Friday, July 4, 2025

Latest Posts

RSS ಅಂದ್ರೆ ಏನು..? ಏನಿದರ ಉದ್ದೇಶ..?

- Advertisement -

ಬರಹ – ರಾಜೇಶ್ ವಿ ಬೆಸಗರಹಳ್ಳಿ, RSS ಸ್ವಯಂ ಸೇವಕ

“ಸ್ವಯಂ ಸೇವಕ” ಬಹುತೇಕರು ಈ ಶಬ್ಧವನ್ನು ಕೇಳಿರದೆ ಇರಲಾರರು. 1925 ರ ವಿಜಯ ದಶಮಿಯಂದು ಡಾ ಕೇಶವ ಬಲಿರಾಮಪಂಥ ಹೆಡಿಗೆವಾರ’ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಸ್ಥಾಪನೆಯಾದಾಗಿನಿಂದ ಈ ಶಬ್ಧ ಪ್ರಚಲಿತದಲ್ಲಿದೆ. ಇಂದಿಗೆ ಸರಿಸುಮಾರು 94 ವರ್ಷದ ಹರೆಯದ ಪ್ರಾಯ ಸ್ವಯಂಸೇವಕ ಶಬ್ಧಕ್ಕೆ.

ಸ್ವಯಂ ಸೇವಕ ಶಬ್ಧಕ್ಕೆ ಅರ್ಥ ಕೊಡುವ ನನ್ನ ಸಣ್ಣ ಪ್ರಯತ್ನ…
ಸ್ವಯಂ = ಸ್ವಪ್ರೇರಣೆಯಿಂದ
ಸೇವಕ = ಸೇವೆಯ ಗೈಯ್ಯುವವ ಎಂದರ್ಥ.
ಒಟ್ಟಾರೆಯಾಗಿ ಸ್ವಪ್ರೇರಣೆಯಿಂದ ಯಾವುದೇ ಪಲಾಪೇಕ್ಷೆ ಬಯಸದೇ ಸಮಾಜದ ಮತ್ತು ದೇಶದ ಹಿತವನ್ನು ಬಯಸುತ್ತ ಸೇವೆಯ ಮಾಡುವವ ಸ್ವಯಂಸೇವಕ.

ಸ್ವಯಂಸೇವಕ ಒಳಗೊಂಡಿರುವ ಕೆಲವೊಂದಿಷ್ಟು ಮಹತ್ವಪೂರ್ಣ ಅಂಶಗಳು ಇಲ್ಲಿವೆ…

ದೇಶ ಮತ್ತು ಸಮಾಜ ಸೇವಕ :

ಯಾವುದೇ ಸ್ವಹಿತಾಸಕ್ತಿಯ ಪಲಾಪೇಕ್ಷೆ ಬಯಸದೇ, ಯಾರದೋ ಒತ್ತಡದ ಪ್ರೇರಣೆಯಿಂದ ಕೆಲಸ ಮಾಡದೇ ಸಮಾಜ ಮತ್ತು ದೇಶದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವವನು ಸ್ವಯಂಸೇವಕ.

ಸಂಸ್ಕಾರಗಳ ಆಗರ :

ಜಗತ್ತಿನ ಯಾವುದೇ ವಿಶ್ವವಿಧ್ಯಾಲಯಗಳು ನೀಡದ ನೈತಿಕ ಶಿಕ್ಷಣ, ಸಾಮಾಜಿಕ ಬಧ್ದತೆ, ಪ್ರಾಮಾಣಿಕಥೆ, ನಿಸ್ವಾರ್ಥ ಮನೋಭಾವ ಹೀಗೆ ಎಲ್ಲ ಸಂಸ್ಕಾರವನ್ನು ಸಂಘವೂ ಸ್ವಯಂ ಸೇವಕನಿಗೆ ನೀಡಿರುತ್ತದೆ ಹಾಗಾಗಿ ಅವನೊಬ್ಬ ಸಂಸ್ಕಾರಗಳ ಕೇಂದ್ರಬಿಂದು.

ಪ್ರಾಮಾಣಿಕಥೆ :

ಎಂತದ್ದೆ ಸನ್ನಿವೇಶ ಏದುರಾದರೂ ಸತ್ಯದ ಪರವಾಗಿಯೇ ಇದ್ದು ನ್ಯಾಯಯುತವಾಗಿ ನಡೆದುಕೊಳ್ಳುವುದು ಸ್ವಯಂಸೇವಕನ ಕರ್ತವ್ಯ.

ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ :

ತಾನು ಇರುವ ಕರ್ತವ್ಯದ ಪರೀದಿಯಲ್ಲಿಯೇ ಸಮಯವನ್ನು ಹೊಂದಿಸಿಕೊಂಡು ಸ್ವಧರ್ಮ, ಸ್ವದೇಶ, ಮತ್ತು ಸಮಾಜಕ್ಕಾಗಿ ಕಾರ್ಯನಿರ್ವಹಿಸುವ ಖ್ಯಾತಿ ಪಡೆದವನು ಸ್ವಯಂಸೇವಕ.

