ಕಿರಿಕ್ ಪಾರ್ಟಿ ಮೂಲಕ ಮನೆಮಾತಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಸ್ಟಾರ್.. ಇವ್ರ ರೇಂಜೇ ಫುಲ್ ಚೇಂಜ್ ಆಗೋಗಿದೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.. ಇದ್ರ ನಡುವೆ ರಶ್ಮಿಕಾಗೆ ಬಹು ದೊಡ್ಡ ಜಾಕ್ಪಾಟ್ ಒಂದು ಹೊಡೆದಿದೆ..
ರಶ್ಮಿಕಾ ಮಂದಣ್ಣಗೆ ಗೀತಾ ಗೋವಿಂದಂ ಸಿನಿಮಾ ಬಳಿಕ ಅದೃಷ್ಟವೇ ಬದಲಾಗಿಹೋಯ್ತು.. ಯಜಮಾನ, ಪುಷ್ಪ, ವಾರಿಸು, ಸೇರಿ ಮಾಡಿದ್ದೆಲ್ಲವೂ ಬ್ಲಾಕ್ಬಸ್ಟರ್ ಸಿನಿಮಾಗಳೆ.. ಪುಷ್ಪಾದಲ್ಲಿ ಶ್ರೀವಲ್ಲಿ ಆಗಿ ಸೊಂಟ ಬಳುಕಿಸಿದ್ಮೇಲಂತೂ ವ್ಯಾಲ್ಯೂ ಇನ್ನೂ ಹೆಚ್ಚಾಗೇಹೋಗಿದೆ.. ಈಗ ಪುಷ್ಪ-2 ಸಿನಿಮಾ ಕ್ಯೂರಿಯಾಸಿಟಿ ಮೂಡಿಸಿದೆ.. ಈ ನಡುವೆ ಇನ್ನೂ ಸಾಲು ಸಾಲು ಚಿತ್ರಗಳಿಗೆ ಶ್ರೀವಲ್ಲಿ ಸೈನ್ ಹಾಕಿದ್ದಾಳೆ..
ಸದ್ಯ ರಶ್ಮಿಕಾ ಮಂದಣ್ಣ ಬರೋಬ್ಬರಿ 8 ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ. ಪುಷ್ಪಾ-2, ದಿ ಗರ್ಲ್ಫ್ರೆಂಡ್, ಕುಬೇರ, ಛವ, ರೈನ್ಬೋ, ಅನಿಮಲ್ ಪಾರ್ಕ್, ಎಂಪೈರ್ಸ್ ಆಫ್ ವಿಜಯನಗರ, ಸಿಕಂದರ್ ಸಿನಿಮಾದಲ್ಲೂ ರಶ್ಮಿಕಾ ನಟಿಸ್ತಿದ್ದಾಳೆ.. 8 ಸಾಲು ಸಾಲು ಚಿತ್ರಗಳನ್ನ ಕೈನಲ್ಲಿ ಹಿಡ್ಕೊಂಡಿರೋ ಶ್ರೀವಲ್ಲಿ ಈಗ ಫುಲ್ ಬ್ಯುಸಿ.. ಇನ್ನೂ 2-3 ವರ್ಷ ಶ್ರೀವಲ್ಲಿಯನ್ನ ಟಚ್ ಮಾಡೋಕೆ ಯಾರಿಗೂ ಆಗಲ್ಲ…