ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಆಪ್ತತೆ ಬಗ್ಗೆ ಎಲ್ಲರಿಗೂ ಗೊತ್ತಿರುವುದೇ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಹಾಗಂತ ಇವರು ಸುತ್ತಾಟ ಮಾಡೋದನ್ನು ನಿಲ್ಲಿಸಿಲ್ಲ. ಇವರ ಮಧ್ಯೆ ಪ್ರೀತಿ ಇದೆ ಎಂಬುದು ಜನರಿಗೆ ಸ್ಪಷ್ಟವಾಗುತ್ತಿದೆ. ಈಗ ಅಂಥದ್ದೇ ಘಟನೆ ಒಂದು ನಡೆದಿದೆ. ಇದರಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಈ ಮೊದಲು ಒಟ್ಟಾಗಿ ಅನೇಕ ಬಾರಿ ವಿದೇಶ ಪ್ರಯಾಣ ಮಾಡಿ ಬಂದ ಉದಾಹರಣೆ ಇದೆ. ಆದರೆ, ವಿಶೇಷ ಎಂದರೆ ಯಾವಾಗಲೂ ಅವರು ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ವಿದೇಶದಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿರೋ ಫೋಟೋ ವೈರಲ್ ಆಗಿಲ್ಲ. ಈಗ ವಿಜಯ್ ಹಾಗೂ ರಶ್ಮಿಕಾ ಅವರು ಅಮೆರಿಕದ ನ್ಯೂಯಾರ್ಕ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಮ್ಯಾನ್ಹಾಟನ್ ರಸ್ತೆಗಳಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ನಡೆದಿದ್ದಾರೆ. ಈ ವೇಳೆ ಅವರು ಕೈ ಕೈ ಹಿಡಿದುಕೊಂಡಿದ್ದರು. ಹಾಗಾದರೆ, ಇವರು ವಿದೇಶದಲ್ಲಿ ಕಾಣಿಸಿಕೊಂಡಿದ್ದು ಏಕೆ? ಅದಕ್ಕೂ ಉತ್ತರ ಇದೆ. ನ್ಯೂಯಾರ್ಕ್ನಲ್ಲಿ ನಡೆದ 43ನೇ ‘ಇಂಡಿಯನ್ ಡೇ ಪರೇಡ್’ಗೆ ಇಬ್ಬರೂ ಮುಖ್ಯ ಅತಿಥಿ ಆಗಿದ್ದರು. ಅಲ್ಲಿರುವ ಭಾರತೀಯರು ಇವರನ್ನು ಅತಿಥಿಯಾಗಿ ಕರೆಸಿದ್ದರು. ಈ ಫೋಟೋಗಳು ವೈರಲ್ ಆಗಿವೆ.
ರಶ್ಮಿಕಾ ಹಾಗೂ ವಿಜಯ್ ಜೋಡಿಯನ್ನು ಅನೇಕರು ಕೊಂಡಾಡಿದ್ದಾರೆ. ‘ವಿರಶ್’ ಈಸ್ ಬ್ಯಾಕ್ ಎಂದು ಕೆಲವರು ಹೇಳಿದ್ದಾರೆ. ವಿರಶ್ ಎಂದರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪದವನ್ನು ಶಾರ್ಟ್ ಆಗಿ ಹೇಳಿರುವುದು. ಇನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ‘ಗೀತ ಗೋವಿಂದಂ’ ಸಿನಿಮಾಗೆ 7 ವರ್ಷ ಆಗಿದ್ದನ್ನು ಸಂಭ್ರಮಿಸುತ್ತಿದ್ದಾರೆ. ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಗೀತ ಗೋವಿಂದಂ ಸಿನಿಮಾದ ಪೋಸ್ಟರ್ ಹಾಕಿ, ಸಂತಸ ಹೊರಹಾಕಿದ್ದರು. ಇವರ ಮಧ್ಯೆ ಇದೇ ಸೆಟ್ನಲ್ಲಿ ಪ್ರೀತಿ ಮೂಡಿತು ಎಂದು ಹೇಳಲಾಗುತ್ತಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