ಹಿಂದೂ ಧರ್ಮ ರಕ್ಷಕ :

ಸ್ವಯಂ ಸೇವಕ ಎಲ್ಲ ಧರ್ಮವನ್ನು ಗೌರವದಿಂದ ಕಾಣುವ ಗುಣವುಳ್ಳವನಾಗಿದ್ದು ಇತರರಿಂದ ಹಿಂದೂ ಧರ್ಮಕ್ಕೆ ದಕ್ಕೆಯಾದರೆ ಸಿಡಿದೆದ್ದು ತನ್ನ ಮಾತೃಧರ್ಮವನ್ನು ಕಾಪಾಡಲು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಹಾಗಾಗಿ ಹಿಂದುತ್ವದ ಮುಖವಾಣಿಯಂತೆ ಸ್ವಯಂಸೇವಕ ಗೋಚರಿಸುತ್ತಾನೆ.

ರಾಷ್ಟ್ರೀಯವಾದಿ :

ಸ್ವಯಂಸೇವಕನಿಗೆ ರಾಷ್ಟ್ರವೇ ಮೊದಲು, ಮಿಕ್ಕಿದ್ದೆಲ್ಲಾ ಆಮೇಲೆ. ರಾಷ್ಟ್ರೀಯವಾದವೇ ಸ್ವಯಂಸೇವಕನ ಸಿದ್ದಾಂತ. ರಾಷ್ಟ್ರದ ಭದ್ರತೆಯ ವಿಷಯ ಬಂದರೆ ಯಾವುದೇ ವಿಷಯದಲ್ಲೂ ರಾಜೀಯಾಗದೆ ಪ್ರಾಣದ ಹಂಗು ತೊರೆದು ಹೋರಾಡುವ ಗುಣವುಳ್ಳವನಾಗಿರುತ್ತಾನೆ.

ಆಪಧ್ಬಾಂಧವ :

ನೆರೆಹಾವಳಿ, ಪ್ರಕೃತಿ ವಿಕೋಪಗಳು, ಭೂಕಂಪಗಳಾದಾಗ ಯಾರದೇ ಆಜ್ಞೆಗಾಗಿ ಕಾಯದೇ ಸ್ವಇಚ್ಚೆಯಿಂದ ಹಾಣಿಗೊಳಗಾದ ಸ್ಥಳಕ್ಕೆ ಧಾವಿಸಿ ಜನರ ಪ್ರಾಣ ಆಸ್ತಿಪಾಸ್ತಿಯನ್ನು ರಕ್ಷಣೆ ಮಾಡುವನು.

ನಾಯಕತ್ವದ ಗುಣ :

ಸಂಘದಲ್ಲಿ ಒಬ್ಬ ಸ್ವಯಂಸೇವಕನಿಗೆ ಕೇವಲ ದೈಹಿಕವಾಗಿ ಅಷ್ಟೇ ಅಲ್ಲದೇ ಮಾನಸಿಕವಾಗಿಯೂ ಬಲಿಷ್ಟನಾಗಲು ಎಲ್ಲ ರೀತಿಯ ಶಿಕ್ಷಣವನ್ನು ಕೊಡಲಾಗಿರುತ್ತದೆ. ಒಂದು ಶಾಖೆಯ ಮುಖ್ಯ ಶಿಕ್ಷಕನಾಗಿ ಮೂರ್ನಾಲ್ಕು ವರ್ಷಗಳ ಕಾಲ ಅವನು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದೇ ಆದಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಲು ಇರುವಂತಹ ಎಲ್ಲ ಗುಣಗಳು ಅವನಲ್ಲಿ ಇರುತ್ತವೆ. ಇದು ಸಂಘದ ಶಿಕ್ಷಣದ ರೀತಿ.

ಅನುಶಾಸನ:

ಒಂದು ಕೆಲಸಕ್ಕೆ ಇಂತದ್ದೆ ಸಮಯವೆಂದು ನಿಗದಿಪಡಿಸಿ ಸೂಚನೆ ನೀಡಿದ್ದಲ್ಲಿ ಚಾಚುತಪ್ಪದೇ ಪಾಲಿಸಿ ಎಂತದ್ದೆ ಸಂದರ್ಭದಲ್ಲಿಯೂ ಸಮಯಕ್ಕೆ ಸರಿಯಾಗಿ ಉಪಸ್ಥಿತಿ ಇದ್ದು ವಹಿಸಿದ ಜವಾಬ್ಧಾರಿಯನ್ನು ಕಟ್ಟುನಿಟ್ಟಾಗಿ ಸರಿಯಾದ ಸಮಯಕ್ಕೆ ನಿರ್ವಹಿಸುವವ ಸ್ವಯಂ ಸೇವಕ.

ಹೇಳುತ್ತ ಹೊರಟರೆ ಇನ್ನೂ ಅನೇಕಾನೇಕ ಸಂಗತಿಗಳು ಕಾಣಸಿಗುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಒಂದು ಪರಿಪೂರ್ಣ ವ್ಯಕ್ತಿತ್ವ ಸ್ವಯಂಸೇವಕ.

ಬರಹ : ರಾಜೇಶ್ ವಿ ಬೆಸಗರಹಳ್ಳಿ, RSS ಸ್ವಯಂಸೇವಕ

- Advertisement -

Latest Posts

Don't Miss