Wednesday, February 5, 2025

Latest Posts

ಇಂದಿನ ರಾಶಿ ಫಲ

- Advertisement -

ಮೇಷ: ಆರ್ಥಿಕವಾಗಿ ನಿಮ್ಮ ಜವಾಬ್ದಾರಿಯನ್ನ ವಹಿಸಿಕೊಂಡಲ್ಲಿ, ಪರಿಸ್ಥಿತಿ ಸುಧಾರಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಬೆಂಬಲಿಸಲಿದ್ದಾರೆ. ಸಾಂಸಾರಿಕವಾಗಿ ಸಮಾಧಾನವಿರುವುದು, ಆರೋಗ್ಯ ಜಾಗೃತೆ.

ವೃಷಭ: ಶ್ರೀ ದೇವತಾಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳು ಮುನ್ನಡೆಯಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು, ಕಂಕಣಬಲಕ್ಕೆ ಪೂರಕವಾಗಲಿದೆ. ಆರ್ಥಿಕವಾಗಿ ನೆಮ್ಮದಿ, ಚೇತರಿಕೆಯ ದಿನಗಳಿವು.

ಮಿಥುನ: ಸಾಂಸಾರಿಕ ಭಿನಾಭಿಪ್ರಾಯಗಳಿಂದ ಕಲಹ ತೋರಿಬರುವುದು. ನಿಮ್ಮ ಕೆಲಸ ಕಾರ್ಯಗಳು ಅಡೆತಡೆಯಿಂದಲೇ ಮುನ್ನಡೆಯಲಿದೆ. ಮಾನಸಿಕವಾಗಿ ಚಂಚಲತೆಯು ಕಾಡಲಿದೆ. ಬಂಧುಗಳ ಆಗಮನವಾಗಲಿದೆ.

ಕರ್ಕ: ಚಿಂತಿತ ಶುಭಮಂಗಲ ಕಾರ್ಯವು ಸದ್ಯದಲ್ಲೇ ನೆರವೇರಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಮ್ಮ ಪರ ಫಲ ನೀಡಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಾರು. ಆರ್ಥಿಕ ಹಿನ್ನಡೆ ಉಂಟಾಗಲಿದೆ.

ಸಿಂಹ: ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಸಾಂಸಾರಿಕ ಸುಖವು ಉತ್ತಮವಿದ್ದರೂ ಗೊಂದಲಗಳೇ ಅಧಿಕವಾದಾವೂ. ಧೃಡ ನಿರ್ಧಾರವು ನಿಮ್ಮ ಕಾರ್ಯವನ್ನು ಮುನ್ನಡೆಸಲಿದೆ.

ಕನ್ಯಾ: ಮನೆಯಲ್ಲಿ ಹಿರಿಯರ ಆಗಮನವಿರುತ್ತದೆ. ಆರ್ಥಿಕವಾದ ಸಂಪನ್ಮೂಲಗಳನ್ನು ಸರಿಯಾಗಿಟ್ಟುಕೊಳ್ಳಿರಿ. ಅನಾವಶ್ಯಕವಾಗಿ ಹೆಚ್ಚಿನ ಆತ್ಮವಿಶ್ವಾಸ ಉತ್ತಮವಲ್ಲ. ದೈಹಿಕವಾಗಿ ಹೆಚ್ಚಿನ ಗಮನ ಹರಿಸುವುದು ಮುಖ್ಯ.

ತುಲಾ: ವಾಹನ ಸಂಚಾರದಲ್ಲಿ ಜಾಗೃತೆ ವಹಿಸುವುದು ಅಗತ್ಯವಿದೆ. ಒಂದಲ್ಲಾ ಒಂದು ರೀತಿಯಲ್ಲಿ ಆರ್ಥಿಕವಾಗಿ ಖರ್ಚುಗಳೇ ಅಧಿಕವಾದಾವೂ. ಮನೆಯಲ್ಲಿ ಒಂಟಿತನ ಅನುಭವವಾದೀತು. ಸಂಚಾರದಲ್ಲಿ ಗಮನವಿರಲಿ.

ವೃಷ್ಚಿಕ : ಚಿಂತಿತ ಕೆಲಸ ಕಾರ್ಯಗಳು ಒಂದೊಂದಾಗಿ ನೆರವೇರಲಿದೆ. ಯೋಗ್ಯ ವಯಸ್ಕರು ಸದ್ಯದರಲ್ಲೇ ಕಂಕಣಬಲವನ್ನು ಹೊಂದಲಿದ್ದಾರೆ. ಮಿತ್ರರೊಂದಿಗೆ ಅನಾವಶ್ಯಕ ಕಲಹಕ್ಕೆ ಕಾರಣರಾಗದಿರಿ. ವಾಹನ ಖರೀದಿ ಯೋಗವಿದೆ.

ಧನು: ಸಾಂಸಾರಿಕ ಸುಖ ಉತ್ತಮವಿದ್ದು, ಶಾಂತಿ ಸಮಾಧಾನವು ಸಿಗಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳು ಬಂದಾವು. ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಚಾಲನೆಯಲ್ಲಿ ಜಾಗೃತೆ.

ಮಕರ : ನಿಮ್ಮ ಸ್ವಪ್ರಯತ್ನ ಬಲವೇ ನಿಮಗೆ ಮುನ್ನಡೆ ತಂದಿತು. ಎಷ್ಟೋ ಕೆಲಸ ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆದಾವು. ಸಾಂಸಾರಿಕವಾಗಿ ಬಂಧು ಬಳಗದವರ ಸಹಕಾರ ಸಿಗಲಿದೆ. ಉದರ ಸಂಬಂಧಿ ಬಗ್ಗೆ ಜಾಗೃತೆ ಇರಲಿ.

ಕುಂಭ: ಪಂಚಮದಿಂದ ರಾಹುವಿನಿಂದ ಮಾನಸ್ಥಿಕ ಸ್ಥಿತಿ ಅಲ್ಲೋಕ ಕಲ್ಲೋಲವಾದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾಗುತ್ತದೆ. ದೈಹಿಕ ಆರೋಗ್ಯ ಏನುಪೇರಾಗದಂತೆ ಗಮನವಿರಲಿ. ದಾಯಾದಿಗಳಿಂದ ಕಿರುಕುಳವಿದೆ.

ಮೀನ: ನಿಮ್ಮ ಧೃಡ ನಿರ್ಧಾರಗಳೇ ನಿಮ್ಮನ್ನು ಕಾಪಾಡಲಿದೆ. ಸಾಂಸಾರಿಕವಾಗಿ ಸಂತಸದ ದಿನಗಳಿವು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಉತ್ತಮ ಫಲವನ್ನ ಹೊಂದಲಿದ್ದಾರೆ. ಮಹಿಳೆಯರಿಗೆ ಚಿಂತೆ ಕಾಡಲಿದೆ.

ಪ್ರಖ್ಯಾತ ಜ್ಯೋತಿಷ್ಯರು
ಪಂಡಿತ್ ಕೆ.ಎಂ.ರಾವ್
ಆರ್‌ಪಿಸಿ ಲೇಔಟ್ ಬಸ್ ನಿಲ್ದಾಣದ ಹತ್ತಿರ, ಹಂಪಿ ನಗರ, ವಿಜಯನಗರ, ಬೆಂಗಳೂರು
Phone number: 99029 83444/ 98458 11194

- Advertisement -

Latest Posts

Don't Miss