರಲಿದೆ.  ಈ ಸಿನಿಮಾಕ್ಕೆ ರಕ್ಷಿತ್ ಶೆಟ್ಟಿ ಸಹ ಬಂಡವಾಳ,  ಕೆಆರ್‌ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ.

ಫೆಬ್ರವರಿ 5ಕ್ಕೆ ಪ್ರಜ್ವಲ್ ಸಿನಿಮಾ ರಿಲೀಸ್

ಡೈನಾಮಿಕ್ ಹೀರೋ ಪ್ರಜ್ವಲ್ ದೇವರಾಜ್ ನಟಿಸಿರುವ ಇನ್​ಸ್ಪೆಕ್ಟರ್​ ವಿಕ್ರಂ ಸಿನಿಮಾ ಫೆಬ್ರವರಿ 5ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಇದೇ ತಿಂಗಳು 26ರಂದು ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಿದೆ ಚಿತ್ರತಂಡ. ಈ ಸಿನಿಮಾದಲ್ಲಿ ದರ್ಶನ್ ಸ್ಪೆಷಲ್ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ತೆರೆಮೇಲೆ ಫೆ.19ರಿಂದ ‘ಪೊಗರಿ’ಸಂ

ಧ್ರುವ ಸರ್ಜಾ ಹಾಗೂ ನಂದಕಿಶೋರ್ ಕಾಂಬಿನೇಷನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಪೊಗರು. ಈಗಾಗ್ಲೇ ಸಾಕಷ್ಟು ಸದ್ದು ಮಾಡಿರುವ ಪೊಗರು ಫೆಬ್ರವರಿ 19ರಂದು ತೆರೆಮೇಲೆ ಅಬ್ಬರಿಸಲಿದೆ. ಕನ್ನಡ, ತೆಲುಗು ಭಾಷೆಯಲ್ಲಿ ಪೊಗರು ಬಿಡುಗಡೆಯಾಗುತ್ತಿದೆ.



ರಾರಾರಾ ರಾಬರ್ಟ್ ಮಾ.11ಕ್ಕೆ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಬಹು‌ನಿರೀಕ್ಷಿತ ಸಿನಿಮಾ ರಾಬರ್ಟ್. ಮೂರು ಶೇಡ್‌ನಲ್ಲಿ ಬಣ್ಣ ಹಚ್ಚಿರೋ ದಚ್ಚು ರಾಬರ್ಟ್ ಮಾರ್ಚ್ 11ಕ್ಕೆ ರಿಲೀಸ್ ಆಗ್ತಿದೆ. ಇನ್ನೂ ಸಿನಿಮಾಕ್ಕೆ‌ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಅಪ್ಪು ‘ಯುವರತ್ನ’ ಹವಾ ಎ.1ಕ್ಕೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಯುವರತ್ನ ಸಿನಿಮಾ ಎಪ್ರಿಲ್ 1ಕ್ಕೆ ಬಿಳ್ಳಿತೆರೆಗೆ ಎಂಟ್ರಿ‌ ಕೊಡ್ತಿದೆ. ಕನ್ನಡ ಜೊತೆ ತೆಲುಗು ಭಾಷೆಯಲ್ಲಿ ರೆಡಿಯಾಗಿರೋ ಸಿನಿಮಾದಲ್ಲಿ ಅಪ್ಪುಗೆ ಜೋಡಿಯಾಗಿ ಸಯೇಶ ನಟಿಸಿದ್ದಾರೆ. ಈ ಸಿನಿಮಾಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮಂಸ್ ಬಂಡವಾಳ ಹೂಡಿದೆ.

ಏ.15ರಿಂದ ತೆರೆಮೇಲೆ ಒಂಟಿ ‘ಸಲಗ’

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಿನಿಮಾ ಸಲಗ. ಟಗರು ಖ್ಯಾತಿಯ ಕೆ.ಪಿ.ಶ್ರೀಕಾಂತ್ ಬಂಡವಾಳ ಹೂಡಿರೋ‌ ಈ ಸಿನಿಮಾದಲ್ಲಿ ಡಾಲಿ ಧನಂಜಯ್, ಸಂಜನಾ ಆನಂದ್ ನಟಿಸಿದ್ದು, ಈಗಾಗ್ಲೇ ಟೀಸರ್ ಮೂಲಕ ಸಖತ್ ಸೌಂಡ್‌ ಮಾಡಿರುವ ಸಲಗ ಏಪ್ರಿಲ್ 15ರಿಂದ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಈ  ಬಗ್ಗೆ ಸಿನಿಮಾ ತಂಡ ಅಧಿಕೃತ ದಿನಾಂಕ ಪ್ರಕಟಿಸಿಲ್ಲ.

ಏ.29ಕ್ಕೆ ಕೋಟಿಗೊಬ್ಬ-3 ರಿಲೀಸ್..

ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಏಪ್ರಿಲ್ 29ರಂದು ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಸೂಪಪ್ಪ ಬಾಬು ಬಂಡವಾಳ ಹೂಡಿರುವ ಈ ಚಿತ್ರದ ರಿಲೀಸ್ ಡೇಟ್ ಅಧಿಕೃತ ಅನೌನ್ಸ್ ಆಗಿಲ್ಲ.

ಮೇ 14ಕ್ಕೆ ಶಿವಣ್ಣನ ಭಜರಂಗಿ-2 ರಿಲೀಸ್

ಎ.ಹರ್ಷ ಹಾಗೂ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾ ಮೇ 14ರಂದು ತೆರೆಗೆ ಬರಲಿದೆ. ಭಜರಂಗಿ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಈ ಜೋಡಿ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದ್ದು, ಸ್ಟಾರ್ ಹೀರೋ ಪಟ್ಟಿಯಲ್ಲಿ ಕೊನೆಯದಾಗಿ ಭಜರಂಗಿ-3 ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗ್ತಿದೆ.

ಒಟ್ನಲ್ಲಿ ಖಾಲಿ ಇದ್ದ ಥಿಯೇಟರ್ ಅಂಗದಲ್ಲಿ ಇನ್ಮುಂದೆ ಸಿನಿಮಾಗಳ ದರ್ಬಾರ್ ಶುರುವಾಗ್ತಿದೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ಹೀರೋ ಸಿನಿಮಾಗಳು ತೆರೆಗೆ ಬರುತ್ತಿದ್ದು, ಅಭಿಮಾನಿಗಳಿಗೆ ಸಿನಿಮೋತ್ಸವ ಶುರುವಾಗಿದೆ.

- Advertisement -

Latest Posts

Don't Miss